ಬೆಂಗಳೂರಿನಲ್ಲಿ 5 ಲಕ್ಷ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ: ಓರ್ವ ಬಂಧನ

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ 5 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ದಾಸ್ತಾನು ಮಾಡಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಪುರುಷೋತ್ತಮ್ ಎಂಬ ಆರೋಪಿಯ ಮನೆಯ ಮೇಲೆ ದಾಳಿ ನಡೆಸಿ 144 ಬಾಟಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ 5 ಲಕ್ಷ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ: ಓರ್ವ ಬಂಧನ
ಬೆಂಗಳೂರಿನಲ್ಲಿ 5 ಲಕ್ಷ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ: ಓರ್ವ ಬಂಧನ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 30, 2024 | 8:08 AM

ಬೆಂಗಳೂರು, ಅಕ್ಟೋಬರ್​ 30: ನಗರದಲ್ಲಿ 5 ಲಕ್ಷ ರೂ. ಮೌಲ್ಯದ ಅಕ್ರಮ‌ ಗೋವಾ ಮದ್ಯ (Goa Liquor) ದಾಸ್ತಾನು ಮಾಡಿಟ್ಟಿದ್ದ ಆರೋಪಿ‌ಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿರುವಂತಹ ಘಟನೆ ಕತ್ರಿಗುಪ್ಪೆಯಲ್ಲಿ ನಡೆದಿದೆ. ದಕ್ಷಿಣ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನೇತೃತ್ವದಲ್ಲಿ ಆರೋಪಿ ಪುರುಷೋತ್ತಮ್ ಮನೆ ಮೇಲೆ ರೇಡ್ ಮಾಡಿ ಬಂಧಿಸಲಾಗಿದೆ. ಮನೆಯಲ್ಲಿದ್ದ ಮದ್ಯದ ಬಾಟಲಿ ನೋಡಿ ಒಂದು ಕ್ಷಣ ಅಬಕಾರಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಸದ್ಯ ಅಬಕಾರಿ ಕಾಯ್ದೆ 1965ರ ಕಲಂ 11, 14, 15, 38(ಎ) ಹಾಗೂ 43(ಎ) ಅಡಿ ಕೇಸ್ ದಾಖಲಿಸಲಾಗಿದ್ದು, 144 ಬಾಟಲ್​ಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಉಡುಪಿ ಬಾಲಕೃಷ್ಣ ಹತ್ಯೆ: ಆರೋಪಿಗಳ 5 ತಿಂಗಳ ಕೊಲೆ ಸಂಚು ಬಯಲು

ಬಂಧಿತ ಆರೋಪಿ ಪುರುಷೋತ್ತಮ್​​​ ಗೋವಾದಲ್ಲಿರುವ ಅಂಗಡಿಯವರ ಜತೆ ಸಂಪರ್ಕ ಹೊಂದಿದ್ದು, ಕಡಿಮೆ ಬೆಲೆಗೆ ಮದ್ಯ ತರಿಸಿಕೊಳ್ಳುತ್ತಿದ್ದ. ಗೋವಾದಿಂದ ಬಸ್​​ನಲ್ಲಿ ಮದ್ಯದ ಬಾಟಲ್ ಲೋಡ್ ಮಾಡಿ ಕಳಿಸುತ್ತಿದ್ದು, ಬೆಂಗಳೂರಿಗೆ ಬಸ್​ ಬರ್ತಿದ್ದಂತೆ ಪುರುಷೋತ್ತಮ್ ಇಳಿಸಿಕೊಳ್ಳುತ್ತಿದ್ದ. ಬಳಿಕ ಮದ್ಯದ ಬಾಟಲ್​ಗಳನ್ನ ಮನೆಯಲ್ಲಿ ಸಂಗ್ರಹಿಸಿಡುತ್ತಿದ್ದ.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

ಅ.27ರಂದು ಬನಶಂಕರಿ 2ನೇ ಹಂತದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಆರೋಪಿ ಪುರುಷೋತ್ತಮ್ ನಿಂತಿದ್ದ. ಆತನ ಚಲನವಲನ ಅಬಕಾರಿ ಸಿಬ್ಬಂದಿಗೆ ಅನುಮಾನ ಮೂಡಿಸಿತ್ತು. ಈ ವೇಳೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಗೋವಾದಲ್ಲಿ ಮಾತ್ರ ಮಾರಾಟ (FOR SALE IN GOA ONLY) ಎಂದು ಬಾಟಲ್ ಮೇಲೆ ನಮೂದಿಸಿರುವುದು ಪತ್ತೆ ಆಗಿದೆ.

ಇದನ್ನೂ ಓದಿ: ಯಾದಗಿರಿ: ಸ್ವಾಮೀಜಿ ವೇಷ ತೊಟ್ಟು ಹಿರಿಯರ ಕಾಡಿಕೆ ಪರಿಹರಿಸುವುದಾಗಿ ವಂಚನೆ

ಬಳಿಕ ಆರೋಪಿ ಮೊಬೈಲ್ ಪರಿಶೀಲನೆ ನಡೆಸಿದ ಅಬಕಾರಿ ಸಿಬ್ಬಂದಿ, ಈ ವೇಳೆ ಗೋವಾದ ಮದ್ಯದ ಅಂಗಡಿ ಜೊತೆಗಿನ ನಂಟು ಬಯಲಾಗಿದೆ. ಗೋವಾದಿಂದ ಬೆಂಗಳೂರಿಗೆ ಮದ್ಯ ತರಿಸಿದ್ದ ಬಿಲ್​ಗಳು ಕೂಡ ಪತ್ತೆ ಆಗಿದ್ದು, ಮನೆಗೆ ಕರೆದೊಯ್ದು ಪರಿಶೀಲಿಸಿದಾಗ ಮದ್ಯದ ಬಾಟಲ್​ಗಳು​ ಪತ್ತೆ ಆಗಿವೆ.

ಚಿಕ್ಕಬಳ್ಳಾಪುರದಲ್ಲಿ ಸರಣಿ ಕಳ್ಳತನ

ಚಿಕ್ಕಬಳ್ಳಾಪುರ: ನಗರದ ಬಿ.ಬಿ.ರಸ್ತೆಯಲ್ಲಿರುವ ಫಸ್ಟ್ ಕ್ರೈ ಬಟ್ಟೆ ಶೋ ರೂಂ, ಕಾಂತಿ ಸ್ವೀಟ್ಸ್, ಕ್ಲಾಸಿಕ್ ಮೊಬೈಲ್ ಶಾಪ್, ಮ್ಯೂಟಯಲ್ ಪಂಡ್ ಕಛೇರಿಗೆ ಕನ್ನ ಹಾಕಿರುವಂತಹ ಘಟನೆ ನಡೆದಿದೆ. ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಫಸ್ಟ್ ಕ್ರೈನ ಗ್ಲಾಸ್ ಹೊಡೆದು ಒಳ ನುಗ್ಗಿರುವ ಕಳ್ಳನೋರ್ವ 50 ಸಾವಿರ ರೂ ಹಣ ಕದ್ದು ಪರಾರಿಯಾಗಿದ್ದಾನೆ. ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್