ನಾನು ಆರ್​ಎಸ್​ಎಸ್ ಹೊಗಳಿದ್ದೇನೆ ಎನ್ನುವುದು ಶುದ್ಧ ಸುಳ್ಳು, ನನಗೂ ಆರ್​ಎಸ್​ಎಸ್​ಗೂ ಸಂಬಂಧವಿಲ್ಲ: ಹೆಚ್​ಡಿ ದೇವೇಗೌಡ

HD Deve Gowda: ಆರ್​ಎಸ್​ಎಸ್​​​ ಬಗ್ಗೆ ಹೊಗಳಿದ್ದೇನೆ ಎಂದು ಹೇಳುತ್ತಿರುವುದು ಸುಳ್ಳು. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು ಎಂದು ಹೆಚ್​ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಆರ್​ಎಸ್​ಎಸ್ ಹೊಗಳಿದ್ದೇನೆ ಎನ್ನುವುದು ಶುದ್ಧ ಸುಳ್ಳು, ನನಗೂ ಆರ್​ಎಸ್​ಎಸ್​ಗೂ ಸಂಬಂಧವಿಲ್ಲ: ಹೆಚ್​ಡಿ ದೇವೇಗೌಡ
ಬಿಜೆಪಿ 306 ಲೋಕಸಭಾ ಕ್ಷೇತ್ರ ಗೆದ್ದಿದ್ದರು; ಆದರೆ ಮುಂದೆ ಏಕಾಂಗಿಯಾಗಿ ಅಷ್ಟು ಸೀಟ್ ಬರೋದಿಲ್ಲ-ಮಾಜಿ ಪ್ರಧಾನಿ ದೇವೇಗೌಡ ರಾಜಕೀಯ ಭವಿಷ್ಯ
Follow us
TV9 Web
| Updated By: ganapathi bhat

Updated on:Oct 08, 2021 | 2:55 PM

ಬೆಂಗಳೂರು: ನನಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ. ಆರ್‌ಎಸ್‌ಎಸ್ ಬಗ್ಗೆ ಗಂಧವೂ ಗೊತ್ತಿಲ್ಲ. ನಾನು ಬೈಟಕ್‌ ಕೂತಿಲ್ಲ, ಹೊಗಳಿಯೂ ಇಲ್ಲ. ರಾಮ್‌ಲೀಲಾ ಮೈದಾನದಲ್ಲಿ ಯಾರ್ಯಾರು ಏನು ಹೇಳಿದರು. ಎಲ್ಲವೂ ಗೊತ್ತಿದೆ, ಈಗ ಚರ್ಚೆ ಬೇಡ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್​.ಡಿ. ದೇವೇಗೌಡ ತಿಳಿಸಿದ್ದಾರೆ. ಸಿಂದಗಿಯಲ್ಲಿ ನಾನು ಹೆಚ್ಚು ಪ್ರಚಾರ ಮಾಡುವೆ. ಮತ ಕೇಳುವ ಎಲ್ಲ ಹಕ್ಕು ನನಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಕೆಲಸ ಮಾಡಿದ್ದೇನೆ. ಸಿಂದಗಿ, ಇಂಡಿಗೆ ನೀರಾವರಿ‌ ಮಾಡಿದ್ದೇನೆ. ನಾನು ಪ್ರಧಾನಿ ಇದ್ದಾಗ ಯುಕೆಪಿಗೆ ಅನುದಾನ ಕೊಟ್ಟಿದ್ದೆ. ಕಾವೇರಿ ನೀರಾವರಿಗೆ ಕೊಟ್ಟಿರಲಿಲ್ಲ. ಆ ಭಾಗ, ಈ ಭಾಗ ಎಂದು ನನ್ನ‌ ಜೀವನದಲ್ಲೇ ಯೋಚಿಸಿಲ್ಲ. ನಾನು ಸಿಂದಗಿಯಲ್ಲೇ ಹೆಚ್ಚು ವಾಸ್ತವ್ಯ ಮಾಡುತ್ತೇನೆ ಎಂದು ಸಿಂದಗಿ ಚುನಾವಣೆಗೆ ಸಂಬಂಧಿಸಿ ಕೆಲಸ ಮಾಡುವ ಬಗ್ಗೆ ದೇವೇಗೌಡ ಮಾಹಿತಿ ನೀಡಿದ್ದಾರೆ.

ನಾನು ಆರ್​ಎಸ್​ಎಸ್ ಹೊಗಳಿದ್ದೇನೆ ಎನ್ನುವುದು ಶುದ್ಧ ಸುಳ್ಳು. ನನಗೂ ಆರ್​ಎಸ್​ಎಸ್​ಗೂ ಯಾವುದೇ ಸಂಬಂಧವಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ. ಆರ್​ಎಸ್​ಎಸ್​​​ ಬಗ್ಗೆ ಹೊಗಳಿದ್ದೇನೆ ಎಂದು ಹೇಳುತ್ತಿರುವುದು ಸುಳ್ಳು. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್.ಕೆ.ಅಡ್ವಾಣಿ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು. ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಚರ್ಚೆ ಮಾಡಿದ್ದೆವು. ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ಕಾರ್ಯಕ್ರಮ ನಡೆದಿತ್ತು. ನನ್ನ ಅಧ್ಯಕ್ಷತೆಯಲ್ಲೇ ಕಾರ್ಯಕ್ರಮ ನಡೆದಿತ್ತು. ಸಭೆ ದುರುಪಯೋಗ ಮಾಡುವುದು ಸರಿಯಲ್ಲವೆಂದು ಹೇಳಿದ್ದೆ. ಅಂದು ನಡೆದ ಸಭೆಯಲ್ಲೇ ನಾನು ಹೇಳಿದ್ದೆ. ತುರ್ತುಪರಿಸ್ಥಿತಿ ಬೆಂಬಲಿಸ್ತೇವೆಂದು ಹಲವರು ಬರೆದುಕೊಟ್ಟಿದ್ರು ಎಂದು ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ನನ್ನನ್ನು ಕೆಣಕಲು ಹೋಗಬೇಡಿ, ಕೆಣಕಿದರೆ ಸರಿ‌ ಇರಲ್ಲ ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬರುತ್ತಿದೆ ಎಂದು ಗೊತ್ತಿದೆ. ನೇಹರೂ ಕಾಲದಿಂದ ಯಾವ್ಯಾವ ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಎಲ್ಲಿಗೆ ಬಂದಿದೆ ಎಲ್ಲರಿಗೂ ಗೊತ್ತಿದೆ. ನನ್ನನ್ನು ಕೆಣಕಲು ಹೋಗಬೇಡಿ, ಕೆಣಕಿದರೆ ಸರಿ‌ ಇರಲ್ಲ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್​.ಡಿ. ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಬೈಎಲೆಕ್ಷನ್​ನಲ್ಲಿ ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ಮುಸ್ಲಿಂ ಸಮುದಾಯವನ್ನು ನೀವು ಗುತ್ತಿಗೆ ಪಡೆದಿಲ್ಲ. ನಾನು ಬೆಳೆಸಿದ್ದ ಮುಸ್ಲಿಂ ಮುಖಂಡ ಈಗ ಅವರ ಬಲಗೈ ಶಕ್ತಿ. ಬಲಗೈ ಭಂಟ ಎನ್ನುವುದಿಲ್ಲ ಎಂದು ಜಮೀರ್ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ದೇವೇಗೌಡ ಕಿಡಿಕಾರಿದ್ದಾರೆ.

ಎಂ.ಸಿ. ಮನಗೂಳಿ ನಿಧನ ನಂತರ ಪುತ್ರ ಅಶೋಕ ಮನಗೂಳಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದೊಯ್ದರು. ನಮ್ಮ ಅಭ್ಯರ್ಥಿಯನ್ನ ಹೊತ್ತೊಯ್ದರೆ ನಾವು ಸುಮ್ಮನಿರಬೇಕಾ, ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ ಎಂದು ಕಾಂಗ್ರೆಸ್​ಗೆ ಹೆಚ್​.ಡಿ. ದೇವೇಗೌಡ ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಸಿಂದಗಿ ಕ್ಷೇತ್ರದಲ್ಲಿ ನಾವು ಬೇರೆ ಅಭ್ಯರ್ಥಿ ಹಾಕಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಹಳೆಯದನ್ನೆಲ್ಲ ನೆನೆದು ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದರು ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡ !

ಇದನ್ನೂ ಓದಿ: ದೊಡ್ಡ ಗೌಡರ ಕುಟುಂಬದಲ್ಲಿ ಸಂಭ್ರಮ; ನಿಖಿಲ್ ಪುತ್ರನನ್ನು ನೋಡಲು ಆಸ್ಪತ್ರೆಗೆ ಬಂದ ಎಚ್.ಡಿ ದೇವೇಗೌಡ- ಚಿನ್ನಮ್ಮ ದಂಪತಿ

Published On - 2:47 pm, Fri, 8 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ