ಕಾಮಗಾರಿ ನಡೆಸದೇ 118 ಕೋಟಿ ರೂ. ನಕಲಿ ಬಿಲ್ ಸೃಷ್ಟಿ: 11 ಅಧಿಕಾರಿಗಳು ಅಮಾನತು
118 ಕೋಟಿ ರೂಪಾಯಿ ಮೊತ್ತದ ನಕಲಿ ಬಿಲ್ ಸೃಷ್ಟಿಸಿದ ಆರೋಪದಲ್ಲಿ 11 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಬೆಂಗಳೂರು: 2019-20ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ(Rajarajeshwari Nagar Assembly constituency) ಕಾಮಗಾರಿ ನಡೆಸದೇ 118 ಕೋಟಿ ರೂಪಾಯಿ ನಕಲಿ ಬಿಲ್ (Fake Bill) ಸೃಷ್ಟಿಸಿದ ಆರೋಪದ ಮೇಲೆ 11 ಬಿಬಿಎಂಪಿ(BBMP) ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಳಪೆ ಕಾಮಗಾರಿ ಸಂಬಂಧ ಲೋಕಾಯುಕ್ತಕ್ಕೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್(DK Suresh) ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದ 9 ಬಿಬಿಎಂಪಿ ಇಂಜಿನಿಯರ್, ಓರ್ವ ಅಧೀಕ್ಷಕ, ಓರ್ವ ಉಪ ನಿರ್ದೇಶಕ ಸೇರಿದಂತೆ ಒಟ್ಟು 11 ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ ಹಗರಣದ ತನಿಖೆಗಾಗಿ ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಿದೆ.
ಅಮಾನತ್ತುಗೊಂಡ ಅಧಿಕಾರಿಗಳು
- ದೊಡ್ಡಯ್ಯ- ಮುಖ್ಯ ಇಂಜಿನಿಯರ್ ಟಿವಿಸಿಸಿ ವಿಭಾಗ
- ಸತೀಶ್- ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಟಿವಿಸಿಸಿ ವಿಭಾಗ
- ವಿಜಯ್ ಕುಮಾರ್- ಮುಖ್ಯ ಇಂಜಿನಿಯರ್ ಆರ್ಆರ್ ನಗರ ವಲಯ
- ಶಿಲ್ಪಾ- ಸಹಾಯಕ ಇಂಜಿನಿಯರ್ ಆರ್ಆರ್ ವಲಯ
- ಮೋಹನ್- ಮುಖ್ಯ ಇಂಜಿನಿಯರ್ ಯೋಜನಾ ವಿಭಾಗ ಆರ್ಆರ್ ವಲಯ
- ಭಾರತಿ- ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ ಆರ್ಆರ್ ವಲಯ
- ಬಸವರಾಜ್- ಕಾರ್ಯಪಾಲಕ ಇಂಜಿನಿಯರ್ ಆರ್ಆರ್ ನಗರ ವಲಯ
- ಸಿದ್ದಯ್ಯ-ಸಹಾಯಕ ಇಂಜಿನಿಯರ್ ವಾರ್ಡ್ ನಂ-129 ಮತ್ತು 160
- ಉಮೇಶ್ -ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಗ್ಗೆರೆ
- ಅನಿತಾ- ಸೂಪರಿಡೆಂಟ್, ಕ್ಯಾರಿಯರ್ ಆರ್ಆರ್ ನಗರ ವಲಯ
- ಗೂಳಿಗೌಡ-ಡೆಪ್ಯುಟಿ ಮ್ಯಾನೇರ್ ಆರ್ಆರ್ ನಗರ ವಲಯ
ಬೆಂಗಳೂರು ನಗರದ ಆರ್ ಆರ್ ನಗರ ವಲಯದಲ್ಲಿ ಕಾಮಗಾರಿ ನಡೆಸದೇ ಸುಮಾರು 118 ಕೋಟಿ ರುಪಾಯಿ ಬಿಲ್ ಸೃಷ್ಟಿಸಿರುವುದು ಅಕ್ರಮ ಕಂಡುಬಂದಿದ್ದು ಈ ಬಗ್ಗೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ತನಿಖೆಯಲ್ಲಿ ಅಧಿಕಾರಿಗಳು ಆರೋಪ ಮಾಡಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮೇಲಿನ 11 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ