Bengaluru Power Cut: ಬೆಂಗಳೂರಿನ ಈ ಬಡಾವಣೆಗಳಲ್ಲಿ ಜೂ.17 ರಂದು ಪವರ್​ ಕಟ್​​

|

Updated on: Jun 16, 2023 | 3:55 PM

ಬೆಂಗಳೂರಿನ ಜಯನಗರದ ಸುತ್ತಮುತ್ತಲಿನ ಹಲವು ಬಡಾವಣೆಗಳಲ್ಲಿ ಶನಿವಾರ ವಿದ್ಯುತ್ ​ವ್ಯತ್ಯಯವಾಗಲಿದೆ. ಹಾಗಿದ್ದರೇ ಯಾವ ಯಾವ ಬಡವಾಣೆಗಳಲ್ಲಿ ಕರೆಂಟ್​ ಇರುವುದಿಲ್ಲ ಇಲ್ಲಿದೆ ಮಾಹಿತಿ.

Bengaluru Power Cut: ಬೆಂಗಳೂರಿನ ಈ ಬಡಾವಣೆಗಳಲ್ಲಿ ಜೂ.17 ರಂದು ಪವರ್​ ಕಟ್​​
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜಧಾನಿಯ ದಕ್ಷಿಣ ಭಾಗವಾದ ಜಯನಗರ (Jayanagar) ಉಪವಿಭಾಗ ವ್ಯಾಪ್ತಿಯ (ಸುತ್ತಮುತ್ತಲಿನ) ಹಲುವು ಬಡಾವಣೆಗಳಲ್ಲಿ ನಾಳೆ (ಜೂ.17) ರಂದು ವಿದ್ಯುತ್​ ವ್ಯತ್ಯಯವಾಗಲಿದೆ (Power Cut). ಅಂದು ಜಯನಗರದ ಹಲವು ಬಡಾವಣೆಗಳಲ್ಲಿ ತುರ್ತು ​​ನಿರ್ವಹಣಾ ಕಾರ್ಯ ನಡೆಯುವುದರಿಂದ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಐದು ಗಂಟೆಗಳ ಕಾಲ ವಿದ್ಯುತ್​​ ನಿಲುಗಡೆ ಮಾಡಲಾಗುತ್ತದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.

ಪವರ್​ ಕಟ್​ ಆಗುವ ಏರಿಯಾಗಳು

ಜಯನಗರ 1,2,3ನೇ ಬ್ಲಾಕ್​​, ಜಯನಗರ 4ನೇ ಬ್ಲಾಕ್​​, ಜಯನಗರ 9ನೇ ಬ್ಲಾಕ್​, ಐಎಎಸ್​​ ಕಾಲೋನಿ, ಕೆಎಎಸ್​ ಕಾಲೋನಿ, ತಿಲಕ್​​ನಗರ, ಎನ್​​.ಎಸ್​.ಪಾಳ್ಯ ಕೈಗಾರಿಕಾ ಪ್ರದೇಶ. ಜೆಆರ್​ಬಿ ಮುಖ್ಯರಸ್ತೆ, ಅನಂತರ ಲೇಔಟ್​​, ಶಾಂತಿ ಪಾರ್ಕ್​​, ಬಳೇಕಹಳ್ಳಿ, ಎಸ್​ಆರ್​ಕೆ ಗಾರ್ಡನ್​​, ಬಿಎಚ್​​ಇಎಲ್​​ ಲೇಔಟ್​​, ನಿಮ್ಹಾನ್ಸ್​​, ಜಯದೇವ ಆಸ್ಪತ್ರೆ ಪ್ರದೇಶ, ಕಿದ್ವಾಯಿ ಆಸ್ಪತ್ರೆ ಪ್ರದೇಶದಲ್ಲಿ ವಿದ್ಯುತ್​​ ವ್ಯತ್ಯಯವಾಗಲಿದೆ.

ಇದನ್ನೂ ಓದಿ: KCET Results 2023: ಇಂಜಿನಿಯರಿಂಗ್ ಕೋರ್ಸ್‌ನಲ್ಲಿ ಟಾಪ್ 10ರಲ್ಲಿ, 8 ರ‍್ಯಾಂಕ್‌ ಪಡೆದುಕೊಂಡ ಬೆಂಗಳೂರು

ಹಾಗೇ ಬಿಟಿಎಂ 2ನೇ ಹಂತ, ಮೈಕೋ ಲೇಔಟ್​​, ಎಂಸಿಹೆಚ್​​ ಲೇಔಟ್​​, ದಿವ್ಯ ಟವರ್ಸ್​​​, ಬನ್ನೇರಘಟ್ಟ, ಮುಖ್ಯ ರಸ್ತೆ, ಮಂತ್ರಿ ಅಪಾರ್ಟ್​​ಮೆಂಟ್​, ಗುರಪ್ಪನಪಾಳ್ಯ, ಬಿಸ್ಮಿಲ್ಲಾ ನಗರ, ಶಾಂತಿನಿಕೇತನ ಶಾಲೆ, ಕೆಇಬಿ ಕಾಲೋನಿ, ವಿಲ್ಸನ್​ ಗಾರ್ಡನ್​​, ಇಟ್ಟುಮಡು, ಚಿಕ್ಕಲಸಂದ್ರ, ಎರಹಳ್ಳಿ, ಯಲಚೇನಹಳ್ಳಿ, ವೈಶ್ಯ ಬ್ಯಾಂಕ್​​ ಕಾಲೋನಿಯಲ್ಲೂ ವಿದ್ಯುತ್​ ನಿಲುಗಡೆಯಾಗಲಿದೆ.ಈ ಐದು ಗಂಟೆ ಕಾಲ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ನೆಲಮಂಗಲ ಗ್ರಾಮಾಂತರ ತಾಲೂಕಿನಲ್ಲಿ ವಿದ್ಯುತ್​ ವ್ಯತ್ಯಯ

ಬೆಂಗಳೂರು ಗ್ರಾಮಾಂತರ: ನೆಲಮಂಗಲ ಗ್ರಾಮಾಂತರ ತಾಲೂಕಿನ ದಾಬಸ್​​ಪೇಟೆಯ ಭಾಗದಲ್ಲಿ ಹತ್ತು ದಿನಗಳ ಕಾಲ ವಿದ್ಯುತ್​ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 220 ಕೆವಿ ದಾಬಸ್​ಪೇಟೆ ಉಪ ಕೇಂದ್ರದಲ್ಲಿ ಪರಿವರ್ತಕ ತೈಲ ಬದಲಾವಣೆ ಕಾಮಗಾರಿ ನಡೆಯುತ್ತಿದೆ.

ಈ ಹಿನ್ನೆಲೆ ಐಪಿ ಪೂರಕಗಳನ್ನು ಬದಲಾಯಿಸಲಾಗುತ್ತಿದೆ. ಜೂ.13 ರಿಂದ 23ರವರೆಗೆ ವಿದ್ಯುತ್​​ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಳಿಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಡಚಣೆಯಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್​ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Fri, 16 June 23