ಬನ್ನೇರುಘಟ್ಟ: ರಾತ್ರಿ ಪಾಳಿ ಮುಂದುವರಿಸಿದ್ದ ಕರ್ತವ್ಯನಿರತ ಹೆಡ್‌ ಕಾನ್ಸ್‌ಟೇಬಲ್ ಕುಸಿದುಬಿದ್ದು ಸಾವು

| Updated By: ಸಾಧು ಶ್ರೀನಾಥ್​

Updated on: Oct 11, 2021 | 12:46 PM

ಬನ್ನೇರುಘಟ್ಟ ಠಾಣೆಯ ಹೆಚ್‌ಸಿ ದಿನೇಶ್(50) ಮೃತಪಟ್ಟ ಹೆಡ್‌ಕಾನ್ಸ್‌ಟೇಬಲ್. ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗಬೇಕಾಗಿದ್ದ ಪೊಲೀಸ್ ಕಾನ್ಸ್​​ಟೇಬಲ್​ ದಿನೇಶ್, ಬೆಳಗ್ಗೆ ಪಾಳಿಯಲ್ಲೂ ಕೆಲಸ ಮಾಡುತ್ತಿದ್ದರು. ಈ ವೇಳೆ ಕೆಲಸದ ಒತ್ತಡದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಬನ್ನೇರುಘಟ್ಟ: ರಾತ್ರಿ ಪಾಳಿ ಮುಂದುವರಿಸಿದ್ದ ಕರ್ತವ್ಯನಿರತ ಹೆಡ್‌ ಕಾನ್ಸ್‌ಟೇಬಲ್ ಕುಸಿದುಬಿದ್ದು ಸಾವು
ಬನ್ನೇರುಘಟ್ಟ: ರಾತ್ರಿ ಪಾಳಿ ಮುಂದುವರಿಸಿದ್ದ ಕರ್ತವ್ಯನಿರತ ಹೆಡ್‌ಕಾನ್ಸ್‌ಟೇಬಲ್ ಕುಸಿದುಬಿದ್ದು ಸಾವು
Follow us on

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಠಾಣೆ ಬನ್ನೇರುಘಟ್ಟ ಠಾಣೆಯ ಕರ್ತವ್ಯನಿರತ ಹೆಡ್‌ಕಾನ್ಸ್‌ಟೇಬಲ್ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಬನ್ನೇರುಘಟ್ಟ ಠಾಣೆಯ ಹೆಚ್‌ಸಿ ದಿನೇಶ್(50) ಮೃತಪಟ್ಟ ಹೆಡ್‌ಕಾನ್ಸ್‌ಟೇಬಲ್. ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗಬೇಕಾಗಿದ್ದ ಪೊಲೀಸ್ ಕಾನ್ಸ್​​ಟೇಬಲ್​ ದಿನೇಶ್, ಬೆಳಗ್ಗೆ ಪಾಳಿಯಲ್ಲೂ ಕೆಲಸ ಮಾಡುತ್ತಿದ್ದರು. ಈ ವೇಳೆ ಕೆಲಸದ ಒತ್ತಡದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ತಪಸ್ಸೀಹಳ್ಳಿ ಗೇಟ್ ಬಳಿ ಹೆದ್ದಾರಿಯಲ್ಲಿ ಭೀಕರ ಅಪಘಾತ, ಸವಾರರಿಬ್ಬರು ಸ್ಥಳದಲ್ಲೆ ದುರ್ಮರಣ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಪಸ್ಸೀಹಳ್ಳಿ ಗೇಟ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೈಕ್‌ಗೆ ಕಾರು ಡಿಕ್ಕಿಯಾಗಿದ್ದು, ಇಬ್ಬರು ಸವಾರರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಿಹಾರ ಮೂಲದ ದಿನೇಶ್(35) ಮತ್ತು ಅನಿಲ್ (41) ಸಾವಿಗೀಡಾದವರು.

ಯಲಹಂಕ ಮತ್ತು ಹಿಂದೂಪುರ ನಡುವಿನ ರಾಜ್ಯ ಹೆದ್ದಾರಿಯ ತಪಸ್ಸೀಹಳ್ಳಿ ಗೇಟ್ ಬಳಿ ಈ ದುರ್ಘಟನೆ ನಡೆದಿದೆ. ಗೌರಿಬಿದನೂರಿನಿಂದ ದ್ವಿಚಕ್ರ ವಾಹನದಲ್ಲಿ ದೊಡ್ಡಬಳ್ಳಾಪುರ ಕಡೆಗೆ ಬರುತ್ತಿದ್ದ ಸವಾರರು ಸಾವಿಗೀಡಾಗಿದ್ದಾರೆ. ಘಟನೆ ನಡೆದ ತಕ್ಷಣ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಪಸ್ಸೀಹಳ್ಳಿ ಗೇಟ್ ಬಳಿ ಹೆದ್ದಾರಿಯಲ್ಲಿ ಭೀಕರ ಅಪಘಾತ, ಸವಾರರಿಬ್ಬರು ಸ್ಥಳದಲ್ಲೆ ದುರ್ಮರಣ

Also Read:
ಹೊಡೆಯಲ್ಲ ಬೈಯಲ್ಲ, ದಮ್ಮಯ್ಯ ಅಂತೀವಿ ಮೊದಲು ಮನೆಗೆ ಬನ್ನಿ: ಬೆಂಗಳೂರಿನಲ್ಲಿ ನಾಪತ್ತೆಯಾದ 4 ಮಕ್ಕಳ ಪೋಷಕರ ಮನವಿ

Also Read:
ಓದಿನಲ್ಲಿ ಆಸಕ್ತಿ ಇಲ್ಲವೆಂದು ಮನೆ ತೊರೆದಿದ್ದ ಮಕ್ಕಳು ಪತ್ತೆ! ನಿಟ್ಟುಸಿರು ಬಿಟ್ಟ ಪೋಷಕರು: ಪತ್ತೆಯಾಗಿದ್ದು ಹೇಗೆ?

Published On - 12:38 pm, Mon, 11 October 21