ಜೀವ ಜಲವಿಲ್ಲದೇ ಹೈರಾಣಾದ ಬಾಪೂಜಿನಗರ ನಿವಾಸಿಗಳು; ಪ್ರತಿನಿತ್ಯ ಕುಡಿಯೋ ನೀರಿಗಾಗಿ ಪರದಾಟ

| Updated By: ಆಯೇಷಾ ಬಾನು

Updated on: Mar 22, 2024 | 10:03 AM

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಯಾವ ಏರಿಯಾಗೆ ಹೋದರೂ ಹನಿ ನೀರಿಗಾಗಿ ಜನ ಪರದಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ವಿಜಯನಗರ ವಿಧಾನಸಭಾಕ್ಷೇತ್ರದ ಬಾಪೂಜಿನಗರ ಹಾಗೂ ಪಕ್ಕದ ಶಾಮಣ್ಣ ಗಾರ್ಡನ್ ಜನರಿಗೆ ನೀರಿನ ಸಮಸ್ಯೆ ಎದುರಾಗಿದೆ. ನೀರು ಬಿಡದ ಜಲಮಂಡಳಿ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಜೀವ ಜಲವಿಲ್ಲದೇ ಹೈರಾಣಾದ ಬಾಪೂಜಿನಗರ ನಿವಾಸಿಗಳು; ಪ್ರತಿನಿತ್ಯ ಕುಡಿಯೋ ನೀರಿಗಾಗಿ ಪರದಾಟ
ಜೀವ ಜಲವಿಲ್ಲದೇ ಹೈರಾಣಾದ ಬಾಪೂಜಿನಗರ ನಿವಾಸಿಗಳು
Follow us on

ಬೆಂಗಳೂರು, ಮಾರ್ಚ್​.22: ರಾಜ್ಯ ರಾಜಧಾನಿಯ ಜಲದಾಹ (Water Crisis) ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ವಿವಿಧ ಏರಿಯಾಗಳ ಜನರ ನೀರಿನ ಬವಣೆ ಬಿಚ್ಚಿಡ್ತಿರೋ ಟಿವಿ9, ವಿಜಯನಗರ ವಿಧಾನಸಭಾಕ್ಷೇತ್ರದ ಬಾಪೂಜಿನಗರ ನಿವಾಸಿಗಳ ಜಲಸಂಕಷ್ಟ ಬಿಚ್ಚಿಟ್ಟಿದೆ. ಬೋರ್ ವೆಲ್ ನೀರು ಬರ್ತಿಲ್ಲ, ನಲ್ಲಿ ನೀರು ಬರ್ತಿಲ್ಲ, ಇದರ ಮಧ್ಯೆ ನೀರಿಗಾಗಿ ಪರದಾಡ್ತಿರೋ ಜನರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಸಿಲಿಕಾನ್ ಸಿಟಿ ಜನರ ಜಲಬವಣೆ ಮುಗಿಯುವಂತೆ ಕಾಣ್ತಿಲ್ಲ, ದಿನಕ್ಕೊಂದು ಏರಿಯಾದ ಜನರ ಬವಣೆ ಬಿಚ್ಚಿಡ್ತಿರೋ ಟಿವಿ9, ವಿಜಯನಗರ ವಿಧಾನಸಭಾಕ್ಷೇತ್ರದ ಬಾಪೂಜಿನಗರ ಜನರ ಜಲಸಂಕಷ್ಟ ಬಿಚ್ಚಿಟ್ಟಿದೆ. ವಾರಕ್ಕೊಮ್ಮೆ ಬರೋ ನೀರಿಗಾಗಿ ಕಾದು ಸುಸ್ತಾದ ಇಲ್ಲಿನ ಜನರು, ನೀರು ಕೊಡಿ ಅಂತಾ ಆಗ್ರಹಿಸ್ತಿದ್ದಾರೆ. ಬರೀ ಬಾಪೂಜಿನಗರ ಅಷ್ಟೇ ಅಲ್ಲದೇ ಪಕ್ಕದ ಶಾಮಣ್ಣ ಗಾರ್ಡನ್ ಜನರಿಗೂ ಸಂಕಷ್ಟ ಶುರುವಾಗಿದ್ದು, ನೀರು ಬಿಡದ ಜಲಮಂಡಳಿ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ನೀರಿನ ವಿಚಾರಕ್ಕೆ ಲೇಡಿಸ್​​ ಹಾಸ್ಟೆಲ್​ನಲ್ಲಿ ರ‍್ಯಾಗಿಂಗ್; ಜೂನಿಯರ್ ವಿದ್ಯಾರ್ಥಿನಿಯನ್ನು ಕೂಡಿ ಹಾಕಿ ಹಲ್ಲೆ

ಇನ್ನು ಈ ಏರಿಯಾದಲ್ಲಿ ನೀರಿಗಾಗಿ ರಾಜಕೀಯ ನಡೀತಿರೋ ಆರೋಪ ಕೂಡ ಕೇಳಿಬರ್ತಿದೆ. ಕೆಲ ಏರಿಯಾಗಳಿಗಷ್ಟೇ ನೀರು ಬಿಡ್ತಿದ್ದಾರೆ, ಕೆಲ ಏರಿಯಾಗಳಿಗೆ ನೀರು ಬಿಡ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ. ವಾಟರ್ ಮ್ಯಾನ್, ಅಧಿಕಾರಿಗಳು ರಾಜಕೀಯ ಕೈಗೊಂಬೆಗಳಾಗಿದ್ದಾರೆ, ನಮಗೆ ರಾಜಕೀಯ ಬೇಡ ನೀರು ಕೊಡಿ ಅಂತಾ ಕಿಡಿಕಾರುತ್ತಿದ್ದಾರೆ.

ಇತ್ತ ನಲ್ಲಿಯಲ್ಲಿ ಬರೋ ನೀರು ಕೂಡ ಸಾಕಾಗದೇ ಸುಸ್ತಾದ ಜನರು, ಟ್ಯಾಂಕರ್ ನೀರು ತರಿಸೋಣ ಅಂದ್ರೆ ಅದಕ್ಕೂ ದುಪ್ಪಟ್ಟು ಹಣ ಕೊಡಬೇಕಾದ ಸ್ಥಿತಿ ಇರೋದರಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ನೀರು ಕೊಡಿ ಅಂತಾ ಹಲವು ಬಾರೀ ಮನವಿ ಮಾಡಿದ್ರೂ ಸ್ಪಂದಿಸದ ಅಧಿಕಾರಿಗಳು, ಈಗಾಲಾದ್ರೂ ಎಚ್ಚೆತ್ತುಕೊಂಡು ಜನರ ಜಲಬವಣೆ ನೀಗಿಸಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ