ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ನೀರಿನ ಕೊರತೆ(Drinking Water Crisis) ಎದುರಾಗಿದೆ. ಕುಡಿಯಲು ನೀರಿಲ್ಲದೆ 110 ಹಳ್ಳಿಗಳ ನಿವಾಸಿಗಳು ಪರದಾಡುತ್ತಿದ್ದು ನೀರು ಸರಿಯಾಗಿ ಬರದ ಕಾರಣ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಹಳ್ಳಿಗಳಿಗೆ ಕಾವೇರಿ ನೀರಿನ ವ್ಯವಸ್ಥೆ ಮಾಡಬೇಕಿದೆ.
110 ಹಳ್ಳಿಗಳನ್ನ ಬಿಬಿಎಂಪಿ ವ್ಯಾಪ್ತಿಗೆ ತೆಗೆದುಕೊಂಡಾಗಿನಿಂದ ನೀರಿಗೆ ಸಮಸ್ಯೆ ಆಗುತ್ತಲೇ ಇದೆ. ಈ ವರ್ಷ ಮಳೆಯಾಗದ ಕಾರಣ ಬೋರ್ವೆಲ್ಗಳಲ್ಲಿ ನೀರು ಬರ್ತಿಲ್ಲ. ಅಲ್ಲದೇ ಅಕ್ಕಪಕ್ಕದ ಕೆರೆಗಳು ಬತ್ತಿ ಹೋಗಿವೆ. ಸದ್ಯ 110 ಹಳ್ಳಿಗಳಿಗೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು ಇದು ಸಾಕಾಗುತ್ತಿಲ್ಲ. ಇನ್ನು ನಗರದ ದಾಸರಹಳ್ಳಿ, ಯಲಹಂಕ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರವಿದ್ದು ಹೊಸದಾಗಿ ಬೋರ್ವೆಲ್ ಕೊರೆಸಲು ಬಿಬಿಎಂಪಿ ಮುಂದಾಗಿದೆ.
ನೀರು ಒದಗಿಸಲು 3 ವಲಯದ ಜಂಟಿ ಆಯುಕ್ತರು 10 ಕೋಟಿಗೂ ಹೆಚ್ಚು ಅನುಧಾನ ಕೇಳಿದ್ದಾರೆ. ಹೀಗಾಗಿ ಮೊದಲು ಬೋರ್ ವೆಲ್ ಕೊರೆಸಿ ಬೋರ್ ವೆಲ್ ಮೂಲಕ ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡಲು ಪ್ಲಾನ್ ನಡೆದಿದೆ. ಸದ್ಯ 110 ಹಳ್ಳಿಗಳಿಗೆ ನೀರು ಸಮಸ್ಯೆ ನೀಗಿಸಬೇಕು ಎಂದ್ರೆ ಐದನೇ ಹಂತದ ನೀರಿನ ಸಫ್ಲೈ ಯೋಜನೆ ಕಂಪ್ಲೀಟ್ ಆಗಬೇಕು. ಆದ್ರೆ ಆ ಯೋಜನೆ ಮುಗಿಯಲು ಇನ್ನು ಸಾಕಷ್ಟು ಸಮಯ ಹಿಡಿಯಲಿದೆ. ಹೀಗಾಗಿ ಹೊಸ ಬೋರ್ ವೆಲ್ ಕೊರೆಸಿ ನೀರನ್ನ ಪೂರೈಕೆ ಮಾಡಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ವೇಗಕ್ಕೆ ಬ್ರೇಕ್: 100 ಕಿ ಮೀ ಕ್ಕಿಂತ ಸ್ಪೀಡ್ ಓಡಿಸಿದರೆ ಫೈನ್ ಗ್ಯಾರಂಟಿ
ಇನ್ನು ಈ 110 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪ್ರತಿಕ್ರಿಯೆ ನೀಡಿದ್ದು ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಸುಮಾರು 100 ಕೊಳವೆಬಾವಿಗಳನ್ನು ಕೊರೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರು ಸರಬರಾಜು ಮಾಡುವುದು ಬಿಬಿಎಂಪಿಯ ಜವಾಬ್ದಾರಿ ಅಲ್ಲದಿದ್ದರೂ, ಹೊರಭಾಗದ 110 ಹಳ್ಳಿಗಳಲ್ಲಿ ಕಾವೇರಿ ನೀರು ಪೂರೈಕೆ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ಅಲ್ಲಿನ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ತುರ್ತು ಕಾಮಗಾರಿಯಡಿ ₹10 ಕೋಟಿ ವೆಚ್ಚ ಮಾಡಿ ನೀರು ಒದಗಿಸಲು ಸಿದ್ಧತೆ ನಡೆದಿದ. ಪ್ರತಿ ಕೊಳವೆಬಾವಿಗೆ ಸುಮಾರು ₹8 ಲಕ್ಷ ವೆಚ್ಚವಾಗಲಿದೆ. ಯಲಹಂಕ, ದಾಸರಹಳ್ಳಿ, ಆರ್.ಆರ್. ನಗರ, ಬೊಮ್ಮನಹಳ್ಳಿ ವಲಯಗಳಲ್ಲಿ ಅಗತ್ಯಕ್ಕನುಸಾರವಾಗಿ ಕೊಳವೆಬಾವಿ ಕೊರೆಯಲಾಗುತ್ತದೆ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:30 pm, Wed, 5 July 23