ಬೆಂಗಳೂರು: ನಾಳೆ ನಡೆಯಬೇಕಿದ್ದ 56ನೇ ಬೆಂಗಳೂರು ವಿವಿ ಘಟಿಕೋತ್ಸವ(Bangalore University Convocation) ದಿನಾಂಕ ಮುಂದೂಡಲಾಗಿದೆ. ಏಪ್ರಿಲ್ 8 ರಂದು ನಿಗದಿಯಾಗಿದ್ದ 56ನೇ ಘಟಿಕೋತ್ಸವವನ್ನು ಏಪ್ರಿಲ್ ಕೊನೆ ವಾರದಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ.
ಇಷ್ಟು ದಿನ ವಿವಿ ಕುಲಪತಿ ವೇಣುಗೋಪಾಲ್ ನೇಮಕ ಪ್ರಕರಣ ವಿಚಾರ ಕೋರ್ಟ್ನಲ್ಲಿತ್ತು. ಸದ್ಯ ಇದೀಗ ಕುಲಪತಿ ನೇಮಕ ಪ್ರಕರಣ ಇತ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಘಟಿಕೋತ್ಸವ ತಯಾರಿಕೆಗೆ ಸಮಯಾವಕಾಶ ಬೇಕಾದ ಕಾರಣ ಏಪ್ರಿಲ್ ಕೊನೆ ವಾರದಲ್ಲಿ ಘಟಿಕೋತ್ಸವ ನಡೆಸಲು ನಿರ್ಧಾರ ಮಾಡಲಾಗಿದೆ. ಶೀಘ್ರವೇ ದಿನಾಂಕ ಪ್ರಕಟಿಸುವುದಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಉಕ್ರೇನ್‌ನಲ್ಲಿರುವ ಪಠ್ಯಕ್ರಮದಂತೆಯೇ ವಿದ್ಯಾಭ್ಯಾಸ ನೀಡ್ತೇವೆ
ಉಕ್ರೇನ್‌ನಿಂದ ವಾಪಸಾದ 17 MBBS ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹಾಯದ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ BLDE ಕಾಲೇಜಿನಿಂದ ಸಹಕಾರ ನೀಡುತ್ತೇವೆ ಎಂದು ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನಿನ್ನೆ ತಮ್ಮನ್ನು ಭೇಟಿಯಾದ 17 ಜನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಹಾಯದ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಾಯ, ಸಹಕಾರ ಮಾಡೋದಾಗಿ ಹೇಳಿದ್ರು. ಬಿಎಲ್ಡಿಇ ಮೆಡಿಕಲ್ ವೈದ್ಯಕೀಯ ಕಾಲೇಜಿನಲ್ಲಿ ಗ್ರಂಥಾಲಯ ಬಳಕೆಗೆ ಸೂಚನೆ ನೀಡಿದ್ದಾರೆ. ಉಕ್ರೇನ್‌ನಲ್ಲಿರುವ ಪಠ್ಯಕ್ರಮದಂತೆಯೇ ವಿದ್ಯಾಭ್ಯಾಸ ನೀಡ್ತೇವೆ. 17 ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಉಪನ್ಯಾಸಕರ ನಿಯೋಜನೆ ಮಾಡಲಾಗುತ್ತೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ನಿನ್ನೆ ವಿದ್ಯಾರ್ಥಿಗಳು ನನ್ನನ್ನ ಭೇಟಿ ಮಾಡಿದ್ದಾರೆ. ಉಕ್ರೇನ್ ಮೆಡಿಕಲ್ ಕಾಲೇಜುಗಳಿಂದ ಆನ್ ಲೈನ್ ಕ್ಲಾಸ್ ನಡೆಯುತ್ತಿಲ್ಲ. ಅಧ್ಯಾಯನ ಅಪೂರ್ಣವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಮಾನವೀಯ ದೃಷ್ಟಿಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುತ್ತೇವೆ. ಮುಂದಿನ ವ್ಯಾಸಂಗಕ್ಕಾಗಿ ಸೀಟ್ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು, ಪ್ರಧಾನಿ ಭೇಟಿಯಾಗಲು ವಿದ್ಯಾರ್ಥಿಗಳಿಗೆ ಹೇಳಿರುವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಮೂಲಕವು ಕೇಂದ್ರದ ಗಮನಕ್ಕೆ ಈ ವಿಚಾರ ತರಲು ನಾನು ಪ್ರಯತ್ನಿಸುವೆ. ಕೇಂದ್ರ ಸರ್ಕಾರವೇ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ವ್ಯವಸ್ಥೆ ಮಾಡಬೇಕಿದೆ. ಯುದ್ಧದಿಂದಾಗಿ ಇಂಥ ಪರಿಸ್ಥಿತಿ ಬಂದಿದೆ. ಇದನ್ನ ಕೇಂದ್ರ ಸರ್ಕಾರವೇ ಪರಿಹರಿಸಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ನೋ ಎಂಟ್ರಿ; ಶಿಕ್ಷಣ ಸಚಿವ ಬಿಸಿ ನಾಗೇಶ್