Bengaluru Stampede; ಸರ್ಕಾರೀ ಖರ್ಚಿನಲ್ಲಿ ಖಾಸಗಿ ಕ್ಲಬ್ ಆಟಗಾರರಿಗೆ ಸನ್ಮಾನ ಮಾಡಬಹುದೇ? ರಂಗನಾಥ್ ರೆಡ್ಡಿ, ವಕೀಲ
ಎರಡು ಸ್ಥಳಗಳಲ್ಲಿ ಆಟಗಾರರನ್ನು ಸತ್ಕರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು-ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ, ಕ್ರಿಕೆಟ್ ಸ್ಟೇಡಿಯಂ ಬಳಿ ಕಾಲ್ತುಳಿತದ ಘಟನೆ ನಡೆದಿದೆ. ಅದಕ್ಕೆ ಕಾರಣವೇನು? ಸ್ಟೇಡಿಯಂ ಆಡಳಿತ ಮಂಡಳಿ ಮತ್ತು ಆರ್ಸಿಬಿಯ ವ್ಯವಸ್ಥಾಪಕ ಮಂಡಳಿ ಆನ್ಲೈನ್ ಮೂಲಕ ಉಚಿತ ಪಾಸುಗಳನ್ನು ಹಂಚಿದ್ದೇ ಸ್ಟಾಂಪೀಡ್ಗೆ ಕಾರಣವಾಗಿದೆ ಎಂದು ವಕೀಲ ರಂಗನಾಥ್ ರೆಡ್ಡಿ ಹೇಳಿದರು.
ಬೆಂಗಳೂರು, ಜೂನ್ 5: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬುಧವಾರ ನಡೆದ ಕಾಲ್ತುಳಿತದ ಘಟನೆಯಲ್ಲಿ 11 ಜನ ಸತ್ತಿರುವುದಕ್ಕೆ ಸಂಭವಿಸಿದಂತೆ, ನ್ಯಾಯಾಲಯ ಸುವೋ ಮೋಟು ಪಿಐಎಲ್ ದಾಖಲಿಸಿಕೊಂಡಿದೆ. ಪ್ರಕರಣದ ವಿಷಯದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ವಕೀಲ ರಂಗನಾಥ್ ರೆಡ್ಡಿ (Ranganath Reddy, Advocate ), ಸರ್ಕಾರದಿಂದ ಕ್ರಿಮಿನಲ್ ನಿರ್ಲಕ್ಷ್ಯತನ ನಡೆದಿದೆ, ಅದರ ಧೋರಣೆಗಳು ಪ್ರಶ್ನಾರ್ಹವಾಗಿವೆ ಎಂದು ಹೇಳಿದರು. ಅಸಲಿಗೆ, ಅರ್ಸಿಬಿ ಒಂದು ಖಾಸಗಿ ಸಂಸ್ಥೆಯ ತಂಡ ಮತ್ತು ಸರ್ಕಾರದೊಂದಿಗೆ ಅದಕ್ಕೆ ಯಾವುದೇ ಸಂಬಂಧ, ಸಹಭಾಗಿತ್ವ ಇಲ್ಲ, ಅಷ್ಟಾಗಿಯೂ ಸರ್ಕಾರದ ಖರ್ಚಿನಲ್ಲಿ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಯಾಕೆ ಆಯೋಜಿಸಲಾಯಿತು ಎಂದು ನ್ಯಾಯಾಲಯದ ಪ್ರಶ್ನೆ ಎಂದು ರಂಗನಾಥ್ ರೆಡ್ಡಿ ಹೇಳಿದರು.
ಇದನ್ನೂ ಓದಿ: Bengaluru Stampede; ತಳ್ಳಾಟದಲ್ಲಿ ಪತಿಯಿಂದ ಬೇರ್ಪಟ್ಟ ಅಕ್ಷತಾ ಪೈ ಸಿಕ್ಕಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ, ಶವವಾಗಿ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ