ಗೌಪ್ಯತೆ ಕಾಪಾಡದೆ ಹೆಚ್ಐವಿ ಸೋಂಕಿತ ಎಂದು ಕಿರುಕುಳ: ಬೆಂಗಳೂರಿನ ಕಂಪನಿ ವಿರುದ್ಧ ಎಫ್ಐಆರ್ ದಾಖಲಿಸಿದ ಉದ್ಯೋಗಿ
ಕಾನೂನು ಪ್ರಕಾರ ಹೆಚ್ಐವಿ ಸೋಂಕಿತರ ಬಗ್ಗೆ ಗೌಪ್ಯತೆ ಕಾಪಾಡಬೇಕು ಎಂಬುದು ಗಮನಾರ್ಹ. ಗೌಪ್ಯತೆ ಕಾಪಾಡದೆ ಹೆಚ್ಐವಿ ಸೋಂಕಿತಗೆ ಕಿರುಕುಳ ನೀಡಿದ್ದ ಕಂಪನಿಯ ವಿರುದ್ಧ ಸಂತ್ರಸ್ತ ಉದ್ಯೋಗಿ ಕೋರ್ಟ್ ಮೊರೆ ಹೋಗಿದ್ದರು. ಮಾನಕ್ಕೆ ಹಾನಿ ಮಾಡಿ ಗೌಪ್ಯತೆ ಕಾಪಾಡದೆ ಹಾಗೂ ಕೆಲಸ ಮಾಡಿಸಿಕೊಂಡು ಸಂಬಳ ಕೊಟ್ಟಿಲ್ಲ ಎಂದು ಕಂಪನಿಯ ವಿರುದ್ಧ ಉದ್ಯೋಗಿ ದೂರು ನೀಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 18: ಹೆಚ್ಐವಿ ಸೋಂಕಿತ ಎಂದು (HIV infected employee) ಬೇಧಭಾವ ತೋರಿ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆ ಬೆಂಗಳೂರಿನ ಖಾಸಗಿ ಕಂಪನಿಯೊಂದರ (private company in Bangalore) ವಿರುದ್ಧ ಎಫ್ಐಆರ್ ದಾಖಲು (FIR) ಮಾಡಲಾಗಿದೆ. ನ್ಯಾಯಾಲಯದ ಪಿಸಿಆರ್ ಮೂಲಕ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಬಾಧಿತ ಉದ್ಯೋಗಿಯನ್ನು ಹೆಚ್ಐವಿ ಇದೆ ಎಂದು ಪ್ರತ್ಯೇಕ ಜಾಗದಲ್ಲಿ ಕಂಪನಿ ಕೂರಿಸುತ್ತಿತ್ತಂತೆ. ಜೊತೆಗೆ ವರ್ಕ್ ಫ್ರಮ್ ಹೋಮ್ ಮಾಡಲು ಸೂಚಿಸಿತ್ತಂತೆ. ನಂತರ ಹಾಜರಾತಿ ಇಲ್ಲ ಎಂದು ಸಂಬಳ ನೀಡದೆ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ: ಮಗು ಅಳ್ತಿದೆ ನಿದ್ದೆ ಬರುತ್ತಿಲ್ಲ ಎಂದು ಅಣ್ಣನ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಮಹಿಳೆ
ಕಾನೂನು ಪ್ರಕಾರ ಹೆಚ್ಐವಿ ಸೋಂಕಿತರ ಬಗ್ಗೆ ಗೌಪ್ಯತೆ ಕಾಪಾಡಬೇಕು (confidentiality) ಎಂಬುದು ಗಮನಾರ್ಹ. ಗೌಪ್ಯತೆ ಕಾಪಾಡದೆ ಹೆಚ್ಐವಿ ಸೋಂಕಿತಗೆ ಕಿರುಕುಳ ನೀಡಿದ್ದ ಕಂಪನಿಯ ವಿರುದ್ಧ ಸಂತ್ರಸ್ತ ಉದ್ಯೋಗಿ ಕೋರ್ಟ್ ಮೊರೆ ಹೋಗಿದ್ದರು. ಮಾನಕ್ಕೆ ಹಾನಿ ಮಾಡಿ ಗೌಪ್ಯತೆ ಕಾಪಾಡದೆ ಹಾಗೂ ಕೆಲಸ ಮಾಡಿಸಿಕೊಂಡು ಸಂಬಳ ಕೊಟ್ಟಿಲ್ಲ ಎಂದು ಕಂಪನಿಯ ವಿರುದ್ಧ ಉದ್ಯೋಗಿ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ