ಬೆಂಗಳೂರು: ಮೊಬೈಲ್ (Mobile) ವಿಚಾರವಾಗಿ ನಡೆದಿದ್ದ ಗಲಾಟೆ ಸಂಬಂಧ ಉಪ್ಪಾರಪೇಟೆ ಪೊಲೀಸರು (Upparpete Police) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಜಯ್ ಜೋಸೆಫ್ (24) ಹಾಗೂ ಪ್ರಸನ್ನ ಕುಮಾರ್ (40) ಬಂಧಿತ ಆರೋಪಿಗಳು. ಅಜಯ್ ಜೋಸೆಫ್, ಸುಂದರ್ಗೆ ಮೊಬೈಲ್ ಕಾಣುತ್ತಿಲ್ಲವೆಂದು ಪ್ರಶ್ನಿಸಿದಾಗ ಸುಂದರ್ ಬಾರ್ ಟೆಂಡರ್ ನನ್ನ ಪ್ರಶ್ನಿಸಿ ಎಂದು ಉತ್ತರಿಸಿದ್ದಾನೆ. ಆಗ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳದು ಅಜಯ್ ಜೋಸೆಫ್ ಮತ್ತು ಪ್ರಸನ್ನ ಕುಮಾರ್ ಗಲಾಟೆ ಪ್ರಾರಂಭಿಸಿದ್ದಾರೆ.
ಆಗ ಇಬ್ಬರು ಸುಂದರ್ಗೆ ಚಾಕುವಿನಿಂದ ಹಣೆಗೆ ಹಲ್ಲೆ ಮಾಡಿ ದಮ್ಕಿ ಹಾಕಿದ್ದಾರೆ. ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಸುಂದರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನ ಆದರದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರ ಪೈಕಿ ಅಜಯ್ ಜೋಸೆಫ್ ಬೆಂಗಳೂರು ಯುವ ಕಾಂಗ್ರೆಸ್‌ನ (Congress) ಮಾಜಿ ಕಾರ್ಯದರ್ಶಿಯಾಗಿದ್ದಾನೆ. ಇಬ್ಬರೂ ಸಹ ಯುವ ಕಾಂಗ್ರೆಸ್ ನಾಯಕನ ಆಪ್ತರಾಗಿದ್ಧಾರೆ. ಸದ್ಯ ಇಬ್ಬರನ್ನೂ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ಧಾರೆ.
ಇದನ್ನು ಓದಿ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತ ಗಂಡು-ಹೆಣ್ಣಿನ ಬೆತ್ತಲೆ ಮೆರವಣಿಗೆ; ಆರೋಪಿಯ ಹೆಂಡತಿ ಬಂಧನ
ಚಲಿಸುತ್ತಿದ್ದ ಕಾರ್ ಪಲ್ಟಿ, ಕಾರು ಚಾಲಕ ಅಪಾಯದಿಂದ ಪಾರು
ವಿಜಯಪುರ: ಚಲಿಸುತ್ತಿದ್ದ ಕಾರ್ ಟೈರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿದ್ದು, ಕಾರು ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಗುಂದವಾನ ಬಳಿ ಎನ್ ಎಚ್ 50 ರಲ್ಲಿ ನಡೆದಿದೆ. ಕಾರು ಚಾಲಕ ಮಹಾರಾಷ್ಟ್ರ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಕಾನ್ಸಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಕಾರನ್ನು ಚಾಲನೆ ಮಾಡಿಕೊಂಡು ಒಬ್ಬರೇ ಬೆಂಗಳೂರಿನಿಂದ ಸೊಲ್ಲಾಪುರಕ್ಕೆ ಹೊರಟಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಪಲ್ಟಿಯ ರಭಸಕ್ಕೆ ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆದ ಕಾರಣ ಕಾರಿನಲ್ಲಿದ್ದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಕಾನ್ಸಸ್ಟೇಬಲ್ ಹೆಸರು ವಿಳಾಸ ಇನ್ನೂ ತಿಳಿದು ಬಂದಿಲ್ಲ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:51 pm, Tue, 14 June 22