G 20 Summit 2023: ಜಿ20 ಶೃಂಗಸಭೆ, ಬೆಂಗಳೂರಿನ ತಾಜ್‌ವೆಸ್ಟೆಂಡ್‌ ಹೋಟೆಲ್ ವ್ಯಾಪ್ತಿಯಲ್ಲಿ ಡ್ರೋನ್‌, ಏರ್‌ಕ್ರಾಫ್ಟ್​​ ಹಾರಾಟ ನಿಷೇಧ

ಬೆಂಗಳೂರು ನಗರದಲ್ಲಿ ನಾಳೆಯಿಂದ ಆರಂಭಗೊಳ್ಳಲಿರುವ ಜಿ20 ಶೃಂಗಸಭೆ 2023 ಹಿನ್ನೆಲೆ ತಾಜ್‌ವೆಸ್ಟೆಂಡ್‌ ಹೋಟೆಲ್​ನ 1 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾಗೂ ಏರ್​ಕ್ರಾಫ್ಟ್​ ಹಾರಾಟ ನಿಷೇಧಿಸಲಾಗಿದೆ.

G 20 Summit 2023: ಜಿ20 ಶೃಂಗಸಭೆ, ಬೆಂಗಳೂರಿನ ತಾಜ್‌ವೆಸ್ಟೆಂಡ್‌ ಹೋಟೆಲ್ ವ್ಯಾಪ್ತಿಯಲ್ಲಿ ಡ್ರೋನ್‌, ಏರ್‌ಕ್ರಾಫ್ಟ್​​ ಹಾರಾಟ ನಿಷೇಧ
ಜಿ20 ಶೃಂಗಸಭೆ 2023 ಹಿನ್ನೆಲೆ ಅತಿಥಿಗಳು ತಂಗಲಿರುವ ತಾಜ್‌ವೆಸ್ಟೆಂಡ್‌ ಹೋಟೆಲ್ ವ್ಯಾಪ್ತಿಯಲ್ಲಿ ಡ್ರೋನ್‌, ಏರ್‌ಕ್ರಾಫ್ಟ್​​ ಹಾರಾಟ ನಿಷೇಧImage Credit source: FILE
Follow us
Shivaprasad
| Updated By: Rakesh Nayak Manchi

Updated on: Jul 04, 2023 | 10:20 PM

ಬೆಂಗಳೂರು: ನಗರದಲ್ಲಿ ಜುಲೈ 6 ಮತ್ತು 7 ರಂದು ಜಿ20 ಶೃಂಗಸಭೆ 2023 (G20 Summit 2023) ನಡೆಯಲಿದೆ. ಅದರಂತೆ ಸಭೆಯಲ್ಲಿ ಭಾಗಿಯಾಗುವ ವಿದೇಶಿ ಪ್ರತಿನಿಧಿಗಳು, ವಿವಿಐಪಿಗಳು ಜುಲೈ 5ರಿಂದ ತಾಜ್‌ವೆಸ್ಟೆಂಡ್‌ ಹೋಟೆಲ್​ನಲ್ಲಿ ತಂಗಲಿರುವ ಹಿನ್ನೆಲೆ ಅಂದಿನಿಂದ ಹೊಟೇಲ್​ನ 1 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾಗೂ ಏರ್​ಕ್ರಾಫ್ಟ್​ ಹಾರಾಟ ನಿಷೇಧಿಸಿ ಬೆಂಗಳೂರು (Bengaluru) ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಜು.6 ಮತ್ತು 7ರಂದು ತಾಜ್‌ವೆಸ್ಟೆಂಡ್‌ ಸುತ್ತಮುತ್ತ ಬಂದೋಬಸ್ತ್‌ ಕೈಗೊಳ್ಳಲಾಗುತ್ತಿದ್ದು, ಓರ್ವ ಡಿಸಿಪಿ, ನಾಲ್ವರು ಎಸಿಪಿ, 11 ಇನ್ಸ್‌ಪೆಕ್ಟರ್‌, 32 ಪಿಎಸ್‌ಐ, 190 ಹೆಚ್‌ಸಿ, 40 ಪಿಸಿ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ.

ಬೆಂಗಳೂರಿನಲ್ಲಿ ಜಿ 20 ಶೃಂಗ ಸಭೆ ಹಿನ್ನಲೆ ವಿದೇಶಿ ಪ್ರತಿನಿಧಿಗಳು, ವಿವಿಐಪಿ ಸಭೆಯಲ್ಲಿ ಭಾಗಿಯಾಗುವವರು ತಾಜ್‌ವೆಸ್ಟೆಂಡ್‌ ಹೋಟೆಲ್​ನಲ್ಲಿ ತಂಗಲಿದ್ದಾರೆ. ಹೀಗಾಗಿ 1 ಕಿ.ಮೀ ವ್ಯಾಪ್ತಿಯೊಳಗೆ ತಾತ್ಕಾಲಿಕ ನೋ ಫ್ಲೈನ್ ಜೋನ್​ಗೆ ಆದೇಶಿಸಿಸುವಂತೆ ಕೇಂದ್ರ ವಿಭಾಗ ಡಿಸಿಪಿ ಮಾಡಿದ ಮನವಿ ಮೇರೆಗೆ ಪೊಲೀಸ್ ಆಯುಕ್ತರು ಡ್ರೋಣ್, ಏರ್ ಕ್ರಾಫ್ಟ್ ಹಾರಾಟ ನಿಷೇಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: G20 Summit: ರಾಜ್ಯದ ಪ್ರಮುಖ ಈ 3 ಸ್ಥಳಗಳಲ್ಲಿ ನಡೆಯಲಿದೆ G20 ಶೃಂಗಸಭೆ, ಇಲ್ಲಿದೆ ವೇಳಾಪಟ್ಟಿ

ಜಿ20 ಶೃಂಗಸಭೆಗೆ ಸೆಪ್ಟೆಂಬರ್​​​ ತಿಂಗಳಲ್ಲಿ ನವದೆಹಲಿಯಲ್ಲಿ ಚಾಲನೆ ನೀಡಲಾಗಿದ್ದು, ಕರ್ನಾಟಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮೂರು ಕಡೆಗಳಲ್ಲಿ ಶೃಂಗಸಭೆ ನಡೆಯಲಿದೆ. ಜುಲೈ 6 ಮತ್ತು 7 ರಂದು ಬೆಂಗಳೂರಿನಲ್ಲಿ, ಜುಲೈ 9-16ರ ವರೆಗೆ ಹಂಪಿಯಲ್ಲಿ, ಆಗಸ್ಟ್ 1 ರಿಂದ 2 ರವರೆಗೆ ಮೈಸೂರಿನಲ್ಲಿ, ಆಗಸ್ಟ್ 16ರಿಂದ 19ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ