ಬೆಂಗಳೂರು: ಬಸವೇಶ್ವರನಗರದಲ್ಲಿ ನಡೆದಿದ್ದ ವಿದ್ಯಾರ್ಥಿ ಸೊಹೈಲ್ ಕೊಲೆ (Student Murder) ಪ್ರಕರಣ ಸಂಬಂಧ ಕಾನೂನು ಸಂಘರ್ಷಕ್ಕೊಳಗಾದ ಏಳು ಬಾಲಕರು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ರೆಶರ್ಸ್ ಪಾರ್ಟಿ ವೇಳೆ ಡಾನ್ಸ್ ಮಾಡುವಾಗ ಕಾಲು ತಾಗಿದ್ದಕ್ಕೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಸೊಹೈಲ್ ಥಳಿಸಿದ್ದನು. ಈ ವಿಚಾರ ದ್ವೇಷಕ್ಕೆ ತಿರುಗಿದ್ದಲ್ಲದೆ, ಹೊಡೆತದಿಂದ ಅವಮಾನಗೊಂಡ ಬಾಲಕ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಸಂಚು ರೂಪಿಸಿ ಸೊಹೈಲ್ನನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ.
ಜುಲೈ ಒಂದರನ್ನು ಫ್ರೆಶರ್ಸ್ ಪಾರ್ಟಿ ವೇಳೆ ಡಾನ್ಸ್ ಮಾಡುತ್ತಿದ್ದಾಗ ಕಾಲು ತಾಗಿತು ಎಂಬ ಕ್ಷುಲ್ಲಕ ಕಾರಣಕ್ಕೆ ಕಾನೂನು ಸಂಘರ್ಷಕ್ಕೆ ಒಳಗಾದ ವಿದ್ಯಾರ್ಥಿಗಳ ಪೈಕಿ ಓರ್ವನಿಗೆ ಸೊಹೈಲ್ ಥಳಿಸಿದ್ದನು. ಇದರಿಂದ ಹೊಡೆತ ತಿಂದ ಬಾಲಕನ ಕಣ್ಣಿಗೆ ಏಟಾಗಿದ್ದಲ್ಲದೆ, ಅವಮಾನಕ್ಕೂ ಒಳಗಾಗಿದ್ದ. ಘಟನೆ ನಂತರ ಮನೆಗೆ ಹೋಗಿದ್ದ ಬಾಲಕ ಬೈಕ್ನಲ್ಲಿ ಬಿದ್ದಿದ್ದಾಗಿ ಪೋಷಕರಿಗೆ ತಿಳಿಸಿದ್ದ.
ಇದನ್ನೂ ಓದಿ: ಚಲಿಸುತ್ತಿದ್ದ ಬಸ್ನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಇತ್ತ ಥಳಿತದಿಂದ ದ್ವೇಷಕ್ಕೆ ಬಿದ್ದ ಬಾಲಕ, ಸೊಹೈಲ್ನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಾನೆ. ಜುಲೈ ಎರಡರಂದು ಕಾಲೇಜ್ಗೆ ರಜೆ ಹಿನ್ನಲೆ ನಿನ್ನೆ (ಜುಲೈ 3) ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು ಸೊಹೈಲ್ ಕಾಲೇಜು ಬಿಟ್ಟು ಹೊರ ಬರುತ್ತಿದ್ದಂತೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ್ದ ಬಸವೇಶ್ವರನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:59 pm, Tue, 4 July 23