ದೀಪಾವಳಿಗೂ ಮುನ್ನವೇ ಪಟಾಕಿ ಕೇಸ್ ದಾಖಲು: ಮಿಂಟೋ ಆಸ್ಪತ್ರೆ ಅಲರ್ಟ್..!
ನಾಡಿನಾದ್ಯಂತ ದೀಪಾವಳಿ ಎಂದರೆ ಬೆಳಕಿನ ಸಂಭ್ರಮ. ಈ ದೀಪಾವಳಿಗೆ ಮತ್ತಷ್ಟು ಮೆರುಗು ಬರುವುದು ಕಗ್ಗತ್ತಲಲ್ಲಿ ಸಿಡಿಸುವ ಪಟಾಕಿಗಳಿಂದ. ಪಟಾಕಿಗಳೆಂದರೆ ಬಣ್ಣ ಬಣ್ಣದ ಬೆಂಕಿಯ ಚಿತ್ತಾರಗಳನ್ನು ನೋಡಿ ಖುಷಿ ಪಡುವುದು. ಆದರೆ, ಪಟಾಕಿ ಎಂದರೆ ಎಷ್ಟು ಖುಷಿಯೋ ಅಷ್ಟೇ ಆತಂಕ ಕೂಡ. ಪಟಾಕಿ ಸಿಡಿಸಿ ದುರಂತಗಳನ್ನು ಮೈಮೇಲೆ ಎಳೆದುಕೊಂಡವರಿದ್ದಾರೆ. ಹೀಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಯು ಪಟಾಕಿ ಸಿಡಿತದ ಚಿಕಿತ್ಸೆಗೆ ಪ್ರತ್ಯಕ ವಾರ್ಡ್ ಮೀಸಲಿಟ್ಟಿದೆ.

ಬೆಂಗಳೂರು, (ಅಕ್ಟೋಬರ್ 29): ದೀಪಾವಳಿ ಹಬ್ಬದ ಹಿನ್ನೆಲೆ ನಗರದ ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದ ಚಿಕಿತ್ಸೆಗೆ ಸಿದ್ಧತೆ ಶುರುವಾಗಿದೆ ದೀಪಾವಳಿ ಹಬ್ಬ ಬಂದ್ರೆ ಹಬ್ಬದ ಸಂಭ್ರಮದ ಜೊತೆಗೆ ನಗರದಲ್ಲಿ ಕಣ್ಣಿನ ಸಮಸ್ಯೆಗಳು ಪಟಾಕಿ ಹೊಡೆದಿಂದ ಮಕ್ಕಳ ಕಣ್ಣಿನ ಸಮಸ್ಯೆಗಳ ಸಂಖ್ಯೆಯೇ ಹೆಚ್ಚಾಗಿ ಇರುತ್ತೆ. ಹೀಗಾಗಿ ಈ ಬಾರಿ ಹೊಸದಾಗಿ ವಾರ್ಡ್‌ಗಳ ಬದಲು ಪ್ರತ್ಯೇಕ ಬ್ಲಾಕ್ ಮಾಡಿದೆ ಮಿಂಟೋ , ಜೊತೆಗೆ ಕೇವಲ ಕಣ್ಣು ಮಾತ್ರವಲ್ಲ ಪಟಾಕಿಯಿಂದ ಸುಟ್ಟು ಗಾಯವಾದ್ರೆ ವಿಕ್ಟೋರಿಯಾದಲ್ಲಿ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಮಾಡಿಸುವಂತೆ ಯೋಜನೆ ಮಾಡಿಕೊಂಡಿದೆ. ವಿಕ್ಟೋರಿಯಾದಲ್ಲಿಯೂ ಒಂದು ವಾರ್ಡ್ ಪ್ರತ್ಯೇಕವಾಗಿ ಮೀಸಲು ಇಡಲಾಗಿದೆ..
ದೀಪಾವಳಿಗೂ ಮುನ್ನವೇ ಪಟಾಕಿ ಕೇಸ್ ದಾಖಲು
ಬೆಳಕಿನ ಹಬ್ಬ ದೀಪಾವಳಿಗೂ ಮುನ್ನವೇ ಮೊದಲ ಕಣ್ಣಿನ ಪ್ರಕರಣ ದಾಖಲಾಗಿದೆ. ನಾಡಿನಾದ್ಯಂತ ಹಬ್ಬದ ಸಂಭ್ರಮದ ನಡುವೆ ಪಟಾಕಿ ಕೇಸ್ ದಾಖಲಾಗಿದೆ ಬೆಂಗಳೂರಿನ ಕಮ್ಮನಹಳ್ಳಿಯ 18 ವರ್ಷದ ಹುಡಗನಿಗೆ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿ ಮಿಂಟೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.. ಇನ್ನು ಪಟಾಕಿ ಕೇಸ್ ಬರ್ತಿದಂತೆ ಮಿಂಟೋ ಆಸ್ಪತ್ರೆ ಅಲರ್ಟ್ ಆಗಿದೆ. ಮಕ್ಕಳ ಪಟಾಕಿ ಪ್ರಕರಣ ಎದುರಿಸಲು ಪ್ರತ್ಯೇಕ ಬೆಡ್ ಸಿದ್ಧತೆ ಮಾಡಿದೆ. ಯುವಕರಿಗೆ 7 ಬೆಡ್, ಮಹಿಳೆಯರಿಗೆ 7 ಬೆಡ್ ಸೇರಿದಂತೆ ಒಟ್ಟು 25ಕ್ಕೂ ಹೆಚ್ಚು ಬೆಡ್ ಗಳನ್ನ ಮೀಸಲಿರಿಸಿದೆ.
ಇದನ್ನೂ ಓದಿ: ದೀಪಾವಳಿ: ಪಟಾಕಿ ಹೇಗೆ, ಎಲ್ಲಿ ಸಿಡಿಸಬೇಕು? ಕಣ್ಣಿಗೆ ಗಾಯವಾದ್ರೆ ಏನು ಮಾಡ್ಬೇಕು?
ತುರ್ತು ಎಮೆರ್ಜೆನ್ಸಿಗೆ ಸರ್ಜರಿಗೆ ಬೇಕಾದ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಔಷಧಿಗಳನ್ನ ಐ ಡ್ರಾಪ್ಸ್ ಎಲ್ಲವೂ ವಾರ್ಡ್ ಗಳಲ್ಲಿ ಶೇಖರಿಸಿದೆ. ಮುಂದಿನ ಒಂದು ವಾರ 24*7 ವೈದ್ಯರು ಕೆಲಸ ನಿರ್ವಹಿಸಲಿದ್ದು ಮಿಂಟೋ ಪಟಾಕಿ ಪ್ರಕರಣ ಎದುರಿಸಲು ಸಿದ್ಧವಾಗಿದೆ. ತುರ್ತು ಸಹಾಯವಾಣಿ – 9481740137, 08026707176 ಶುರು ಮಾಡಿದ್ದು. ದೀಪಾವಳಿ ಹಬ್ಬದಲ್ಲಿನ ಕಣ್ಣಿನ ಸಮಸ್ಯೆ ಎದುರಿಸಲು ಮುನ್ನಚ್ಚರಿಕೆ ವಹಿಸವಂತೆ ಜನರಿಗೆ ತಿಳಿಸಿದೆ
ಮಿಂಟೋ ಆಸ್ಪತ್ರೆಯಲ್ಲಿನ ಕಣ್ಣಿನ ಪ್ರಕರಣಗಳು..!
ವರ್ಷ. ಒಳರೋಗಿ. ಹೊರರೋಗಿ. ಒಟ್ಟು
- 2018. 12. 34. 46
- 2019. 07. 41. 48
- 2020. 06. 17. 23
- 2021. 03. 31. 34
- 2022. 10. 35. 23
- 2023. 15. 26. 41
ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಲು ವೈದ್ಯರು ಸಲಹೆಗಳನ್ನು ನೀಡಿದ್ದಾರೆ. ಪ್ರತಿ ದೀಪಾವಳಿ ಹಬ್ಬದ ಸಮಯದಲ್ಲಿ ಸರಾಸರಿ 60 ಕ್ಕೂ ಹೆಚ್ಚು ಮಕ್ಕಳು ದಾಖಲಾಗುತ್ತಾರೆ. 14 ವರ್ಷದೊಳಗಿನ ಮಕ್ಕಳಿಗೇ ಹೆಚ್ಚು ಪಟಾಕಿ ಸಿಡಿದು ಗಂಭೀರ ಗಾಯಗಳಾಗುತ್ತಿವೆ. ಹೆಣ್ಣು ಮಕ್ಕಳಿಗೆ ಹೋಲಿಸಿಕೊಂಡರೆ ಈ ಪೈಕಿ ಗಂಡು ಮಕ್ಕಳ ಸಂಖ್ಯೆ ಮೂರು ಪಟ್ಟು ಜಾಸ್ತಿ ಇದೆ. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿದು ಇಡೀ ರಾಜ್ಯದಲ್ಲಿ 14% ಮಕ್ಕಳ ಕಣ್ಣಿನ ದೃಷ್ಟಿಗೆ ಧಕ್ಕೆಯಾಗುತ್ತಿದೆ.
ಪಟಾಕಿ ಸಿಡಿದು ಮಕ್ಕಳು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಂಭವವೂ ಇದೆ. ಒಟ್ಟಾರೆ ಬೆಳಕಿನ ಹಬ್ಬ ಎಲ್ಲರ ಬದುಕಿನಲ್ಲೂ ಎಲ್ಲರ ಬದಕಲ್ಲೂ ಬೆಳಕು ತುಂಬಿ ಹರಿಯಿವಂತೆಯೇ ಮಾಡಲಿ ಹೊರತು ಪಟಾಕಿಗಳಂಥಾ ಮಾರಕಗಳಿಂದ ದೃಷ್ಟಿ ಕಳೆದುಕೊಂಡು ಬದುಕು ಕತ್ತಲಾಗದಿರಲಿ ಎಂಬುವುದೇ ನಮ್ಮ ಆಶಯ. ಈ ಬಗ್ಗೆ ಪೋಷಕರು ಮಕ್ಕಳಿಗೆ ಅರಿವು ಮೂಡಿಸಿ ಪುಟಾಣಿಗಳನ್ನು ಪಟಾಕಿಗಳಿಂದ ದೂರವಿರುವ ಅಗತ್ಯವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



