ಟೆಸ್ಟಿಂಗ್, ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ ನಿಗಾ ಇಡಲು ಬಿಬಿಎಂಪಿ ವಾರ್ ರೂಮ್‌ಗಳಿಗೆ 27 KAS ಅಧಿಕಾರಿಗಳ ನೇಮಕ
ಬಿಬಿಎಂಪಿಯ 8 ವಲಯಗಳ ವಾರ್ ರೂಮ್‌ಗಳಿಗೆ 27 ಅಧಿಕಾರಿಗಳನ್ನ ನೇಮಿಸಲಾಗಿದೆ. ನಗರದ 27 ವಿಧಾನಸಭಾ ಕ್ಷೇತ್ರಗಳಿಗೂ ಅಧಿಕಾರಿಗಳ ನೇಮಕಗೊಳಿಸಲಾಗಿದೆ.
ಬೆಂಗಳೂರು: ಕೊರೊನಾ 3ನೇ ಅಲೆ ಆರ್ಭಟ ಮಿತಿ ಮೀರುತ್ತಿದೆ. ಬೆಂಗಳೂರು ಸೇರಿ ರಾಜ್ಯಕ್ಕೆ ಕಂಟಕ ಹೆಚ್ಚಾಗ್ತಿದೆ. ಕಳೆದೊಂದು ವಾರದಿಂದ ನಿತ್ಯ 3 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗ್ತಿವೆ. ಕಳೆದೊಂದು ವಾರದ ಹಿಂದೆ 300 ಅಸುಪಾಸಿನಲ್ಲಿ ಬರ್ತಿದ್ದ ಕೇಸ್ ಈಗ 4 ಸಾವಿರದ ಗಡಿ ದಾಟಿದೆ. ನಿನ್ನೆ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದೆ. ಸದ್ಯ ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ ನಿಗಾ ಇಡಲು ಬಿಬಿಎಂಪಿ ವಾರ್ ರೂಮ್‌ಗಳಿಗೆ KAS ಅಧಿಕಾರಿಗಳ ನೇಮಕಗೊಳಿಸಲಾಗಿದೆ.
ಬಿಬಿಎಂಪಿ ವಾರ್ ರೂಮ್‌ಗಳಿಗೆ KAS ಅಧಿಕಾರಿಗಳ ನೇಮಕ ಬಿಬಿಎಂಪಿಯ 8 ವಲಯಗಳ ವಾರ್ ರೂಮ್‌ಗಳಿಗೆ 27 ಅಧಿಕಾರಿಗಳನ್ನ ನೇಮಿಸಲಾಗಿದೆ. ನಗರದ 27 ವಿಧಾನಸಭಾ ಕ್ಷೇತ್ರಗಳಿಗೂ ಅಧಿಕಾರಿಗಳ ನೇಮಕಗೊಳಿಸಲಾಗಿದೆ. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಟೆಸ್ಟಿಂಗ್, ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ KAS ಅಧಿಕಾರಿಗಳು ನಿಗಾ ಇಡಲಿದ್ದಾರೆ.
ಕಂಟೇನ್‌ಮೆಂಟ್ ಜೋನ್ಗಳ ಪಟ್ಟಿ ಬೊಮ್ಮನಹಳ್ಳಿ ವಲಯ-49, ಮಹದೇವಪುರ ವಲಯ-48, ಪಶ್ಚಿಮ ವಲಯ-16, ದಕ್ಷಿಣ ವಲಯ-15, ಪೂರ್ವ ವಲಯ-12, ಯಲಹಂಕ-10, ದಾಸರಹಳ್ಳಿ-3, ಆರ್.ಆರ್.ನಗರದಲ್ಲಿ 1 ಕಂಟೇನ್‌ಮೆಂಟ್ ಜೋನ್ನನ್ನು ಗುರುತಿಸಲಾಗಿದೆ. ನಗರದ 8 ವಲಯಗಳಲ್ಲಿ ಕೊವಿಡ್ ಪಾಸಿಟಿವಿಟಿ ದರ ಏರಿಕೆಯಾಗಿದೆ. ಮಹದೇವಪುರ ಪಾಸಿಟಿವಿಟಿ ರೇಟ್ 3 % ರಷ್ಟು ಸಮೀಪ ತಲುಪಿದೆ.
ಕೊರೊನಾ ಶಾಕ್ ಡಿಸೆಂಬರ್ 29ರಂದು 566 ಪಾಸಿಟಿವ್ ಕೇಸ್ ಇದ್ವು.. ಜನವರಿ 1 ಅಂದ್ರೆ ಮೂರು ದಿನದ ಅಂತರದಲ್ಲಿ 1ಸಾವಿರದ 33 ಕೇಸ್ ಪತ್ತೆಯಾದ್ವು. ಇದಾದ ನಂತ್ರ ಜನವರಿ 4 ಅಂದ್ರೆ ಮತ್ತೆ ಮೂರು ದಿನದ ಅಂತರದಲ್ಲಿ 2ಸಾವಿರದ 479 ಪಾಸಿಟಿವ್ ಕೇಸ್ ಪತ್ತೆಯಾದ್ವು. ಅಲ್ದೆ, ಜನವರಿ 5 ಅಂದ್ರೆ ಕೇವಲ ಒಂದೇ ದಿನದ ಅಂತರದಲ್ಲಿ 4ಸಾವಿರದ 246 ಕೇಸ್ಗಳು ಪತ್ತೆಯಾಗಿದೆ.
ಇದನ್ನೂ ಓದಿ: ಕೊರೊನಾ ಸೋಂಕು ಉಲ್ಬಣ: ಮಂಡ್ಯ ಜಿಲ್ಲೆಯಲ್ಲಿ ಜ 19ರವರೆಗೆ ನಿಷೇಧಾಜ್ಞೆ, ಬೆಳಗಾವಿಯಲ್ಲಿ ಪ್ರಸಿದ್ಧ ದೇಗುಲಗಳಿಗೆ ಪ್ರವೇಶ ನಿರ್ಬಂಧ