ಕಾಲ್ತುಳಿತದ ನಡುವೆ ಕೈಚಳಕ ಮೆರೆದ ಮೊಬೈಲ್ ಫೋನ್ ಕಳ್ಳರು, ಒಬ್ಬನ ಸೊಂಟದ ಬೆಲ್ಟ್ನಲ್ಲಿ 10-12 ಫೋನ್ಗಳು!
ಮತ್ತೊಬ್ಬ ವ್ಯಕ್ತಿ ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಶನ್ ನಲ್ಲಿ ಫೋನ್ ಕಳೆದುಕೊಂಡಿದ್ದಾರೆ, ದೂರು ಸಲ್ಲಿಸಲು ಪೊಲೀಸ್ ಸ್ಟೇಶನ್ಗೆ ಬಂದಾಗ ದೂರು ದಾಖಲಿಸಿಕೊಳ್ಳಲು ತಾಂತ್ರಿಕ ಸಮಸ್ಯೆ ಎದುರಾಗಿ, ಮರುದಿನ ಬರಲು ತಿಳಿಸಲಾಗಿದೆ, ಇವತ್ತೇನೋ ಅವರ ದೂರನ್ನು ಸ್ವೀಕರಿಸಲಾಗಿದೆ ಆದರೆ ಸೋಮವಾರ ಸ್ಟೇಶನ್ಗೆ ಭೇಟಿ ನೀಡಲು ತಿಳಿಸಲಾಗಿದೆ.
ಬೆಂಗಳೂರು, ಜೂನ್ 5: ನಿನ್ನೆ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನ ತಳ್ಳಾಟ-ನೂಕಾಟ-ಕಾಲ್ತುಳಿತಗಳಿಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದರೆ ಮೊಬೈಲ್ ಫೋನ್ ಕಳ್ಳರಿಗೆ ಫೀಲ್ಡ್ ಡೇ ಸೃಷ್ಟಿಯಾಗಿತ್ತು. ಇಲ್ಲೊಬ್ಬರು ನಾಗರಾಜ್ ಅಂತ ಇದ್ದಾರೆ, ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕನಾಗಿರಬಹುದು. ಅವರು ನಿನ್ನೆ ಸ್ಟೇಡಿಯಂನ 20 ನೇ ಗೇಟ್ ಬಳಿ ಬಂದು ನಿಂತಾಗ ಸಮೀಪದಲ್ಲಿ ಸುಮಾರು 20 ವರ್ಷದ ಯುವಕ ಇದ್ದನಂತೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು ಮೊಬೈಲ್ ಫೋನ್ ಕಳುವಾಗಿದೆ ಅಂತ ಹೇಳಿ ಆ ಯುವಕನನ್ನು ತಪಾಸಣೆ ಮಾಡಲಾರಂಭಿಸಿದಾಗ ಅವನು ತನ್ನ ಸೊಂಟದ ಬೆಲ್ಟ್ನಲ್ಲಿ 10-12 ಕದ್ದ ಮೊಬೈಲ್ಗಳನ್ನು ಇಟ್ಟುಕೊಂಡಿದ್ದು ಗೊತ್ತಾಗಿದೆ . ಕೂಡಲೇ ಅವನನ್ನನು ಪೊಲೀಸ್ಗೆ ಒಪ್ಪಿಸಲಾಗಿದೆ. ಪೊಲೀಸರು ಫೋನ್ಗಳನ್ನು ತಪಾಸಣೆ ಮಾಡುವಾಗಲೇ ನಾಗರಾಜ್ಗೆ ತನ್ನ ಫೋನ್ ಕೂಡ ಕಳುವಾಗಿದ್ದು ಗೊತ್ತಾಗಿದೆ.
ಇದನ್ನೂ ಓದಿ: RCB Fans Death: ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಆರ್ಸಿಬಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ