ಬೆಂಗಳೂರು, ಅಕ್ಟೋಬರ್ 30: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಇಂದು (ಅಕ್ಟೋಬರ್ 30) ವಿದ್ಯುತ್ ಕಡಿತ ಇರಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ ತಿಳಿಸಿದೆ. ಈ ಕುರಿತು ಬೆಸ್ಕಾಂ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಳ್ಳಲಾಗಿದೆ. ದುರಸ್ತಿ, ನಿರ್ವಹಣೆ ಇತ್ಯಾದಿ ಕಾರಣಗಳಿಂದ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಬೆಸ್ಕಾಂ ತಿಳಿಸಿದೆ.
ಕೆಪಿಟಿಸಿಎಲ್ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್ನಲ್ಲಿ ತುರ್ತುನಿರ್ವಹಣಾ ಕೆಲಸ ಇರುವುದರಿಂದ ನಗರದ ಕೆಲವು ಸ್ಥಳಗಳಲ್ಲಿ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಹಳೇಹಳ್ಳಿ, ಮಾರ್ಗೊಂಡನಹಳ್ಳಿ, ಗವಿಗುಡಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್, ವಿದ್ಯಾನಗರ, ಕೆಆರ್‌ಸಿಟಿ ಬಸ್ ನಿಲ್ದಾಣ, ಬೈರತಿ, ಗುಬ್ಬಿ ಅಡ್ಡರಸ್ತೆ, ಬೈರತಿ ಬಂಡೆ, ಕ್ಯಾಲಸನಹಳ್ಳಿ, ಪೂರ್ವಾಂಕರ ಆಪಾರ್ಟ್ ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3.30 ರವರೆಗೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅನಾನುಕೂಲಕ್ಕಾಗಿ ವಿಷಾದಿಸಲಾಗುತ್ತಿದೆ ಎಂದು ಬೆಸ್ಕಾಂ ಹೇಳಿದೆ.
ಇದನ್ನೂ ಓದಿ: ಬಿಜೆಪಿ ಶಾಸಕರಿರುವ ಜಯನಗರ ಕ್ಷೇತ್ರಕ್ಕೆ ಅನುದಾನ ಕೊಡದಿರುವುದಕ್ಕೆ ಕಾರಣ ಕೊಟ್ಟ ಡಿಕೆಶಿ
ಅಕ್ಟೋಬರ್ 29ರಂದು ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ವಿದ್ಯುತ್ ಕಡಿತ ಮಾಡಲಾಗಿತ್ತು. ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆವಿ ಚಿತ್ರದುರ್ಗದಲ್ಲಿ ಕೇಬಲ್ ಡಕ್ಟ್ ಮತ್ತು ಕೇಬಲ್ ಮರು ವ್ಯವಸ್ಥೆಯ ರಚನೆ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಪವರ್ ಕಟ್ ಮಾಡಲಾಗಿತ್ತು. ಚಿತ್ರದುರ್ಗ, ಪಂಡರಹಳ್ಳಿ, ಹಿರೆಗುಂಟನೂರು, ವಿಜಾಪುರ, ಭರಮಸಾಗರ, ಸಿರಿಗೆರೆ, ಮಾಡನಾಯಕನಹಳ್ಳಿ, ತುರುವನೂರು, ಎಚ್.ಡಿ.ಪುರ, ಚಿತ್ರಹಳ್ಳಿ, ಬಾಲೇನಹಳ್ಳಿ, ಹೊಳಲ್ಕೆರೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕಡೆಗಳಲ್ಲಿ ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ