AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಿನ ವಿಚಾರಕ್ಕೆ ಲೇಡಿಸ್​​ ಹಾಸ್ಟೆಲ್​ನಲ್ಲಿ ರ‍್ಯಾಗಿಂಗ್; ಜೂನಿಯರ್ ವಿದ್ಯಾರ್ಥಿನಿಯನ್ನು ಕೂಡಿ ಹಾಕಿ ಹಲ್ಲೆ

ಕುಡಿಯೋ ನೀರು ತುಂಬಿದ್ದ ಬಕೆಟ್​ನಲ್ಲಿ ಸೀನಿಯರರ್ಸ್ ಜಗ್ ಹಾಕಿದ್ದು ಜೂನಿಯರ್ ಪ್ರಶ್ನಿಸಿದ್ದಾಳೆ. ಇದಕ್ಕೆ ರೊಚ್ಚಿಗೆದ್ದ ಸೀನಿಯರ್ ವಿದ್ಯಾರ್ಥಿನಿಯರು ತನ್ನ ಜೂನಿಯರ್​ನನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ಇರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್​ನಲ್ಲಿ ಘಟನೆ ನಡೆದಿದೆ.

ನೀರಿನ ವಿಚಾರಕ್ಕೆ ಲೇಡಿಸ್​​ ಹಾಸ್ಟೆಲ್​ನಲ್ಲಿ ರ‍್ಯಾಗಿಂಗ್; ಜೂನಿಯರ್ ವಿದ್ಯಾರ್ಥಿನಿಯನ್ನು ಕೂಡಿ ಹಾಕಿ ಹಲ್ಲೆ
ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್
ಭೀಮೇಶ್​​ ಪೂಜಾರ್
| Edited By: |

Updated on: Mar 22, 2024 | 9:32 AM

Share

ರಾಯಚೂರು, ಮಾರ್ಚ್​.22: ಕುಡಿಯುವ ನೀರಿನ (Drinking Water) ವಿಚಾರಕ್ಕೆ ಲೇಡಿಸ್​​ ಹಾಸ್ಟೆಲ್​ನಲ್ಲಿ ರ‍್ಯಾಗಿಂಗ್ (Ragging) ಮಾಡಿರುವ ಆರೋಪ ಕೇಳಿ ಬಂದಿದೆ.​​ ರಾಯಚೂರು (Raichur) ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ಇರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್​ನಲ್ಲಿ PU ವಿದ್ಯಾರ್ಥಿನಿಯನ್ನ ಸೀನಿಯರ್​ಗಳು ರೂಂನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಲಾಗಿರುವ ಆರೋಪ ಕೇಳಿ ಬಂದಿದೆ.

BED ವಿಭಾಗದ ನಾಲ್ವರು ಸೀನಿಯರರ್ಸ್ ಪಿಯುಸಿ ವಿದ್ಯಾರ್ಥಿನಿಯೋರ್ವಳನ್ನ ರೂಂನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕುಡಿಯೋ ನೀರು ತುಂಬಿದ್ದ ಬಕೆಟ್​ನಲ್ಲಿ ಸೀನಿಯರರ್ಸ್ ಜಗ್ ಹಾಕಿದ್ದರು. ಇದರಿಂದ ಕೋಪಗೊಂಡ ಪಿಯುಸಿ ವಿದ್ಯಾರ್ಥಿನಿ ಅದರಲ್ಲಿ ಜಗ್ ಹಾಕಬೇಡಿ ಎಂದು ಸೀನಿಯರರ್ಸ್ ಪ್ರಶ್ನೆ ಮಾಡಿದ್ದಾಳೆ. ಇದೇ ವಿಚಾರಕ್ಕಾಗಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಐದು ಸಿನಿಯರ್ಸ್ ನಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಾಳು ವಿದ್ಯಾರ್ಥಿನಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಸುಸೈಡ್ ಹಾಟ್ ಸ್ಪಾಟ್ ಆಗ್ತಿದ್ಯಾ ನಮ್ಮ ಮೆಟ್ರೋ? ಮೂರು ತಿಂಗಳಲ್ಲಿ ಐದು ಘಟನೆ

ಆಹಾರ ಇಲಾಖೆ ಅಧಿಕಾರಿ ಮೇಲೆ ಹಲ್ಲೆ

ವಿಜಯಪುರದ ರಹಿಂ ನಗರದಲ್ಲಿ ಆಹಾರ ಇಲಾಖೆ ಅಧಿಕಾರಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಆಹಾರ ನಿರೀಕ್ಷಕ ನಯೀಮ್ ಅತ್ತಾರ ನಿವಾಸಕ್ಕೆ ತೆರಳಿ ಹಲ್ಲೆ ಮಾಡಿದ್ದಾರೆ. ಅಕ್ರಮವಾಗಿ ಅಟೋಗಳಗೆ LPG ಗ್ಯಾಸ್ ಭರಿಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ್ರು, ಇದೇ ಸಿಟ್ಟಲ್ಲಿ ಶಬ್ಬೀರ್ ಹಾಗೂ ಸೋನು ನದಾಫ್ ತಂಡ ದಾಳಿ ನಡೆಸಿದೆ. ಹಲ್ಲೆಗೊಳಗಾದ ಆಹಾರ ನಿರೀಕ್ಷಕ ನಯೀಮ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚುನಾವಣಾ ಕರ್ತವ್ಯ ನಿರ್ಲಕ್ಷ್ಯ ಶಿಕ್ಷಕಿಯರು ಅಮಾನತು

ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಿನ್ನೆಲೆ ಮೂವರು ಶಿಕ್ಷಕಿಯರನ್ನ ಅಮಾನತು ಮಾಡಿ, ಚಿತ್ರದುರ್ಗ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್​ ಆದೇಶ ಹೊರಡಿಸಿದ್ದಾರೆ. ಚಿಕ್ಕಪುರ ಗೊಲ್ಲರಹಟ್ಟಿ ಸರ್ಕಾರಿ ಶಾಲಾ ಶಿಕ್ಷಕಿ ಕೆ.ಬಿ.ಜಯಮ್ಮ, ತೋಪುರ ಮಾಳಿಗೆ ಸರ್ಕಾರಿ ಶಾಲೆಯ ಶಿಕ್ಷಕಿ ಎಸ್.ರೂಪಾ, ಮಠದ ಕುರುಬರಹಟ್ಟಿ ಶಾಲೆಯ ಶಿಕ್ಷಕಿ ಕೆ.ಗಿರಿಜಮ್ಮ ಅಮಾನತಾಗಿದ್ದಾರೆ. ಮತಗಟ್ಟೆ ಅಧಿಕಾರಿಗಳಾಗಿ ನೇಮಕಗೊಂಡಿದ್ದ ಮೂವರು ಶಿಕ್ಷಕಿಯರು, ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ ತೋರಿದ್ದರು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ