ದೀಪಾವಳಿ: ಪಟಾಕಿ ಹೇಗೆ, ಎಲ್ಲಿ ಸಿಡಿಸಬೇಕು? ಕಣ್ಣಿಗೆ ಗಾಯವಾದ್ರೆ ಏನು ಮಾಡ್ಬೇಕು?
ನಾಡಿನಾದ್ಯಂತ ದೀಪಾವಳಿ ಎಂದರೆ ಬೆಳಕಿನ ಸಂಭ್ರಮ. ಈ ದೀಪಾವಳಿಗೆ ಮತ್ತಷ್ಟು ಮೆರುಗು ಬರುವುದು ಕಗ್ಗತ್ತಲಲ್ಲಿ ಸಿಡಿಸುವ ಪಟಾಕಿಗಳಿಂದ. ಪಟಾಕಿಗಳೆಂದರೆ ಬಣ್ಣ ಬಣ್ಣದ ಬೆಂಕಿಯ ಚಿತ್ತಾರಗಳನ್ನು ನೋಡಿ ಖುಷಿ ಪಡುವುದು. ಆದರೆ, ಪಟಾಕಿ ಎಂದರೆ ಎಷ್ಟು ಖುಷಿಯೋ ಅಷ್ಟೇ ಆತಂಕ ಕೂಡ. ಪಟಾಕಿ ಸಿಡಿಸಿ ದುರಂತಗಳನ್ನು ಮೈಮೇಲೆ ಎಳೆದುಕೊಂಡವರಿದ್ದಾರೆ. ಹೀಗಾಗಿ ಹಬ್ಬಕ್ಕೂ ಮುನ್ನವೇ ಕಣ್ಣಿನ ಬಗ್ಗೆ ವೈದ್ಯರು ಕಿವಿ ಮಾತು ಕೊಟ್ಟಿದ್ದಾರೆ.
ಬೆಂಗಳುರು, (ಅಕ್ಟೋಬರ್ 29): ದೀಪಗಳ ಹಬ್ಬದಂದು ಪಟಾಕಿ ಸಿಡಿಸಿ ಖುಷಿ ಪಡುವುದು ಆಚಾರ. ಆದರೆ ಅಂಥಾ ಪಟಾಕಿಗಳು ಬದುಕನ್ನೇ ತನ್ನ ಜೊತೆ ಸಿಡಿಸಿ ಸುಟ್ಟು ಬಿಡುವ ಸಾಧ್ಯತೆಗಳಿವೆ. ಇನ್ನೇನು ಕೆಲವೇ ದಿನ ದೀಪಾವಳಿ ನಮ್ಮ ಜೊತೆಯಾಗಲಿದೆ. ಈಗಾಗಲೇ ಸರ್ಕಾರ ಗ್ರೀನ್ ಪಟಾಕಿಗೆ ಮಾತ್ರ ಅವಕಾಶ ಅಂತಿದೆ. ಆದರೆ ಯಾವ ಪಟಾಕಿಯಾದರೂ ಎಚ್ಚರಿಕೆಯಿಂದ ಇರಲು ಕಣ್ಣಿನ ತಜ್ಞ ವೈದ್ಯರು ಸೂಚಿಸಿದ್ದಾರೆ. ಪಟಾಕಿ ಸಿಡಿಸುವಾಗ ಏನು ಮಾಡಬಾರದು..? ಒಂದು ವೇಳೆ ಅಚಾನಕ್ ಪಟಾಕಿ ಸಿಡಿದು ಕಣ್ಣಿಗೆ ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು.? ಎನ್ನುವ ಬಗ್ಗೆ ವೈದ್ಯರು ಕೆಲ ಸಲಹೆ ಸೂಚನೆಗಳನ್ನು ನೀಡಿದ್ದು, ಅವು ಈ ಕೆಳಗಿನಂತಿವೆ. ಇನ್ನು ಪೊಲೀಸ್ ಇಲಾಖೆಯೂ ಕೆಲ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಪಟಾಕಿ ಸಿಡಿದು ಕಣ್ಣಿಗೆ ಗಾಯವಾದರೆ ಏನು ಮಾಡ್ಬೇಕು?
- ಪಟಾಕಿ ಸಿಡಿಸುವಾ ಫಸ್ಟ್ ಆ್ಯಡ್ ಬಾಕ್ಸ್ ರೆಡಿ ಇಟ್ಟುಕೊಳ್ಳಿ
- ಉದ್ದದ ಅಗರ್ಬತ್ತಿ ಇಟ್ಟುಕೊಂಡು ಪಟಾಕಿ ಹಚ್ಚಿ
- ಜಾಸ್ತಿ ಬೆಂಕಿ ಉಗುಳುವ ಪಟಾಕಿ ಬಳಸ ಬೇಡಿ
- ಹೂವಿನ ಪಾಟ್ ಎತ್ತರದ ಜಾಗದಲ್ಲಿ ಪಟಾಕಿ ಇಟ್ಟು ಸಿಡಿಸಬೇಡಿ
- ಸಾಧ್ಯವಾದಷ್ಟು ತೆರೆದ ಜಾಗದಲ್ಲಿ ಪಟಾಕಿ ಸಿಡಿಸಿ
- ಅಕಸ್ಮಾತ್ ಕಣ್ಣಿಗೆ ಗಾಯವಾದರೆ ಒದ್ದೆ ಬಟ್ಟೆ ಕಣ್ಣಿನ ಮೇಲೆ ಇಡಿ
- ವಿಳಂಬ ಮಾಡದೆ ತಕ್ಷಣವೇ ಆಸ್ಪತ್ರೆ ಸೇರಿಸಿ
- ಕಣ್ಣಿಗೆ ಗಾಯವದ ಸಂದರ್ಭದಲ್ಲಿ ಕಣ್ಣನ್ನು ಉಜ್ಜಬಾರದು
ಇದನ್ನೂ ಓದಿ: ದೀಪಾವಳಿಗೆ ಪಟಾಕಿ ಖರೀದಿಸುತ್ತೀರಾ? ಬೆಂಗಳೂರು ಪೊಲಿಸ್ ಆಯುಕ್ತರು ಕೊಟ್ಟ ಈ ಸೂಚನೆ ತಪ್ಪದೇ ಗಮನಿಸಿ
ಪಟಾಕಿ ಸಿಡಿಸುವಾಗ ಏನು ಮಾಡಬಾರದು..?
- 5 ವರ್ಷದೊಳಗಿನ ಮಕ್ಕಳನ್ನು ಪಟಾಕಿ ಸಿಡಿಸಲು ಬಿಡಬಾರದು
- ಮನೆಯೊಳಗೆ ಮತ್ತು ಪಾರ್ಕಿಂಗ್ ಜಾಗದಲ್ಲಿ ಪಟಾಕಿ ಸಿಡಿಸಬಾರದು
- ಸುಟ್ಟ ಪಟಾಕಿಯನ್ನು ಕಂಡಕಂಡಲ್ಲಿ ಎಸೆಯಬಾರದು
- ಸುಟ್ಟ ಪಟಾಕಿಯನ್ನು ಮತ್ತೆ ಮತ್ತೆ ಸುಡಬಾರದು
- ತೆಳು ಬಟ್ಟೆಗಳನ್ನು ಧರಿಸಿ ಪಟಾಕಿ ಸಿಡಿಸಬಾರದು
- ವಿದ್ಯುತ್ ಸೆಂಟರ್ ಪಾಯಿಂಟ್ ಗಳಿಂದ ದೂರ ಇರುವುದು ಕಡ್ಡಾಯ
ಪೊಲೀಸ್ ಇಲಾಖೆಯಿಂದಲೂ ಗೈಡ್ ಲೈನ್ಸ್
ಇನ್ನು ದೀಪಾವಳಿ ಸಂಭ್ರಮದ ನಡುವೆ ಜೀವನ ಕತ್ತಲೆಗೆ ತಳ್ಳುವ ಪಟಾಕಿ ದರುಂತಗಳು ಪ್ರತಿ ವರ್ಷ ವರದಿಯಾತ್ತಾನೆ. ಹೀಗಾಗಿ ಮನ್ನೇಚ್ಚರಿಕ ಕ್ರಮವಾಗಿ ಜನರಿಗೆ ಅರಿವು ಮೂಡಿಸಲು ಪೊಲೀಸ್ ಇಲಾಖೆ ಮಾರ್ಗಸೂಚಿ ರಿಲೀಸ್ ಮಾಡಿದೆ.
- ಹಸಿರು ಪಟಾಕಿ ಖರೀದಿಸಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ
- ಪಟಾಕಿ ಮೇಲಿರೋ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹಸಿರು ಪಟಾಕಿ ಖಚಿತ ಪಡಿಸಿಕೊಳ್ಳಿ
- ಲೈಸೆನ್ಸ್ ಇರೋ ಅಂಗಡಿಯಲ್ಲೇ ಪಟಾಕಿ ಖರೀದಿ ಮಾಡಬೇಕು
- ಅತಿ ಹೆಚ್ಚು ಶಬ್ದ ಬರೋ ಪಟಾಕಿ ಖರೀದಿ ಮಾಡಬೇಡಿ
- ಹಳೆಯ ಹಾಗೂ ಹಾಳಾದ ಪಟಾಕಿಗಳ ಖರೀದಿ ಬೇಡ
- ಚಿಕ್ಕ ಮಕ್ಕಳು ಪಟಾಕಿ ಹಚ್ಚದಂತೆ ನೋಡಿಕೊಳ್ಳಬೇಕು
- ಜನನಿಬೀಡ ಪ್ರದೇಶದಲ್ಲಿ, ವಾಹನ ಪಾರ್ಕಿಂಗ್ ಇರೋ ಕಡೆ ಪಟಾಕಿ ಸಿಡಿಸಬಾರದು
- ತೆರೆದ ಮೈದಾನದಲ್ಲಿ, ಜನಜಂಗುಳಿ ಕಡಿಮೆ ಇರೋ ಪ್ರದೇಶದಲ್ಲಿ ಪಟಾಕಿ ಹೊಡೆಯಬೇಕು
- ರಾತ್ರಿ 8 ಗಂಟೆಯಿಂದ 10 ಗಂಟೆಯ ಒಳಗಡೆ ಪಟಾಕಿ ಹೊಡೆಯಬೇಕು
- ಉಲ್ಲಂಘಿಸಿದ್ರೆ ಸುಪ್ರೀಂ ಕೋರ್ಟ್ ಆದೇಶದಂತೆ ಕೇಸ್ ಮಾಡಲಾಗುತ್ತೆ
- ಕೈಗೆ ಗ್ಲೌಸ್ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ ಪಟಾಕಿ ಹೊಡೆಯಬೇಕು
- ಯಾವುದೇ ಅವಫಡ ಆದರೆ ಕೂಡಲೇ 112 ಹಾಗೂ 108 ಗೆ ಕಾಲ್ ಮಾಡಬೇಕು
- ಸಿಡಿಯದ ಹಾಗೂ ಟುಸ್ ಪಟಾಕಿಗಳನ್ನ ಗುಡ್ಡೆ ಹಾಕಿ ಬೆಂಕಿ ಹಾಕಬಾರದು
- ಪೆಟ್ರೋಲ್ ಬಂಕ್, ಧಾರ್ಮಿಕ ಸ್ಥಳಗಳು, ವೃದ್ದಾಶ್ರಮಗಳ ಬಳಿ ಪಟಾಕಿ ಹೊಡೆಬಾರದುಅದೇನೆ ಇರ್ಲಿ
ದೀಪವಳಿ ದಿನ ಪಟಾಕಿ ಸಿಡಿಸುವ ಬಹಳಷ್ಟು ಜಾಗೃತೆವಹಿಸಿ.. ಬೆಳಕಿನ ಹಬ್ಬ ಬದುಕಿಗೆ ಅಂದಕಾರ ತರದಂತೆ ಇರ್ಲಿ ಅನ್ನೋದೆ ನಮ್ಮ ಆಶಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ