ಸಿಲ್ಕ್ ಬೋರ್ಡ್ ಜಂಕ್ಷನ್ ಈಗ ‘ಸ್ವಿಮ್ಮಿಂಗ್ ಪೂಲ್’!: ಕೋಟಿ ಕೋಟಿ ಖರ್ಚು ಮಾಡಿದ್ರೂ ಸುಧಾರಿಸದ ಸಿಲಿಕಾನ್ ಸಿಟಿ

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಸಂಪೂರ್ಣ ಜಲಾವೃತಗೊಂಡಿದೆ. ಹೊಸ ಮೆಟ್ರೋ ನಿಲ್ದಾಣದ ಸುತ್ತಮುತ್ತಲೂ ನೀರು ನಿಂತು ವಾಹನ ಸವಾರರು ತೀವ್ರ ಪರದಾಡಿದರು. ಭೀಕರ ಟ್ರಾಫಿಕ್ ಜಾಮ್‌ನಿಂದ ಪ್ರಯಾಣಿಕರು ಗಂಟೆಗಟ್ಟಲೆ ಸಿಲುಕಿದರು. ನಗರದ ಡ್ರೈನೇಜ್ ವ್ಯವಸ್ಥೆ ಹಾಗೂ ಬಿಬಿಎಂಪಿ ಮೂಲಸೌಕರ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ದೃಶ್ಯಗಳು ಬೆಂಗಳೂರಿನ ಮಳೆಗಾಲದ ವಾಸ್ತವತೆಯನ್ನು ಎತ್ತಿ ಹಿಡಿಯುತ್ತವೆ.

ಸಿಲ್ಕ್ ಬೋರ್ಡ್ ಜಂಕ್ಷನ್ ಈಗ ‘ಸ್ವಿಮ್ಮಿಂಗ್ ಪೂಲ್’!: ಕೋಟಿ ಕೋಟಿ ಖರ್ಚು ಮಾಡಿದ್ರೂ ಸುಧಾರಿಸದ ಸಿಲಿಕಾನ್ ಸಿಟಿ
ಸಿಲ್ಕ್ ಬೋರ್ಡ್ ಜಲಾವೃತ

Updated on: May 29, 2026 | 11:34 AM

ಬೆಂಗಳೂರು ಮೇ,29: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆಗೆ (Traffic) ಸದಾ ಪ್ರಸಿದ್ಧಿ ಪಡೆದಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್, ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇಡೀ ರಸ್ತೆ ಯಾವ ಮಟ್ಟಿಗೆ ಮುಳುಗಡೆಯಾಗಿದೆ ಎಂದರೆ, ಇದು ಬೆಂಗಳೂರಿನ ಅತ್ಯಂತ ಬ್ಯುಸಿ ರಸ್ತೆಯೋ ಅಥವಾ ಯಾವುದಾದರೂ ಈಜುಕೊಳವೋ (Swimming Pool) ಎಂದು ಸಾರ್ವಜನಿಕರು ಮೂಗಿನ ಮೇಲೆ ಬೆರಳಿಡುವಂತಾಗಿದೆ. ಈ ಅವ್ಯವಸ್ಥೆ ಬಗ್ಗೆ @Karnataka Portfolio ಎಂಬ ಎಕ್ಸ್​​ ಖಾತೆ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಇಲ್ಲಿ ಅತ್ಯಂತ ಅಘಾತಕಾರಿ ವಿಷಯವೆಂದರೆ, ನಗರದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಇಡೀ ಪ್ರದೇಶವೇ ಮಳೆ ನೀರಿನಿಂದ ಮುಳುಗಿಹೋಗಿದೆ. ನಗರದ ಡ್ರೈನೇಜ್ (Drainage) ವ್ಯವಸ್ಥೆ ಹಾಗೂ ಮೂಲಸೌಕರ್ಯದ ಯೋಜನೆಯನ್ನು ಬಿಬಿಎಂಪಿ ಯಾವ ರೀತಿ ರೂಪಿಸಿದೆ ಎಂಬ ಬಗ್ಗೆ ಈ ದೃಶ್ಯಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಇಲ್ಲಿದೆ ನೋಡಿ ಎಕ್ಸ್​​ ವಿಡಿಯೋ:

ನೀರಿನ ತೀವ್ರತೆಗೆ ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ರಸ್ತೆಯಲ್ಲೇ ಅರ್ಧ ಮುಳುಗಿದ ಸ್ಥಿತಿಯಲ್ಲಿ ಸಾಗಲು ತೀವ್ರವಾಗಿ ಪರದಾಡಿದವು. ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ಭೀಕರ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದರು. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಬೆಂಗಳೂರಿನ ಪ್ರಮುಖ ರಸ್ತೆಗಳು ಹೀಗೆ ನೀರಿನಲ್ಲಿ ಕಣ್ಮರೆಯಾಗುವುದು ಸಿಟಿ ಜನರಿಗೆ ಈಗ ಮಾಮೂಲಿ ಎಂಬಂತಾಗಿದೆ.

ಇದನ್ನೂ ಓದಿ: ಮೆಟ್ರೋ ನಿಲ್ದಾಣದ ರಸ್ತೇಲಿ 3 ಅಡಿಯಷ್ಟು ನಿಂತ ಮಳೆ‌ನೀರು! ವಾಹನ ಸವಾರರ ಪರದಾಟ

“ಮೆಟ್ರೋ ಕಾರಿಡಾರ್‌ಗಳಂತಹ ಬೃಹತ್ ಯೋಜನೆಗಳಿಗೆ ಕೋಟಿ ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗುತ್ತದೆ. ಆದರೆ, ಸಣ್ಣ ಮಳೆ ಬಂದರೆ ನೀರು ಸರಾಗವಾಗಿ ಹರಿದು ಹೋಗಲು ಒಂದು ಸರಿಯಾದ ರಾಜಕಾಲುವೆ ಅಥವಾ ಡ್ರೈನೇಜ್ ವ್ಯವಸ್ಥೆ ಮಾಡಲು ಈ ಅಧಿಕಾರಿಗಳಿಗೆ ಸಾಧ್ಯವಿಲ್ಲವೇ?” ಎಂದು ನೆಟ್ಟಿಗರು ಹಾಗೂ ಸಾರ್ವಜನಿಕರು ಬಿಬಿಎಂಪಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಲ್ಕ್ ಬೋರ್ಡ್‌ನ ಈ ಅವಸ್ಥೆಯ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿವೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us