ಬೆಂಗಳೂರು ಅ.18: ಪ್ರೊಬೆಷನರಿ ಮಹಿಳಾ ಪಿಎಸ್ಐ (PSI) ಮೇಲೆ ವ್ಯಕ್ತಿಯೋರ್ವ ನಿಂದನೆ ಮಾಡಿರುವ ಘಟನೆ ಗೋವಿಂದರಾಜನಗರದ (Govindaraj Nagar) ಸುಬ್ಬಣ್ಣ ಗಾರ್ಡನ್ ಬಳಿ ನಡೆದಿದೆ. ಗೋವಿಂದರಾಜನಗರ ನಿವಾಸಿಯಾಗಿರುವ ಭರತ್ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದನು. ಇದನ್ನು ಕಂಡ ಪ್ರೊಬೆಷನರಿ ಮಹಿಳಾ ಪಿಎಸ್ಐ ಅಶ್ವಿನಿ ಹಿಪ್ಪರಗಿ ಬೈಕ್ ತಡೆದು ಬುದ್ಧಿವಾದ ಹೇಳಿ ತಮ್ಮ ಬೈಕ್ ತೆರಳುತ್ತಿದ್ದರು.
ಪಿಎಸ್ಐ ಅಶ್ವಿನಿ ಅವರನ್ನು ಹಿಂಬಾಲಿಸಿದ ಭರತ್, ತನ್ನ ಬೈಕ್ನಿಂದ ಅವರ ಬೈಕ್ಗೆ ಗುದ್ದಿದ್ದಾನೆ. ಬಳಿಕ ನನ್ನತ್ರ ಇಟ್ಕೊಂಡ್ರೆ ಇದೇ ಗತಿ ಅಂತ ದಮ್ಕಿ ಹಾಕಿ ಎಸ್ಕೇಪ್ ಆಗಿದ್ದಾನೆ. ಬೈಕ್ ಡಿಕ್ಕಿ ರಭಸಕ್ಕೆ ಪಿಎಸ್ಐ ಅಶ್ವಿನಿ ಹಿಪ್ಪರಗಿ ಕೆಳಗೆ ಬಿದ್ದಿದ್ದು, ಸಣ್ಣ ಪುಟ್ಟ ಗಾಯವಾಗಿದ್ದು, ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಗೋವಿಂದರಾಜನಗರ ಪೊಲೀಸರು ಆರೋಪಿ ಭರತ್ನನ್ನು ಬಂಧಿಸಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 279, 337, 504ರಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ದೌರ್ಜನ್ಯವೆಸಗಿದ ಹಾಗೂ ಪಿಎಸ್ಐ ಬೈಕ್ಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ ಹಿನ್ನೆಲೆ ಆರೋಪಿ ವಿರುದ್ಧ ರೌಡಿಶೀಟ್ ತೆರೆಯಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ