ತಾರಕಕ್ಕೇರಿದ ಮಳಲಿ ಮಂದಿರ ಮಸೀದಿ ಸಮರ! ಮಸೀದಿಯನ್ನು ಬಿಟ್ಟು ಕೊಡುತ್ತಾರೆ ಎಂಬ ಕನಸು ಕಾಣಬೇಡಿ: ಅಬ್ದುಲ್ ಮಜೀದ್

2006ರಲ್ಲಿ ಸಂಡೂರಿನ ಸುಗ್ಗುಲಮ್ಮ ದೇವಾಲಯ ಒಡೆದು ಹಾಕಿದ್ದರಲ್ಲ, ಸಂಘಪರಿವಾರದ ಕಾರ್ಯಕರ್ತರು ತಾಕತ್ತಿದ್ದರೆ ಅದರ ಬಗ್ಗೆ ತಾಂಬೂಲ ಪ್ರಶ್ನೆ ಇಡಲಿ ಎಂದು

ತಾರಕಕ್ಕೇರಿದ ಮಳಲಿ ಮಂದಿರ ಮಸೀದಿ ಸಮರ! ಮಸೀದಿಯನ್ನು ಬಿಟ್ಟು ಕೊಡುತ್ತಾರೆ ಎಂಬ ಕನಸು ಕಾಣಬೇಡಿ: ಅಬ್ದುಲ್ ಮಜೀದ್
ಎಸ್​​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 28, 2022 | 11:38 AM

ಮಂಗಳೂರು: ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ ಎಂದು ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್​​ಡಿಪಿಐ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಎಸ್​​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ ನೀಡಿದ್ದಾರೆ. ಡಿಕೆಶಿ ಮಳಲಿ ಮಸೀದಿ ವಿಚಾರದಲ್ಲಿ ಮಾತಾಡದಂತೆ ತಮ್ಮ ಶಾಸಕರಿಗೆ ಹೇಳಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ಪರ ಅಲ್ಲ ಅನ್ನೋದನ್ನ ತಿಳಿದುಕೊಳ್ಳಿ. ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು. ಪೂಜಾ ಸ್ಥಳ ಕಾಯ್ದೆ 1991 ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು. ಈ ಆ್ಯಕ್ಟ್​ನ್ನು ಪೊಲೀಸರು ಓದಿಲ್ವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: National Hamburger Day 2022: ಬರ್ಗರ್​ನ ಇತಿಹಾಸ ನಿಮಗೆ ತಿಳಿದಿದೆಯೇ? ವಿವಿಧ ರೀತಿಯ ಹ್ಯಾಂಬರ್ಗ್​ಗಳು ಇಲ್ಲಿವೆ ನೋಡಿ

2006ರಲ್ಲಿ ಸಂಡೂರಿನ ಸುಗ್ಗುಲಮ್ಮ ದೇವಾಲಯ ಒಡೆದು ಹಾಕಿದ್ದರಲ್ಲ, ಸಂಘಪರಿವಾರದ ಕಾರ್ಯಕರ್ತರು ತಾಕತ್ತಿದ್ದರೆ ಅದರ ಬಗ್ಗೆ ತಾಂಬೂಲ ಪ್ರಶ್ನೆ ಇಡಲಿ. ಮಾಜಿ ಸಚಿವ ಜನಾರ್ದನ ರೆಡ್ಡಿ, ಸಚಿವ ಶ್ರೀರಾಮುಲು ಧ್ವಂಸಗೊಳಿಸಿದ್ದರಲ್ಲ, ತಾಕತ್ತಿದ್ದರೆ ಜನಾರ್ದನ ರೆಡ್ಡಿ ಮನೆಗೆ ಮಾರ್ಚ್ ಮಾಡಲಿ ಎಂದು ಚಾಲೇಂಜ್​ ಮಾಡಿದರು.

ಅಬ್ದುಲ್ ಮಜೀದ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ: ಮುತಾಲಿಕ್‌ 

ಈ ಕುರಿತಾಗಿ ಮೈಸೂರಿನಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್‌ ಮಾತನಾಡಿದ್ದು, ಅಬ್ದುಲ್ ಮಜೀದ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಗಲಭೆ, ಪ್ರಚೋದನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ.  ಹಲವು ಕಡೆ ದೇಗುಲ ಕೆಡವಿ ಮಸೀದಿ ನಿರ್ಮಿಸಲಾಗಿದೆ. ಇಂತಹ ಮಸೀದಿಗಳನ್ನು ಮತ್ತೆ ವಾಪಸ್ ಪಡೆಯುತ್ತೇವೆ. ತಾಕತ್ ಇದ್ದರೆ ಇದನ್ನು ತಡೆಯಿರಿ ಎಂದು ಮುತಾಲಿಕ್‌ ಸವಾಲ್​ ಹಾಕಿದರು. 30 ಸಾವಿರ ದೇವಾಲಯಗಳನ್ನೂ ನಾವು ಕಾನೂನು ಪ್ರಕಾರವೇ ಎಲ್ಲಾ ದೇಗುಲಗಳನ್ನು ವಾಪಸ್​ ಪಡೆಯುತ್ತೇವೆ.
ಬಾಬ್ರಿ ಮಸೀದಿ ವಿಚಾರದಲ್ಲೂ ಇದೇ ರೀತಿ ಹೇಳಿದ್ದು, ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಿಸುತ್ತಿದ್ದೇವೆ. ಒಂದು ಹನಿ ರಕ್ತವೂ ವ್ಯರ್ಥವಾಗದಂತೆ ಮಂದಿರ ನಿರ್ಮಿಸ್ತಿದ್ದೇವೆ. ಬಾಬ್ರಿ ಮಸೀದಿ ವಿಚಾರದಲ್ಲಿ ನಿಮ್ಮ ಕೈಯಲ್ಲಿ ಏನಾಯಿತು ಎಂದು ಹೇಳಿದರು. ತಾಂಬೂಲ ಪ್ರಶ್ನೆ ವಿಚಾರವಾಗಿ ಮಾತನಾಡಿದ್ದು, ಒದ್ದು ಒಳಗೆ ಹಾಕಿ ಎನ್ನುವವರು ಸರ್ವನಾಶ ಆಗುತ್ತಾರೆ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada