AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟೇಜ್​ ಮೇಲೆ ಕೆಜಿಎಫ್​2 ಡೈಲಾಗ್ ಹೊಡೆದ ಎಸ್.ಡಿ.ಪಿ.ಐ ಮುಖಂಡ

TV9 Web
| Updated By: ವಿವೇಕ ಬಿರಾದಾರ

Updated on:May 28, 2022 | 4:58 PM

ಎಸ್.ಡಿ.ಪಿ.ಐ ಮುಖಂಡ ರಿಯಾಝ್ ಫರಂಗಿಪೇಟೆ ಸ್ಟೇಜ್​ ಮೇಲೆ ಕೆಜಿಎಫ್​2 ಡೈಲಾಗ್ ಹೊಡೆದಿದ್ದಾರೆ. ವೈಲನ್ಸ್.. ವೈಲನ್ಸ್.. ವೈಲನ್ಸ್.. ವಿ ಡೋಂಟ್ ಲೈಕ್ ಇಟ್​ ವಿ ಅವೈಡ್​, ಬಟ್​ ವೈಲನ್ಸ್ ಲೈಕ್​ ಅಸ್..​ ವೀ ಕೇನಾಟ್​​ ಅವೈಡ್ ಅಂತ ಡೈಲಾಗ್ ಹೊಡೆದಿದ್ದಾರೆ. ​

ಮಂಗಳೂರು: ಎಸ್.ಡಿ.ಪಿ.ಐ (SDPI) ಮುಖಂಡ ರಿಯಾಝ್ ಫರಂಗಿಪೇಟೆ ಸ್ಟೇಜ್​ ಮೇಲೆ ಕೆಜಿಎಫ್​2 ಡೈಲಾಗ್ ಹೊಡೆದಿದ್ದಾರೆ. ಬಜರಂಗ ದಳ, ಸಂಘ ಪರಿವಾರಕ್ಕೆ, ಶಾಂತಿ ಪ್ರೀಯರಿಗೆ ಹೇಳುತ್ತೇನೆ ನಾವು ಖಂಡಿತವಾಗಿ ಗಲಬೆ ಪ್ರೀಯರಲ್ಲ, ಕೊಲೆ, ಗಲಬೆ ಇಷ್ಟವಿಲ್ಲ ಎಂದು ಹೇಳಿ ಡೈಲಾಗ್​. ವೈಲನ್ಸ್.. ವೈಲನ್ಸ್.. ವೈಲನ್ಸ್.. ವಿ ಡೋಂಟ್ ಲೈಕ್ ಇಟ್​ ವಿ ಅವೈಡ್​, ಬಟ್​ ವೈಲನ್ಸ್ ಲೈಕ್​ ಅಸ್..​ ವೀ ಕೇನಾಟ್​​ ಅವೈಡ್ ಅಂತ ಡೈಲಾಗ್ ಹೊಡೆದಿದ್ದಾರೆ. ​

ಮಂಗಳೂರಿನ (Mangalore) ಕಣ್ಣೂರಿನಲ್ಲಿ ನಡೆದ ಎಸ್​​ಡಿಪಿಐ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಎಸ್​​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್  ಇಂದು ಮಾತನಾಡಿ ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ. ಡಿಕೆಶಿ ಮಳಲಿ ಮಸೀದಿ ವಿಚಾರದಲ್ಲಿ ಮಾತಾಡದಂತೆ ತಮ್ಮ ಶಾಸಕರಿಗೆ ಹೇಳಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ಪರ ಅಲ್ಲ ಅನ್ನೋದನ್ನ ತಿಳಿದುಕೊಳ್ಳಿ. ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು. ಪೂಜಾ ಸ್ಥಳ ಕಾಯ್ದೆ 1991 ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು. ಈ ಆ್ಯಕ್ಟ್​ನ್ನು ಪೊಲೀಸರು ಓದಿಲ್ವೇ ಎಂದು ಪ್ರಶ್ನಿಸಿದರು.

Published on: May 28, 2022 04:58 PM