ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಹಿನ್ನೆಲೆ ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜ್ಯಕ್ಕೆ ಆಗಮಿಸಿದ್ದರು. ನಿನ್ನೆ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಬೆಂಗಳೂರಿಗೆ ಬಂದಿಳಿದಿದ್ದರು. ಬಳಿಕ ಕೆಲ ಯೋಜನೆಗಳಿಗೆ ಚಾಲನೆ ನೀಡಿ ಮೈಸೂರಿಗೆ ತೆರಳಿದ್ದರು. ಮೈಸೂರಿನಲ್ಲಿ ಇಂದು ಬೆಳಿಗ್ಗೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೆಹಲಿಗೆ ತೆರಳಿದ್ದಾರೆ. ಇನ್ನು ಮೋದಿ ರಾಜ್ಯಕ್ಕೆ ಆಗಮಿಸುತ್ತಾರೆಂದು ಬಿಬಿಎಂಪಿ ಬೆಂಗಳೂರಿನಲ್ಲಿ ಕೆಲ ರಸ್ತೆಗಳನ್ನ ಸರಿಪಡಿಸಿದೆ. ಮೋದಿ ಸಂಚರಿಸಿದ್ದ ರಸ್ತೆಮಾರ್ಗ ಅಭಿವೃದ್ಧಿಗೆಂದು ಬಿಬಿಎಂಪಿ ಒಟ್ಟು 23 ಕೋಟಿ ರೂ. ಖರ್ಚು ಮಾಡಿದೆ ಎಂದು ತಿಳಿದುಬಂದಿದೆ.
ಮೋದಿ ಸಂಚರಿಸಲು ನಗರದಲ್ಲಿ 14 ಕಿ.ಮೀ. ರಸ್ತೆ ಡಾಂಬರೀಕರಣ, ಫುಟ್ಪಾತ್ ಸ್ಲ್ಯಾಬ್, ಬೀದಿ ದೀಪ, ಮರಗಳ ರೆಂಬೆ ಕಟ್, ಚರಂಡಿ ಸ್ವಚ್ಛತೆಗೆ ಬಿಬಿಎಂಪಿ ಸುಮಾರು 23 ಕೋಟಿ ರೂ. ಖರ್ಚು ಮಾಡಿದೆ. ಮುಖ್ಯ ಆಯುಕ್ತರ ವಿವೇಚನಾ ಅನುದಾನದಡಿಯಲ್ಲಿ ಹಣ ಖರ್ಚಾಗಿದ್ದು, ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: IND vs IRE: ಭಾರತ-ಐರ್ಲೆಂಡ್ ಟಿ20 ಸರಣಿ 7 ಗಂಟೆಗೆ ಶುರುವಾಗಲ್ಲ: ಹಾಗಿದ್ರೆ ಎಷ್ಟು ಗಂಟೆಗೆ?, ಇಲ್ಲಿದೆ ಎಲ್ಲ
ನಿನ್ನೆಯಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ಮೋದಿಗಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮೈಸೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದರು.
ಮೋದಿ ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಪ್ರಧಾನಿಗಳ ಜತೆ ನಾವು ಯೋಗಾಭ್ಯಾಸ ಮಾಡಿದ್ದು ಖುಷಿ ವಿಚಾರ ಎಂದರು. ಇನ್ನು ಪ್ರಧಾನಿಗೆ ಪ್ರಮೋದಾ ದೇವಿ ಅವರು ಪಂಚಮುಖಿ ಆಂಜನೇಯ ಫೋಟೋವನ್ನು ಉಡುಗೊರೆಯಾಗಿ ನೀಡಿದರು.
ಮೋದಿ ನೋಡಿ ಸಂತಸಪಟ್ಟ ವಿಶೇಷಚೇತನ ಮಕ್ಕಳು:
ಯೋಗ ದಿನಾಚರಣೆಯಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ವಿಶೇಷ ಚೇತನ ಮಕ್ಕಳು ಭಾಗಿಯಾಗಿದ್ದರು. ಮೋದಿ ಜೊತೆ ಯೋಗ ಮಾಡಿ ಮಕ್ಕಳು ಖುಷಿಪಟ್ಟರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Tue, 21 June 22