Bangalore Water Crisis: ಅಪಾರ್ಟ್ಮೆಂಟ್​​ಗಳಲ್ಲಿ ನೀರಿನ ಸಂಕಷ್ಟ, ಫ್ಲ್ಯಾಟ್ ಬಾಡಿಗೆ ಕಡಿಮೆ ಮಾಡಲು ಹೆಚ್ಚಾಯ್ತು ಆಗ್ರಹ

ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ತೀವ್ರ ನೀರಿನ ಬಿಕ್ಕಟ್ಟು ಅಪಾರ್ಟ್ಮೆಂಟ್​​ಗಳ ಮಾಲೀಕರಿಗೆ ತಲೆಬಿಸಿ ತಂದೊಡ್ಡಿದೆ. ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆಯ ಕಾರಣಕ್ಕೆ ಫ್ಲ್ಯಾಟ್ ಬಾಡಿಗೆ ಕಡಿಮೆ ಮಾಡುವಂತೆ ಬಾಡಿಗೆದಾರರು ಆಗ್ರಹಿಸಿದ್ದರೆ, ಇನ್ನು ಹಲವೆಡೆ ಜನ ಫ್ಲ್ಯಾಟ್ ಬದಲು ಇಂಡಿವಿಜುವಲ್ ಮನೆಗಳನ್ನೇ ಹುಡುಕುತ್ತಿದ್ದಾರೆ.

Bangalore Water Crisis: ಅಪಾರ್ಟ್ಮೆಂಟ್​​ಗಳಲ್ಲಿ ನೀರಿನ ಸಂಕಷ್ಟ, ಫ್ಲ್ಯಾಟ್ ಬಾಡಿಗೆ ಕಡಿಮೆ ಮಾಡಲು ಹೆಚ್ಚಾಯ್ತು ಆಗ್ರಹ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Mar 22, 2024 | 6:55 AM

ಬೆಂಗಳೂರು, ಮಾರ್ಚ್​ 22: ಬೆಂಗಳೂರಿನಲ್ಲಿ ಉಂಟಾಗಿರುವ ತೀವ್ರ ನೀರಿನ ಬಿಕ್ಕಟ್ಟು (Bengaluru Water Crisis) ಇದೀಗ ಅಪಾರ್ಟ್ಮೆಂಟ್​​ಗಳ ಮಾಲೀಕರಿಗೆ ತಲೆಬಿಸಿ ತಂದೊಡ್ಡಿದೆ. ವಿಶೇಷವಾಗಿ ಕಾವೇರಿ ನೀರಿನ (Cauvery Water) ಸಂಪರ್ಕ ಇರದ ಪ್ರದೇಶಗಳ ಅಪಾರ್ಟ್ಮೆಂಟ್​​ಗಳಲ್ಲಿ ಖಾಲಿ ಇರುವ ಫ್ಲ್ಯಾಟ್​ಗಳಿಗೆ ಬಾಡಿಗೆಗೆ ಬರಲು ಜನ ಹಿಂದೆಟು ಹಾಕುತ್ತಿದ್ದಾರೆ. ಫ್ಲ್ಯಾಟ್​ಗಳ ಬದಲು ಮನೆಗಳನ್ನೇ ಜನ ಹುಡುಕುತ್ತಿದ್ದಾರೆ ಎಂಬುದು ರಿಯಲ್ ಎಸ್ಟೇಟ್ (Real Estate) ಉದ್ಯಮದ ಮೂಲಗಳಿಂದ ತಿಳಿದುಬಂದಿದೆ. ಅಪಾರ್ಟ್ಮೆಂಟ್​​​ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ ಎಂಬುದು ಪ್ರತಿದಿನ ವರದಿಯಾಗುತ್ತಿದೆ. ಈ ಕುರಿತ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದ ಜನ ಫ್ಲ್ಯಾಟ್​ಗಳನ್ನು ಬಾಡಿಗೆಗೆ ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ನೀರು ಮೂಲಭೂತ ಅವಶ್ಯಕತೆಯಾಗಿರುವುದರಿಂದ ಜನರು ಫ್ಲ್ಯಾಟ್​ ಬದಲು ಇಂಡಿವಿಜುವಲ್ ಹೌಸ್​​ಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಕೋಣನಕುಂಟೆ ಕ್ರಾಸ್, ತಲಘಟ್ಟಪುರ ಹಾಗೂ ಅಂಜನಾಪುರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿ ರಾಜು ಎಂಬವರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಇನ್ನೂ ಅನೇಕರು ಪರಿಸ್ಥಿತಿಯ ಲಾಭ ಪಡೆದುಕೊಂಡು ಬಾಡಿಗೆಯಲ್ಲಿ ಶೇಕಡ ಹತ್ತರಷ್ಟು ಕಡಿಮೆ ಮಾಡುವಂತೆ ಬೇಡಿಕೆ ಇಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನಗರದ ಅನೇಕ ಅಪಾರ್ಟ್ಮೆಂಟ್​​ಗಳಲ್ಲಿ ನೀರು ಪೂರೈಕೆಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಕೆಲವೇ ಗಂಟೆಗಳ ಕಾಲ ನೀರು ಬಿಡಲಾಗುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಗ್ರಾಹಕರು ಬಾಡಿಗೆ ಕಡಿಮೆ ಮಾಡುವಂತೆ ಕೇಳುತ್ತಿದ್ದಾರೆ ಎಂದು ಜೆಪಿ ನಗರ ಮತ್ತು ಕನಕಪುರ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಿರ್ವಹಿಸುತ್ತಿರುವ ಶ್ರೀನಿವಾಸ್ ಎಂಬವರು ತಿಳಿಸಿದ್ದಾರೆ.

ಟೆಕ್ ಪಾರ್ಕ್​​ಗಳಿಗೆ ಸನಿಹದಲ್ಲಿರುವ ಅಪಾರ್ಟ್ಮೆಂಟ್​​ಗಳಲ್ಲಿ ಪರಿಸ್ಥಿತಿ ತುಸು ಉತ್ತಮವಾಗಿದೆ. ಆದರೆ ಕನಕಪುರ ರಸ್ತೆಯ ಆಸುಪಾಸು ಇರುವ ಅಪಾರ್ಟ್ಮೆಂಟ್​​ಗಳಲ್ಲಿ ಸಮಸ್ಯೆ ಗಂಭೀರವಾಗಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ತಿಳಿಸಿದ್ದಾರೆ.

ಪಿಜಿಗಳಿಗೆ ಸಂಕಷ್ಟ

ನಗರದಲ್ಲಿನ ಪೇಯಿಂಗ್ ಗೆಸ್ಟ್​​ಗಳು (ಪಿಜಿ) ಸಹ ಕಠಿಣ ಪರಿಸ್ಥಿತಿ ಎದುರಿಸುತ್ತಿವೆ. ಒಂದೆಡೆ ನೀರಿನ ಪೂರೈಕೆಗಾಗಿ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾಗಿರುವುದರಿಂದ ಅವರ ನಿರ್ವಹಣಾ ವೆಚ್ಚವು ಗಮನಾರ್ಹವಾಗಿ ಹೆಚ್ಚಾಗಿದೆ. ಇನ್ನೊಂದೆಡೆ ಅನೇಕರು ಉತ್ತಮ ನೀರು ಸರಬರಾಜು ಇರುವ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನೀರು ಉಳಿಸಲು ಜನಾಂದೋಲನ, ವಿಶೇಷ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ನೀರಿನ ಬಿಕ್ಕಟ್ಟು ತಾತ್ಕಾಲಿಕ ಪರಿಸ್ಥಿತಿಯಾಗಿರುವುದರಿಂದ ನಾವು ಹೆಚ್ಚಿನ ಬಾಡಿಗೆಗೆ ಬೇಡಿಕೆಯಿಡಲು ಸಾಧ್ಯವಿಲ್ಲ. ಆದರೂ ನೀರನ್ನು ಜಾಗರೂಕತೆಯಿಂದ ಬಳಸುವಂತೆ ನಾವು ವಿನಂತಿಸುತ್ತಿದ್ದೇವೆ ಎಂದು ಬೆಂಗಳೂರು ಪಿಜಿ ಮಾಲೀಕರ ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ