ಪ್ರಸ್ತುತ ರಾಜಕೀಯದ ಬಗ್ಗೆ ಹೆಚ್​ಡಿ ದೇವೇಗೌಡ ಬೇಸರ; ಜಯಪ್ರಕಾಶ ನಾರಾಯಣ ಜನ್ಮ ದಿನಾಚರಣೆಯಲ್ಲಿ ಮಾತು

TV9 Digital Desk

| Edited By: ganapathi bhat

Updated on:Oct 11, 2021 | 4:04 PM

HD Deve Gowda: ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಜಯಪ್ರಕಾಶ್ ನಾರಾಯಣ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಮಾತನಾಡಿದ್ದಾರೆ.

ಪ್ರಸ್ತುತ ರಾಜಕೀಯದ ಬಗ್ಗೆ ಹೆಚ್​ಡಿ ದೇವೇಗೌಡ ಬೇಸರ; ಜಯಪ್ರಕಾಶ ನಾರಾಯಣ ಜನ್ಮ ದಿನಾಚರಣೆಯಲ್ಲಿ ಮಾತು
ಬಿಜೆಪಿ 306 ಲೋಕಸಭಾ ಕ್ಷೇತ್ರ ಗೆದ್ದಿದ್ದರು; ಆದರೆ ಮುಂದೆ ಏಕಾಂಗಿಯಾಗಿ ಅಷ್ಟು ಸೀಟ್ ಬರೋದಿಲ್ಲ-ಮಾಜಿ ಪ್ರಧಾನಿ ದೇವೇಗೌಡ ರಾಜಕೀಯ ಭವಿಷ್ಯ


ಬೆಂಗಳೂರು: 1957 ರಲ್ಲಿ ಜಯಪ್ರಕಾಶ ನಾರಾಯಣ ಅವರನ್ನು ಮೊದಲ ಬಾರಿಗೆ ನೋಡಿದೆ. ಆಗ ಅವರು ಸಕ್ರೀಯ ರಾಜಕಾರಣದಲ್ಲಿ ಇದ್ದರು. ವೈ. ವೀರಪ್ಪ ಎಂಬುವರ ಪರವಾಗಿ ಭಾಷಣ ಮಾಡಲು ನಮ್ಮ ಊರಿಗೆ ಬಂದಿದ್ದರು. ಒಂದು ಸುತ್ತು ಇಡೀ ದೇಶ ನೋಡಬೇಕು ಅಂದುಕೊಂಡು ಕರ್ನಾಟಕಕ್ಕೆ ಬಂದರು. ನಮ್ಮ ಹಳ್ಳಿಗಾಡಿನ ಪ್ರದೇಶ ನೋಡಿ ನೊಂದುಕೊಂಡರು. ಆಗ ಹಲವಾರು ವಿಚಾರ ಚರ್ಚೆ ಮಾಡಿದ್ವಿ ಎಂದು ಜೆಡಿಎಸ್ ವರಿಷ್ಠ ಹೆಚ್​.ಡಿ. ದೇವೇಗೌಡ ನೆನಪು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಜಯಪ್ರಕಾಶ್ ನಾರಾಯಣ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಮಾತನಾಡಿದ್ದಾರೆ.

ಕೆಆರ್​ಎಸ್ ಡ್ಯಾಂ ಕಟ್ಟಿರೋ ಬಗ್ಗೆಯೂ ಕೇಳಿದ್ರು. ಅವರ ಮನಸ್ಸಲ್ಲಿ ಆಳವಾದ ಭಾವನೆ ಇತ್ತು. ಇರುವ ಸಂಪನ್ಮೂಲ ಬಳಸಿಕೊಳ್ಳುವ ಬಗ್ಗೆ ಆಲೋಚನೆ ಇತ್ತು. ಅವರಿಗೆ ಅನಾರೋಗ್ಯ ತುಂಬಾ ಕಾಡಿತ್ತು. ನಾನು ಅವರನ್ನು ನೋಡಲು ಆಸ್ಪತ್ರೆಗೆ ಹೋದೆ. ಅವರ ಸ್ಥಿತಿ ನೋಡಿ ನನಗೆ ಅಳು ಬಂತು ಎಂದು ಹೇಳಿದ್ದಾರೆ.

ಮಹಾತ್ಮಗಾಂಧಿ ಅದ್ದೂರಿ ಜೀವನ ಮಾಡಲಿಲ್ಲ. ಕುಟೀರ ಮಾಡಿ ಬಂದವರಿಗೆ ವ್ಯವಸ್ಥೆ ಮಾಡಿದ್ದರು. ತುಂಡು ಪಂಚೆ ಹುಟ್ಟು ಸ್ವತಂತ್ರ ತಂದು ಕೊಟ್ಟರು. ನಾನು ಈಗಿನ ರಾಜಕೀಯ ಹಾಗೂ ಆಗ ಇದ್ದ ರಾಜಕೀಯದ ಬಗ್ಗೆ ಕಂಪೇರ್ ಮಾಡ್ತೀನಿ. ಮಹಾತ್ಮ ಗಾಂಧಿ ಅವರು ದೇಶಕ್ಕೆ ಮೊದಲ ಸ್ವತಂತ್ರ ಕೊಟ್ಟರೆ ಜಯಪ್ರಕಾಶ ನಾರಾಯಣ ಮತ್ತೊಂದು ಹಂತದ ಸ್ವತಂತ್ರ ತಂದುಕೊಟ್ಟರು. ಈಗ ಜೆಪಿ ಅವರು ತಂದು ಕೊಟ್ಟ ಮತ್ತೊಂದು ಸ್ವತಂತ್ರ ಕೂಡ ನಶಿಸಿ ಹೋಗ್ತಾ ಇದೆ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಈಗಿನ ಹಾಗೂ ಆಗ ಇದ್ದ ರಾಜಕೀಯದ ಬಗ್ಗೆ ತುಲನೆ ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.

ಗಾಂಧಿಯ ಕಾಂಗ್ರೆಸ್ ಈಗ ಏನಾಗ್ತಾ ಇದೆ. ಯಾರನ್ನು ನೋಡಿದ್ರೂ ಅಧಿಕಾರ ಅಧಿಕಾರ. ಅಧಿಕಾರಕ್ಕೆ ಹಾತೊರೆಯುವ ಈ ವ್ಯವಸ್ಥೆಯಲ್ಲಿ ನಾನು ಜೆಪಿ ಹೆಸರು ಈ ಕಟ್ಟಡಕ್ಕೆ ಇಟ್ಟಿದ್ದೀನಿ. ಇನ್ನು ಮುಂದಾದರು ನಾವೆಲ್ಲ ಯುವ ಪೀಳಿಗೆಗೆ ಜೆಪಿ ಅವರ ನಾಯಕತ್ವದ ಬಗ್ಗೆ ತಿಳಿಸಿ ಅವರ ಹಾದಿಯಲ್ಲಿ ನಡೆಯುವಂತೆ ಕಾರ್ಯಕ್ರಗಳನ್ನ ರೂಪಿಸಬೇಕು ಎಂದು ಸಭೆಯನ್ನುದ್ದೇಶಿಸಿ ದೇವೇಗೌಡ ಮಾತನಾಡಿದ್ದಾರೆ.

ಪೆಟ್ರೋಲ್, ಡೀಸೆಲ್, ಗ್ಯಾಸ್​ ಬೆಲೆ ಏರಿಕೆ ವಿಚಾರವಾಗಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡುವುದು ಮುಖ್ಯ. ಆದರೆ ಇಲ್ಲಿಯವರೆಗೂ ಹೋರಾಟ ಮಾಡಿಲ್ಲ. ಹೀಗಾಗಿ ಅದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. ನಾನು ಬಿಜೆಪಿ, ಆರ್‌ಎಸ್‌ಎಸ್‌ಗೆ ಸೇರಿದವನಲ್ಲ. ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಮಾಡಲ್ಲ, ವಾಸ್ತವಾಂಶ ಹೇಳ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ಆರ್​ಎಸ್​ಎಸ್ ಹೊಗಳಿದ್ದೇನೆ ಎನ್ನುವುದು ಶುದ್ಧ ಸುಳ್ಳು, ನನಗೂ ಆರ್​ಎಸ್​ಎಸ್​ಗೂ ಸಂಬಂಧವಿಲ್ಲ: ಹೆಚ್​ಡಿ ದೇವೇಗೌಡ

ಇದನ್ನೂ ಓದಿ: ಹಳೆಯದನ್ನೆಲ್ಲ ನೆನೆದು ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದರು ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡ !

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada