AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಂಸ ಪ್ರಿಯರ ಗಮನಕ್ಕೆ: ನಾಳೆ (ಮೇ 5) ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

ನಾಳೆ ಬೆಂಗಳೂರಿನಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ( BBMP) ಆದೇಶ ಹೊರಡಿಸಿದೆ.

ಮಾಂಸ ಪ್ರಿಯರ ಗಮನಕ್ಕೆ: ನಾಳೆ (ಮೇ 5) ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ
ಬಿಬಿಎಂಪಿ
ರಮೇಶ್ ಬಿ. ಜವಳಗೇರಾ
|

Updated on: May 04, 2023 | 2:18 PM

Share

ಬೆಂಗಳೂರು: ಬುದ್ಧ ಪೂರ್ಣಿಮೆ ಪ್ರಯುಕ್ತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಮೇ 5ರ ಶುಕ್ರವಾರದಂದು ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರಿಂದ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಅಕ್ಷಯ ತೃತೀಯದಂದು ಮಿಸ್ ಆಗಿದ್ದರೆ ಬುದ್ದ ಪೂರ್ಣಿಮೆಯಂದು ಬಂಗಾರ ಕೊಳ್ಳಬಹುದು? ಏನಿದರ ಮಹತ್ವ? ಆಚರಣೆ ಹೇಗೆ?

ಬಿಬಿಎಂಪಿ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಬಿಬಿಎಂಪಿ ಪಶುಪಾಲನೆ ವಿಭಾಗದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ಮಾಂಸದ ಅಂಗಡಿಯ ಲೈಸೆನ್ಸ್‌ ರದ್ದು ಪಡಿಸಲಾಗುತ್ತದೆ. ಅಲ್ಲದೇ ಸರ್ಕಾರದ ನಿಯಮಗಳನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬೌದ್ಧ ಧರ್ಮದ ಪಿತಾಮಹ ಎಂದು ಕರೆಯಲ್ಪಡುವ ಭಗವಾನ್ ಗೌತಮ ಬುದ್ಧನ ಜನ್ಮ ದಿನಾಚರಣೆಯನ್ನು ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಬುದ್ಧ ಪೂರ್ಣಿಮಾ ಹಿಂದೂ ತಿಂಗಳ ವೈಶಾಖ ಮಾಸದ ಹುಣ್ಣಿಮೆಯ ದಿನದಂದು ಬರುತ್ತದೆ. ಈ ವರ್ಷ, ಬುದ್ಧ ಜಯಂತಿಯನ್ನು ಮೇ 5 ರಂದು ಆಚರಿಸಲು ಸಜ್ಜಾಗಿದೆ. ಇದು ದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಬೌದ್ಧ ಜನರು ವ್ಯಾಪಕವಾಗಿ ಆಚರಿಸುವ ಪ್ರಮುಖ ಹಬ್ಬವಾಗಿದೆ. ‘ಬುದ್ಧ ಜಯಂತಿ’ ಎಂದೂ ಕರೆಯಲ್ಪಡುವ ಈ ಹಬ್ಬವು ಪ್ರಪಂಚದಾದ್ಯಂತದ ಬೌದ್ಧರಿಗೆ ಅಪಾರ ಮಹತ್ವವನ್ನು ಹೊಂದಿದೆ.