Bangalore Water Crisis: ನೀರು ಉಳಿಸಲು ಜನಾಂದೋಲನ, ವಿಶೇಷ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

Save Water Campaign: ನೀರಿನ ಬಿಕ್ಕಟ್ಟನ್ನು ಎದುರಿಸುವ ಸಲುವಾಗಿ ಮತ್ತು ನೀರು ಉಳಿಸುವುದಕ್ಕಾಗಿ ಸರ್ಕಾರವು ಜನಾಂದೋಲನ ಹಮ್ಮಿಕೊಂಡಿದೆ.ಇದರ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಹಿತಿ ನೀಡಿದೆ. ನೀರು ಉಳಿಸುವ ವಿಶೇಷ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Bangalore Water Crisis: ನೀರು ಉಳಿಸಲು ಜನಾಂದೋಲನ, ವಿಶೇಷ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Vinayak Hanamant Gurav
| Updated By: Ganapathi Sharma

Updated on: Mar 21, 2024 | 2:21 PM

ಬೆಂಗಳೂರು, ಮಾರ್ಚ್​ 21: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು (Bengaluru Water Crisis) ತೀವ್ರಗೊಂಡಿರುವ ಕಾರಣ ನೀರಿನ ಬಳಕೆ ಕಡಿಮೆ ಮಾಡಲು ಮತ್ತು ಉಳಿಸುವುದಕ್ಕಾಗಿ ಸರ್ಕಾರ ಜನಾಂದೋಲನ (Save Water Campaign) ಹಮ್ಮಿಕೊಂಡಿದೆ. ಈ ಜನಾಂದೋಲನದ ಅಡಿಯಲ್ಲಿ ಕೈಗೊಳ್ಳಲಾಗಿರುವ ವಿಶೇಷ ಕ್ರಮಗಳ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಾಹಿತಿ ನೀಡಿದೆ. ನೀರು ಉಳಿಸುವುದಕ್ಕಾಗಿ ಜನಾಂದೋಲನ ಮಾಡಲಾಗುತ್ತಿದೆ.ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಆಂದೋಲನ ನಡೆಸಲಾಗುತ್ತಿದ್ದು, ಇದರಡಿಯಲ್ಲಿ ವಿಶೇಷವಾಗಿ ಮೂರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.

ಜನಾಂದೋಲದ ಅಡಿಯಲ್ಲಿ ಕೈಗೊಳ್ಳಲಾಗಿರುವ ಪ್ರಮುಖ ಮೂರು ಕ್ರಮಗಳ ಮಾಹಿತಿ ಹೀಗಿದೆ;

  1. ಕಾವೇರಿ ನೀರಿನ ಬಳಕೆಗೆ ಹೆಚ್ಚು ಆದ್ಯತೆ ನೀಡಿ ಬೋರ್​ವೆಲ್ ನೀರು ಉಳಿತಾಯ ಮಾಡುವುದು. ಇದರಿಂದ ಶೇ 30-40 ರಷ್ಟು ನೀರಿನ ಕೊರತೆ ಕಡಿಮೆ ಮಾಡಬಹುದು ಎಂದು ಮಂಡಳಿ ತಿಳಿಸಿದೆ.
  2. ಸಂಸ್ಕರಿಸಿದ ನೀರು ಬಳಕೆ ಮಾಡುವುದು. ಸದ್ಯ 1350 ಎಮ್‌ಎಲ್​​ಡಿ (ಮಿಲಿಯನ್ ಲೀಟರ್ ಪರ್ ಡೇ) ಕಾವೇರಿ ನೀರು ಬೆಂಗಳೂರಿಗೆ ಸರಬರಾಜು ಆಗುತ್ತದೆ. 1300 ಎಮ್‌ಎಲ್​​ಡಿ ನೀರು ಎಸ್‌ಟಿಪಿ ಮೂಲಕ ಸಂಸ್ಕರಿಸಲಾಗುತ್ತದೆ. ಈ ನೀರನ್ನ ವಾಣಿಜ್ಯ ಉದ್ದೇಶಗಳಿಗೆ, ಕೈಗಾರಿಕೆಗಳಿಗೆ ಉಪಯೋಗ ಮಾಡಬಹುದು. ಬೆಂಗಳೂರಿನ ಐಪಿಎಲ್ ಮ್ಯಾಚ್‌ಗೆ ಪರಿಸರಸ್ನೇಹಿ (ಸಂಸ್ಕರಿಸಿದ) ನೀರು ಉಪಯೋಗ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನೀರಿನ ಅಭಾವದಿಂದ ಹೊರಬರಲು ಸಂಸ್ಕರಿಸಿದ ನೀರು ನೆರವಾಗಲಿದೆ. ಈಗಾಗಲೇ 49 ಸಂಸ್ಥೆಗಳು ಸಂಸ್ಕರಿಸಿದ ನೀರಿಗಾಗಿ ಮುಂದೆ ಬಂದಿವೆ. ಈ ಮೂಲಕ ಕುಡಿಯುವ ನೀರಿನ ಒತ್ತಡ ಕಡಿಮೆ ಮಾಡಬಹುದು.
  3. ಮರು ಬಳಕೆ ನೀರನ್ನು ಕೆರೆಗಳಿಗೆ ತುಂಬಿಸಿ ಅಂತರ್ಜಲ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಶೇ 60 ರಷ್ಟು ಕಾವೇರಿಯಿಂದ ಹಾಗೂ ಶೇ 40 ಭೂಮಿಯಿಂದ ತಗೆದುಕೊಳ್ಳುತ್ತೇವೆ. ಭೂಮಿ ತಾಯಿಗೆ ನೀರನ್ನು ಮತ್ತೆ ಕೊಡಬೇಕು ಹೀಗಾಗಿ ಮಳೆ ನೀರು ಭೂಮಿಗೆ ವಾಪಸ್ ಕೊಡಬೇಕು. ಬೋರ್‌ವೆಲ್ ರಿಚಾರ್ಜ್ ಮಾಡಬೇಕು. ಒಂದು ಬೋರ್ ವೆಲ್ ಕೊರದರೆ ಎರಡು ಇಂಗು ಗುಂಡಿ ಕಡ್ಡಾಯ ಮಾಡಲಾಗಿದೆ ಎಂದು ಜಲ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಐಪಿಎಲ್ ಸ್ಥಳಾಂತರ ಇಲ್ಲ, ಚಿನ್ನಸ್ವಾಮಿ ಸ್ಟೇಡಿಯಂಗೆ ಸಂಸ್ಕರಿಸಿದ ನೀರು: ಜಲ ಮಂಡಳಿ ಭರವಸೆ

ಐಪಿಎಲ್ ಪಂದ್ಯಕ್ಕಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಪಂದ್ಯದ ವೇಳೆ 75,000 ಲೀಟರ್ ಸಂಸ್ಕರಿಸಿದ ನೀರನ್ನು ಪೂರೈಸುವ ಭರವಸೆಯನ್ನು ಬಿಡಬ್ಲ್ಯುಎಸ್‌ಎಸ್‌ಬಿ ಈಗಾಗಲೇ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್