ಬೆಂಗಳೂರು, ಜನವರಿ 20: ಆದಾಯ, ಜಾತಿ ಪ್ರಮಾಣ ಪತ್ರ ಪಡೆಯಲು ಲಂಚಕ್ಕೆ ಬೇಡಿಕೆ ಆರೋಪ ಕೇಳಿಬಂದಿದೆ. ಕಂದಾಯ ಇಲಾಖೆ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ 9 ತಂಡದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಹಲವೆಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ (Lokayukta raid) ಮಾಡಿದ್ದರು. ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಸೇರಿದಂತೆ ನಾಲ್ಕು ತಾಲೂಕು ಕಚೇರಿಗಳು ಮತ್ತು ಬೆಂಗಳೂರು ನಗರ ಜಿಲ್ಲೆಯ 5 ತಾಲೂಕು ಕಚೇರಿಗಳಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳಿಂದ ಪರಿಶೀಲನೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕಛೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಲೋಕಾಯುಕ್ತ ನ್ಯಾಯಾಧೀಶ ಕೆ ಎನ್ ಪಣೀಂದ್ರರಿಂದ ಸಾರ್ವಜನಿಕರ ಸಮಸ್ಯೆ ಆಲಿಸಿದ್ದಾರೆ. ದಾಳಿ ವಿಚಾರ ತಿಳಿದು ಜನರು ಸಮಸ್ಯೆ ಪತ್ರಗಳನ್ನ ತಂದಿದ್ದರು.
ಇದನ್ನೂ ಓದಿ: ಜನವರಿ 23 ರಂದು 545 ಪಿಎಸ್ಐ ಮರು ಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ
ದೊಡ್ಡಬಳ್ಳಾಪುರ ತಾಲೂಕು ಕಚೇರಿ ಆವರಣದಲ್ಲಿ ಜನರ ಸಮಸ್ಯೆಯನ್ನು ನ್ಯಾಯಾಧೀಶರು ಆಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಮೂಲಕ ಸ್ಥಳದಲ್ಲೇ ಸಮಸ್ಯೆ ಬಗೆ ಹರಿಸುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ವಿರುದ್ದ ದಾಖಲೆ ಸಮೇತ ನ್ಯಾಯಾಧೀಶರಿಗೆ ಜನರು ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಹೇಳಿಕೆ ನೀಡಿದ್ದು, ತಹಶೀಲ್ದಾರ್ ಕಚೇರಿಗಳ ವಿರುದ್ಧ 600 ದೂರುಗಳು ಬಂದಿವೆ. ಸುಮೊಟೋ ಕೇಸ್ಗಳಿವೆ, ಅನಿಯಮಿತ ಕೇಸ್ ದಾಖಲಾಗಿವೆ. ಏಜೆಂಟ್ ಹಾವಳಿ, ಹಣ ನೀಡದೆ ಕೆಲಸ ಆಗಲ್ಲ ಎಂಬ ದೂರು ಇದೆ. ಬೆಂಗಳೂರುನಗರ ಜಿಲ್ಲೆಯ 9 ತಹಶೀಲ್ದಾರ್ ಕಚೇರಿಗಳಲ್ಲಿ ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋಚಿಮುಲ್ ನೇಮಕಾತಿ ಹಗರಣಕ್ಕೆ ಮಂಗಳೂರು ವಿವಿ ಲಿಂಕ್! ಪರೀಕ್ಷಾಂಗ ಕುಲಸಚಿವರ ವಿಚಾರಣೆ
ತಹಶೀಲ್ದಾರ್ಗಳ ಮುಂದೆಯೇ ಫೈಲ್ ಪರಿಶೀಲನೆ ಮಾಡಿದ್ದೇವೆ. ಜನರಿಗೆ ಸೂಕ್ತ ನ್ಯಾಯ ಸಿಗಬೇಕು. ದೂರುಗಳು ನೀಡಿದರೆ ಕೆಲಸ ಆಗಲ್ಲ ಅಂತಾ ಜನ ಹೆದರುತ್ತಾರೆ. ಸಾರ್ವಜನಿಕರು ಈ ಬಗ್ಗೆ ಭಯಪಡುವುದು ಬೇಡ. ಲೋಕಾಯುಕ್ತ ಕಾಯ್ದೆಯಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ಲೋಕಾ ದಾಳಿ ವೇಳೆ ಸಹಿ ಮಾಡದೆ ಬಾಕಿ ಇರುವ ದಾಖಲೆಗಳು, ವಿಲೇವಾರಿ ಮಾಡದೆ ಇಟ್ಟಿರುವ ಫೈಲ್ಗಳು, ಫೋರ್ಜರಿ ಫೈಲ್, ಹಲವು ವರ್ಷದಿಂದ ಮೂವ್ ಆಗದೇ ಇರುವ ಫೈಲ್ಗಳು ಪತ್ತೆ ಆಗಿವೆ. ದಕ್ಷಿಣ, ಉತ್ತರ ತಹಶೀಲ್ದಾರ್ ಕಚೇರಿಗೆ ಜನ ಅಲೆದು ಸುಸ್ತಾಗಿದ್ದಾರೆ. ಸಹಿ ಮಾಡದೆ ಜನರನ್ನು ಕಚೇರಿಗೆ ಅಲೆಸುತ್ತಿರುವುದು ಬೆಳಕಿಗೆ ಬಂದಿದ್ದು, ಹಣ ನೀಡದಿದ್ದರೆ ಸಹಿ ಹಾಕಲ್ಲ ಎಂದು ಜನ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.