AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಮೂರು ದಿನಗಳಲ್ಲಿ 16 ಲಕ್ಷಕ್ಕೂ ಹೆಚ್ಚು ರೂ ದಂಡ

ಜನವರಿ 29 ರಿಂದ ಜ.31ರ ವರೆಗೆ ಮೂರು ದಿನಗಳ ಕಾಲ ಬೆಂಗಳೂರು ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮೂರು ದಿನದಲ್ಲಿ ಒಟ್ಟು 16,91,300ರೂ ನಷ್ಟು ದಂಡ ವಿಧಿಸಿದ್ದಾರೆ. ನಿಯಮ ಉಲ್ಲಂಘಿಸಿದ ಆಟೋ, ಟ್ರ್ಯಾಕ್ಟರ್, ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. ಜ.29ರಂದು ಒಟ್ಟು 2 ಸಾವಿರ ಪ್ರಕರಣಗಳು ದಾಖಲಾಗಿದ್ದು ಒಟ್ಟು 9,85,000 ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರು ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಮೂರು ದಿನಗಳಲ್ಲಿ 16 ಲಕ್ಷಕ್ಕೂ ಹೆಚ್ಚು ರೂ ದಂಡ
ಬೆಂಗಳೂರು ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ
Jagadisha B
| Updated By: ಆಯೇಷಾ ಬಾನು|

Updated on: Feb 01, 2024 | 12:29 PM

Share

ಬೆಂಗಳೂರು, ಫೆ.01: ನಗರದಾದ್ಯಂತ ಸಂಚಾರಿ ಪೊಲೀಸರು (Bengaluru Traffic Police) ಸಾಲು ಸಾಲು ಸ್ಪೆಷಲ್ ಡ್ರೈವ್​ಗಳನ್ನು ಕೈಗೊಳ್ಳುತ್ತ ಲಕ್ಷಾಂತರ ರೂ ದಂಡ ವಸೂಲಿಗೆ ಇಳಿದಿದ್ದಾರೆ. ಜನವರಿ 26ರಂದು ಶಾಲಾ-ಕಾಲೇಜುಗಳ ಸುತ್ತಮುತ್ತ ನಿಯಮ ಉಲ್ಲಂಘಿಸಿದವರಿಗೆ ದಂಡದ (Fine) ಬಿಸಿ ಮುಟ್ಟಿಸಿದ್ದಾರೆ. ಹಾಗೂ ಜನವರಿ 30ರಂದು ನಿಯಮ ಉಲ್ಲಂಘಿಸಿದ ಟ್ರ್ಯಾಕ್ಟರ್​ಗಳ ವಿರುದ್ಧ, ಜನವರಿ 31ರಂದು ನಿಯಮ ಉಲ್ಲಂಘಿಸಿದ ಆಟೋಗಳ ವಿರುದ್ಧ ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಚಾರಿ ಪೊಲೀಸರು ಮೂರು ದಿನದಲ್ಲಿ ಒಟ್ಟು 16,91,300ರೂ ನಷ್ಟು ದಂಡ ವಿಧಿಸಿದ್ದಾರೆ.

ಕಳೆದ ಮೂರು ದಿನದಿಂದ ಸಂಚಾರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು ದಂಡ ವಿಧಿಸುತ್ತಿದ್ದಾರೆ. ಜ.29ರಂದು ಶಾಲಾ-ಕಾಲೇಜು ಸುತ್ತಮುತ್ತ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ನಗರದ ವಿವಿಧ ಕಡೆಗಳಿಂದ ಒಟ್ಟು 2 ಸಾವಿರ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ದ ಒಟ್ಟು 9,85,000 ದಂಡ ವಸೂಲಿ ಮಾಡಲಾಗಿದೆ.

ಜ.29ರಂದು ವಸೂಲಿಯಾದ ದಂಡ

  • ಹೆಲ್ಮೆಟ್ ರಹಿತ ಸವಾರಿಯ 132 ಪ್ರಕರಣ ಸಂಬಂಧ 64,800 ರೂ ದಂಡ ವಸೂಲಿಯಾಗಿದೆ.
  • ಟ್ರಿಪೆಲ್ ರೈಡಿಂಗ್ ನ 375 ಪ್ರಕರಣ ಸಂಬಂಧ 1,84,100 ರೂ ದಂಡ.
  • ನೋ ಎಂಟ್ರಿ ಉಲ್ಲಂಘನೆಯ 27 ಪ್ರಕರಣ ಸಂಬಂಧ 13,500 ರೂ ದಂಡ.
  • ಫುಟ್ ಪಾತ್ ನಲ್ಲಿ ಸವಾರಿ ಸಂಬಂಧ 1,466 ಪ್ರಕರಣ ದಾಖಲಿಸಿ 7,22,600 ರೂ ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: ಬನ್ನೇರುಘಟ್ಟ ಪಾರ್ಕ್​​ನಲ್ಲಿ ಅವಘಡ.. ಬ್ಯಾಟರಿಚಾಲಿತ ವಾಹನಕ್ಕೆ ಸಿಲುಕಿದ ಪುಟ್ಟ ಬಾಲಕ

ಜ.30ರಂದು ನೀರಿನ ಟ್ಯಾಂಕರ್​ಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದ್ದು ನಗರದಾದ್ಯಂತ ವಿವಿಧ ಕಡೆಗಳಲ್ಲಿ 595 ಪ್ರಕರಣ ದಾಖಲಿಸಲಾಗಿದೆ. ಸಂಚಾರಿ ಪೊಲೀಸರು ಬರೋಬ್ಬರಿ 3,33,500 ರೂ ದಂಡ ವಿಧಿಸಿದ್ದಾರೆ.

ಜ.30ರಂದು ಹಾಕಲಾದ ದಂಡ

  • ಸಮವಸ್ತ್ರ ಧರಿಸದೇ ಚಾಲನೆಯ 252 ಪ್ರಕರಣ ಸಂಬಂಧ 1,26,000ರೂ ದಂಡ
  • ಸೀಟ್ ಬೆಲ್ಟ್ ಹಾಕದೇ ಇರುವ 40 ಪ್ರಕರಣ ಸಂಬಂಧ 20,000 ರೂ ದಂಡ
  • ನೋ ಎಂಟ್ರಿಯ 134 ಪ್ರಕರಣ ಸಂಬಂಧ 67,000 ರೂ ದಂಡ
  • ದೋಷಪೂರಿತ ನಂಬರ್ ಪ್ಲೇಟ್ ಬಳಕೆ ಹಿನ್ನಲೆ 48 ಪ್ರಕರಣ ಸಂಬಂಧ 24 ಸಾವಿರ ರೂ ದಂಡ
  • ಲೇನ್ ಶಿಸ್ತು ಉಲ್ಲಂಘನೆಯ 6 ಪ್ರಕರಣ ಸಂಬಂಧ 3,000 ರೂ ದಂಡ.
  • ನೋ ಪಾರ್ಕಿಂಗ್ ನ 64 ಪ್ರಕರಣ ಸಂಬಂಧ 64,000 ರೂ ದಂಡ.
  • ಫುಟ್ ಪಾತ್​ ಬಳಿ  ಪಾರ್ಕಿಂಗ್ ನ 4 ಪ್ರಕರಣ ಸಂಬಂಧ 4,000 ರೂ ದಂಡ.
  • ಕರ್ಕಶ ಹಾರ್ನ್ ಹಿನ್ನಲೆ 13 ಪ್ರಕರಣ ಸಂಬಂಧ 6,500 ರೂ ದಂಡ.
  • ಮಧ್ಯಪಾನ ಮಾಡಿ ವಾಹನ ಚಲಾಯಿಸಿದ ಒಂದು ವಾಹನದ ಮೇಲೆ ಕ್ರಮಕೈಗೊಂಡಿದ್ದು, ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಾಗಿದೆ.
  • ಇತರೆ 33 ಕೇಸ್ ಗಳು ದಾಖಲಾಗಿದ್ದು, ಈ ಸಂಬಂಧ 19,000ರೂ ದಂಡ ವಿಧಿಸಲಾಗಿದೆ.

ಜ.31ರಂದು ಆಟೋ ಚಾಲಕರ ವಿರುದ್ಧ ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಕೈಗೊಂಡಿದ್ದು ನಗರದ ವಿವಿಧೆಡೆ ಒಟ್ಟು 1,226 ಕೇಸ್ ದಾಖಲಿಸಿ 6,35,200 ರೂ ದಂಡ ವಿಧಿಸಿದ್ದಾರೆ.

ಜ.31ರಂದು ಹಾಕಲಾದ ದಂಡದ ವಿವರ

  • ಕರೆದಲ್ಲಿಗೆ ಹೋಗಲು ನಿರಾಕರೆಣೆ ಹಿನ್ನಲೆ 336 ಪ್ರಕರಣಗಳ ದಾಖಲಿಸಿ 1,68,000ರೂ ದಂಡ.
  • ನೋ ಎಂಟ್ರಿ ಹಾಗೂ ಒನ್ ವೇ ರೂಲ್ಸ್ ಉಲ್ಲಂಘನೆಯ 357 ಪ್ರಕರಣ ಸಂಬಂಧ 1,78,500 ರೂ ದಂಡ.
  • ಮಧ್ಯಪಾನ ಮಾಡಿ ಆಟೋ ಚಲಾಯಿಸಿದ ಹಿನ್ನಲೆ ಒಂದು ಆಟೋ ವಿರುದ್ಧ ಕ್ರಮಕೈಗೊಂಡು ಕೋರ್ಟ್ ನಲ್ಲಿ ದಂಡ ಪಾವತಿಗೆ ಸೂಚನೆ.
  • ಇತರೆ 234 ಪ್ರಕರಣ ಸಂಬಂಧ 1,39,200 ರೂ ದಂಡ ವಿಧಿಸಲಾಗಿದೆ.ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್