ಆನ್ಲೈನ್​ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು!

ಬೆಂಗಳೂರಿನಲ್ಲಿ ಆನ್‌ಲೈನ್ ಬಾಡಿಗೆ ಮನೆ ಹುಡುಕುವವರನ್ನೇ ಗುರಿಯಾಗಿಸಿಕೊಂಡು ಸೈಬರ್ ವಂಚಕರು ಹೊಸ ಜಾಲ ಸೃಷ್ಟಿಸಿದ್ದಾರೆ. ಐಷಾರಾಮಿ ಫ್ಲಾಟ್‌ಗಳ AI ಫೋಟೋಗಳನ್ನು ಬಳಸಿ ಜಾಹೀರಾತು ನೀಡುವ ಇವರು, 'ವಿಜಿಟರ್ ಪಾಸ್' ಅಥವಾ 'ಅಡ್ವಾನ್ಸ್' ಹೆಸರಿನಲ್ಲಿ ಹಣ ವಸೂಲಿ ಮಾಡಿ ಮೋಸ ಮಾಡುತ್ತಿದ್ದರು. ಇತ್ತೀಚೆಗೆ ವೈದ್ಯೆಯೊಬ್ಬರು ಇದೇ ಜಾಲಕ್ಕೆ ಸಿಲುಕಿ 10 ಸಾವಿರ ರೂ. ಕಳೆದುಕೊಂಡಿದ್ದು, ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.

ಆನ್ಲೈನ್​ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು!
ಆನ್ಲೈನ್ ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು!

Updated on: Feb 18, 2026 | 12:06 PM

ಬೆಂಗಳೂರು, ಫೆಬ್ರವರಿ 18: ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುವವರನ್ನೇ ಟಾರ್ಗೆಟ್ ಮಾಡಿಕೊಂಡು ಸೈಬರ್ ವಂಚಕರು ಹೊಸ ತಂತ್ರದ ಮೂಲಕ ಹಣ ದೋಚುತ್ತಿರುವ ಪ್ರಕರಣಗಳು ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿವೆ. ಐಷಾರಾಮಿ ಫ್ಲಾಟ್‌ಗಳ ಎಐ ಫೋಟೋಗಳನ್ನು ಬಳಸಿ ಜಾಹೀರಾತು ಹಾಕಿ, ನಂತರ ಅಡ್ವಾನ್ಸ್ ಹೆಸರಿನಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿರುವುದು ಪತ್ತೆಯಾಗಿದ್ದು, ವಂಚಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಅಡ್ವಾನ್ಸ್ ಹೆಸರಿನಲ್ಲಿ ಸಾವಿರಾರು ರೂ. ಜೇಬಿಗೆ!

ಇತ್ತೀಚೆಗೆ ಹೌಸಿಂಗ್ ಡಾಟ್ ಕಾಮ್ (Housing.com) ಸೇರಿದಂತೆ ಹಲವು ವೆಬ್‌ಸೈಟ್‌ಗಳಲ್ಲಿ ಆಕರ್ಷಕ ಫೋಟೋಗಳೊಂದಿಗೆ ಫ್ಲಾಟ್ ಲಭ್ಯವಿದೆ ಎಂದು ಪೋಸ್ಟ್ ಮಾಡಿ ಜನರಿಂದ ಹಣ ದೋಚುವ ವಂಚಕರ ಜಾಲ ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮನೆ ನೋಡಲು ಬರುವ ಮುನ್ನ ‘ವಿಜಿಟರ್ ಪಾಸ್’, ‘ರಿಫಂಡೇಬಲ್ ಅಡ್ವಾನ್ಸ್’ ಎಂದು ಹೇಳಿ ಹಣ ವರ್ಗಾವಣೆ ಮಾಡಿಸಿಕೊಳ್ಳುವ ಮೋಸಗಾರರು ನಕಲಿ ವಿಳಾಸ ನೀಡಿ ಸ್ಥಳಕ್ಕೆ ಬರಲು ಸೂಚಿಸುತ್ತಿದ್ದರು. ಆದರೆ ಅಲ್ಲಿಗೆ ಹೋದಾಗ ಆ ಹೆಸರಿನ ಯಾವುದೇ ಫ್ಲಾಟ್ ಇಲ್ಲವೆಂದು ತಿಳಿದಿದಾಗಲೇ ಜನರಿಗೆ ಮೋಸ ಹೋಗಿದ್ದೇವೆಂದು ತಿಳಿಯುತ್ತಿತ್ತೆಂದು ಹೇಳಲಾಗಿದೆ.

ಇದನ್ನೂ ಓದಿ ಬಲವಂತವಾಗಿ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಮೆಡಿಕಲ್ ಚೆಕಪ್: ಹನಿಟ್ರ್ಯಾಪ್ ಮಾಡಿಸಿ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಬಂಧನ

ಇದೇ ರೀತಿ ಬೆಂಗಳೂರಿನ ವೈದ್ಯೆ ಸೌಮ್ಯ ಎಂಬವರು ಬಾಡಿಗೆ ಮನೆ ಹುಡುಕುವ ವೇಳೆ ಬಲೆಗೆ ಬಿದ್ದಿದ್ದಾರೆ. ಫೋಟೋ ನೋಡಿ ಮನೆ ನೋಡಲು ಮೊದಲು 2 ಸಾವಿರ ರೂಪಾಯಿ ‘ವಿಜಿಟರ್ ಪಾಸ್’ ಹೆಸರಿನಲ್ಲಿ, ಬಳಿಕ 7 ಸಾವಿರ ರೂಪಾಯಿ ಅಡ್ವಾನ್ಸ್ ಹೆಸರಿನಲ್ಲಿ ಪಾವತಿಸಿದ್ದಾರೆ. ಹಂತ ಹಂತವಾಗಿ 10 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಬಳಿಕ ನೀಡಿದ ವಿಳಾಸಕ್ಕೆ ತೆರಳಿದಾಗ ಅಲ್ಲಿ ಯಾವುದೇ ಫ್ಲಾಟ್ ಇಲ್ಲದಾಗ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಿನ ಭದ್ರತಾ ಸಿಬ್ಬಂದಿ ಈ ರೀತಿಯ ವಂಚನೆಗೆ ಇನ್ನೂ ಹಲವರು ಒಳಗಾಗಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us