
ಬೆಂಗಳೂರು, ಜ.20: ಬೆಂಗಳೂರಿನಲ್ಲಿ ಲೈಂಗಿಕ ಕಿರುಕುಳ (Bangalore women safety) ಪ್ರಕರಣಗಳು ಹೆಚ್ಚಾಗಿದೆ. ಈ ಕಾರಣದಿಂದಲ್ಲೇ ಬೆಂಗಳೂರು ಸೇಫ್ ಅಲ್ಲ ಎಂಬ ಅಭಿಪ್ರಾಯಕ್ಕೆ ಹೆಚ್ಚಿನ ಮಹಿಳೆಯರು ಬಂದಿದ್ದಾರೆ. ಇದೀಗ ಮಹಿಳೆಯೊಬ್ಬರು ಬೆಂಗಳೂರಿನ ಬಳಿಯ ಆವಲಹಳ್ಳಿ ಅರಣ್ಯದಲ್ಲಿ ಓಡುತ್ತಿದ್ದಾಗ ಮಕ್ಕಳ ಗುಂಪೊಂದು ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಖಾಸಗಿ ಭಾಗದ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ. ಅವರ ಮಾತುಗಳನ್ನು ಕೇಳಲು ಸಾಧ್ಯವಾಗದಷ್ಟು ಕೆಟ್ಟಾಗಿತ್ತು. ಹುಡುಗರಿಗೆ ಏನ್ ಕಲಿಸಬೇಕು ಎನ್ನುವುದಕ್ಕಿಂತ, ಹುಡುಗಿಯರು ತಮ್ಮನ್ನು ಮುಚ್ಚಿಕೊಳ್ಳುವುದನ್ನು ಕಲಿಸಬೇಕಾಗಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
“ಜಾಗಿಂಗ್ ಮುಗಿಸಿ ಮನೆಯ ಕಡೆಗೆ ಹೋಗುವ ವೇಳೆ, 13 ವರ್ಷಕ್ಕಿಂತ ಕಿರಿಯರಾಗಿರುವ ಈ ಬಾಲಕರು, ನನ್ನ ದೇಹದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಆರಂಭದಲ್ಲಿ ಅದಕ್ಕೆ ನಾನು ಗಮನ ನೀಡಲಿಲ್ಲ. ನಂತರದಲ್ಲಿ ಅವರ ಮಾತುಗಳು ಅತಿಯಾಗಿತ್ತು. ಈ ಬಗ್ಗೆ ನಾನು ಅವರನ್ನು ಪ್ರಶ್ನೆ ಮಾಡಿದೆ. ನಿಮ್ಮ ಮನೆಯಲ್ಲಿ ಇದನ್ನೇ ಕಲಿಸುವುದ ಎಂದು ಗದರಿದೆ” ಎಂದು ಪೋಸ್ಟ್ನಲ್ಲಿ ಮಹಿಳೆ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ನೆಟ್ಟಿಗರು ಮಕ್ಕಳಿಗೆ ಹೆತ್ತವರು ಸರಿಯಾದ ವಿಚಾರಗಳನ್ನು ಕಲಿಸಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಾಸಲೀಲೆ ವಿಡಿಯೋ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ಅಮಾನತು
ಮೇಡಂ ನೀವು ಆ ಮಕ್ಕಳ ಬಗ್ಗೆ ವಿಡಿಯೋ ಮಾಡಿ ಹಾಕಬೇಕಿತ್ತು. ಆಗಾ ಅವರಿಗೆ ಬುದ್ಧಿ ಬರುತ್ತಿತ್ತು ಎಂದು ಒಬ್ಬರು ಹೇಳಿದ್ದಾರೆ. ಈ ಕಮೆಂಟ್ಗೆ ಆ ಮಹಿಳೆ ಕೂಡ ಉತ್ತರಿಸಿದ್ದಾರೆ. ನನಗೂ ಆಸೆ ಇತ್ತು. ಆದರೆ ಆ ಮಕ್ಕಳು ಇನ್ನು ಬೆಳೆಯಬೇಕಿದೆ. ಅವರ ಮುಖ ನೋಡುವಾಗ ಅವರ ಭವಿಷ್ಯ ನನ್ನ ಕಣ್ಮುಂದೆ ಬಂತು ಎಂದು ಹೇಳಿದರು. ನಾನೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಇದೊಂದು ಸಮಾಜದ ಪಿಡುಗು ಆಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನೀವು ಹೇಳಿರುವ ಮಾತು ನಿಜ, ಹುಡುಗರು ಹಾಗೂ ಹುಡುಗಿಯರು ಕಲಿಬೇಕಾಗಿರುವುದು ಇನ್ನೂ ಇದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಹೆಣ್ಮಕ್ಕಳು ಇಂದಿಗೂ ಇಂತಹ ಪರಿಸ್ಥಿತಿ ಅನುಭವಿಸಬೇಕಲ್ಲ ಎಂಬ ನೋವು ನಮಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡ