ಕಾವೇರಿ ಐದನೇ ಹಂತದ ಯೋಜನೆ: ಬೆಂಗಳೂರು ನೀರಿನ ಬಿಕ್ಕಟ್ಟು ಪರಿಹರಿಸುವ ಯೋಜನೆ ಬಗ್ಗೆ ತಿಳಿಯಬೇಕಾದ ವಿಚಾರಗಳಿವು

|

Updated on: Mar 22, 2024 | 9:36 AM

Cauvery Phase Five Project: ಕಾವೇರಿ ಐದನೇ ಹಂತದ ಯೋಜನೆ ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ಬಗೆಹರಿಸಲು ಉತ್ತಮ ಎಂದು ಸರ್ಕಾರ ಭಾವಿಸಿದೆ. ಈ ಯೋಜನೆಯಿಂದ ಬೆಂಗಳೂರಿನ ಜನರಿಗೆ ಹೇಗೆ ಪ್ರಯೋಜನವಾಗಲಿದೆ? ಕಾವೇರಿ ಐದನೇ ಹಂತದ ಯೋಜನೆ ಯಾವಾಗ ಸಾಕಾರಗೊಳ್ಳಲಿದೆ? ಇದು ಪೂರ್ಣಗೊಂಡರೆ ದಿನವೊಂದಕ್ಕೆ ಬೆಂಗಳೂರಿಗೆ ಎಷ್ಟು ನೀರು ಸರಬರಾಜು ಆಗಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಕಾವೇರಿ ಐದನೇ ಹಂತದ ಯೋಜನೆ: ಬೆಂಗಳೂರು ನೀರಿನ ಬಿಕ್ಕಟ್ಟು ಪರಿಹರಿಸುವ ಯೋಜನೆ ಬಗ್ಗೆ ತಿಳಿಯಬೇಕಾದ ವಿಚಾರಗಳಿವು
ಕಾವೇರಿ ನದಿ
Follow us on

ಬೆಂಗಳೂರು, ಮಾರ್ಚ್​ 22: ಒಂದೆಡೆ ಬೇಸಿಗೆಯ ತಾಪ (Summer) ಬೆಂಗಳೂರಿಗರನ್ನು ಸುಡುತ್ತಿದ್ದರೆ ಮತ್ತೊಂದೆಡೆ, ನೀರಿನ ಬಿಕ್ಕಟ್ಟು (Bangalore Water Crisis) ಜನಜೀವನ ಅಸ್ತವ್ಯಸ್ಥೆಗೊಳಿಸಿದೆ. ಐದನೇ ಹಂತದ ಕಾವೇರಿ ಯೋಜನೆ (Cauvery Phase Five Project) ಅನುಷ್ಠಾನಗೊಂಡರೆ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಯಬಹುದು ಎಂದು ಸರ್ಕಾರ ಭಾವಿಸಿದೆ. 2007 ರಿಂದ ಈಚೆಗೆ ಸುಮಾರು 110 ಹಳ್ಳಿಗಳು ಬೆಂಗಳೂರು ನಗರ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಇವುಗಳು ಸೇರಿದಂತೆ ನಗರದ ಒಟ್ಟು ಜನಸಂಖ್ಯೆಗೆ ಅಗತ್ಯ ಇರುವಷ್ಟು ನೀರು ಪೂರೈಕೆ ಖಾತರಿಪಡಿಸಿಕೊಳ್ಳಲು ಐದನೇ ಹಂತದ ಕಾವೇರಿ ಯೋಜನೆಯಿಂದ ಸಾಧ್ಯವಾಗಲಿದೆ ಎಂಬುದು ಸರ್ಕಾರದ ನಂಬಿಕೆ.

ಬೆಂಗಳೂರಿನ ಸದ್ಯದ ಪ್ರತಿ ದಿನದ ಬೇಡಿಕೆಯಾದ 2,600 ಮಿಲಿಯನ್ ಲೀಟರ್ ನೀರನ್ನು ಪೂರೈಸಲು ಪುತಿ ದಿನ 500 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದಾರೆ. ಪ್ರಸ್ತುತ ನಗರವು ಕಾವೇರಿ ನದಿಯಿಂದ 1,470 ಮಿಲಿಯನ್ ಲೀಟರ್ ಮತ್ತು ಬೋರ್​ವೆಲ್ ಮೂಲಗಳಿಂದ 650 ಮಿಲಿಯನ್ ಲೀಟರ್​​ಗಳನ್ನು ಪಡೆಯುತ್ತದೆ. ದುರದೃಷ್ಟವಶಾತ್, ನಗರದಲ್ಲಿರುವ ಸುಮಾರು 14,000 ಕೊಳವೆ ಬಾವಿಗಳ ಪೈಕಿ 6,900 ಬತ್ತಿ ಹೋಗಿರುವುದು ತಿಳಿದುಬಂದಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಪ್ರಸ್ತುತ ನಗರದ ದೊಡ್ಡ ಭಾಗಕ್ಕೆ, ಅಂದರೆ ಎಂಟು ಪ್ರದೇಶಗಳಿಗೆ ಒಟ್ಟು 575 ಚದರ ಕಿಲೋಮೀಟರಗಳಷ್ಟು ವ್ಯಾಪ್ತಿಗೆ ನೀರನ್ನು ಪೂರೈಸುತ್ತಿದೆ. ಕಾವೇರಿ ಐದನೇ ಹಂತದ ಯೋಜನೆಯು ಈ ಸೇವೆಯನ್ನು ಹೆಚ್ಚುವರಿ 110 ಹಳ್ಳಿಗಳನ್ನು ಒಳಗೊಂಡಂತೆ 225 ಚದರ ಕಿಲೋಮೀಟಗಿಂತಲೂ ಹೆಚ್ಚಿನ ವ್ಯಾಪ್ತಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಇದರಿಂದ 2024ರ ಅಂತ್ಯದ ವೇಳೆಗೆ ನಗರಕ್ಕೆ ಪ್ರತಿ ದಿನ 775 ಮಿಲಿಯನ್ ಲೀಟರ್ ನೀರು ಪೂರೈಕೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅಪಾರ್ಟ್ಮೆಂಟ್​​ಗಳಲ್ಲಿ ನೀರಿನ ಸಂಕಷ್ಟ, ಫ್ಲ್ಯಾಟ್ ಬಾಡಿಗೆ ಕಡಿಮೆ ಮಾಡಲು ಹೆಚ್ಚಾಯ್ತು ಆಗ್ರಹ

ಕಾವೇರಿ ಐದನೇ ಹಂತದ ಯೋಜನೆಯು 5,500 ಕೋಟಿ ರೂ. ವೆಚ್ಚದಲ್ಲಿ ಸಾಕಾರಗೊಳ್ಳಲಿದೆ. ಜಪಾನ್ ಮೂಲಸೌಕರ್ಯ ಸಹಕಾರ ಏಜೆನ್ಸಿಯಿಂದ ಸಾಲ ಪಡೆದು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಿಂದ ಪ್ರತಿದಿನ 12 ಲಕ್ಷ ಜನರಿಗೆ ನೀರು ಪೂರೈಸಲು ಉದ್ದೇಶಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ