ಆರ್ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ನೋಡಲು ಆರ್ ಸಿಬಿ ಅಭಿಮಾನಿಗಳು ಸಹ ದೌಡಾಯಿಸಿದ್ದರು. ಸಿಕ್ಕ ಸಿಕ್ಕ ಜಾಗದಲ್ಲಿ ನಿಂತುಕೊಂಡು ಆರ್ ಸಿಬಿ ಆಟಗಾರರನ್ನು ಕಣ್ತುಂಬಿಕೊಂಡರು. ಇನ್ನು ವಿಧಾನಸೌಧದ ಬಳಿ ಸಾಗರೋಪಾಯವಾಗಿ ಸೇರಿದ್ದ ಫ್ಯಾನ್ಸ್, ವಿಧಾನಸೌಧದ ಗಾರ್ಡನ್ ಏರಿಯಾ, ಫೆನ್ಸಿಂಗ್ ಫೀಸ್ ಫೀಸ್ ಮಾಡಿದ್ದಾರೆ. ಹೌದು... ವಿಧಾನಸೌಧದ ಮುಂಭಾಗದ ಇರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ ಬಳಿ ನಿರ್ಮಿಸಿರುವ ಫೆನ್ಸಿಂಗ್ ಮುರಿದುಬಿದ್ದಿದೆ. ಹಾಗೇ ವಿವಿಧ ಆಕರ್ಷಿತ ವಿದ್ಯುತ್ ದೀಪಗಳಿಗೂ ಸಹ ಹಾನಿಯಾಗಿದೆ.
ಬೆಂಗಳೂರು, (ಜೂನ್ 05) : ಆರ್ಸಿಬಿ ವಿಕ್ಟರಿ ಸೆಲೆಬ್ರೇಷನ್ ಕಾರ್ಯಕ್ರಮಕ್ಕೆ ಬಂದು 11 ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ. ಘೋರ ದುರಂತಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದ ಕಾರಣ ಮಹಾ ದುರಂತ ನಡೆದಿದೆ. ಅನಾಹುತಕ್ಕೆ ಸರ್ಕಾರ, ಕೆಎಸ್ಸಿಎ (The Karnataka State Cricket Association) ಹಾಗೂ ಆರ್ಸಿಬಿ ಮ್ಯಾನೇಜ್ಮೆಂಟ್ ಹೊಣೆ ಎಂಬ ಆರೋಪಗಳು ಕೇಳಿಬಂದಿವೆ. ಇನ್ನು ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ನೋಡಲು ಆರ್ ಸಿಬಿ ಅಭಿಮಾನಿಗಳು ಸಹ ದೌಡಾಯಿಸಿದ್ದರು. ಸಿಕ್ಕ ಸಿಕ್ಕ ಜಾಗದಲ್ಲಿ ನಿಂತುಕೊಂಡು ಆರ್ ಸಿಬಿ ಆಟಗಾರರನ್ನು ಕಣ್ತುಂಬಿಕೊಂಡರು. ಇನ್ನು ವಿಧಾನಸೌಧದ ಬಳಿ ಸಾಗರೋಪಾಯವಾಗಿ ಸೇರಿದ್ದ ಫ್ಯಾನ್ಸ್, ವಿಧಾನಸೌಧದ ಗಾರ್ಡನ್ ಏರಿಯಾ, ಫೆನ್ಸಿಂಗ್ ಫೀಸ್ ಫೀಸ್ ಮಾಡಿದ್ದಾರೆ. ಹೌದು… ವಿಧಾನಸೌಧದ ಮುಂಭಾಗದ ಇರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ ಬಳಿ ನಿರ್ಮಿಸಿರುವ ಫೆನ್ಸಿಂಗ್ ಮುರಿದುಬಿದ್ದಿದೆ. ಹಾಗೇ ವಿವಿಧ ಆಕರ್ಷಿತ ವಿದ್ಯುತ್ ದೀಪಗಳಿಗೂ ಸಹ ಹಾನಿಯಾಗಿದೆ.