Rahul Gandhi: ಅನುಮತಿ ಪಡೆಯದೆ ಲಂಡನ್​ಗೆ ಹೋದ ಸಂಸದ ರಾಹುಲ್ ಗಾಂಧಿ; ಪಕ್ಷದ ವತಿಯಿಂದ ಬಂತು ಪ್ರತಿಕ್ರಿಯೆ: ಏನದು? ಮತ್ತದೇ ಯಡವಟ್ಟು!

ಇಟಲಿ ಮೂಲದ ರಾಹುಲ್ ಗಾಂಧಿ ಅವರಿಗೆ ವಿದೇಶ ಪ್ರವಾಸಗಳು ಮತ್ತು ವಿವಾದಗಳು ಹೊಸತೇನೂ ಅಲ್ಲ. ಆದರೆ ಈ ಬಾರಿ ಅವರು ವಿದೇಶಕ್ಕೆ ಹೋಗಿದ್ದಾಗ ಮುಖ್ಯವಾಗಿ ಒಂಡು ಯಡವಟ್ಟು ಮಾಡಿಕೊಂಡಿದ್ದರು. ವಿದೇಶ ಪ್ರವಾಸ ಕೈಗೊಳ್ಳಲು ಶಿಷ್ಟಾಚಾರದ ಪ್ರಕಾರ ವಿದೇಶ ಪ್ರವಾಸ ಕೈಗೊಳ್ಳಲು ವಿದೇಶಾಂಗ ಸಚಿವಾಲಯದಿಂದ ಅಧಿಕೃತ ಒಪ್ಪಿಗೆ ಪಡೆದಿರಲಿಲ್ಲ ಎಂಬುದು ಇದರ ತಿರುಳಾಗಿತ್ತು. ಆದರೆ ಕಾಂಗ್ರೆಸ್​ ಹೇಳುವುದೇ ಬೇರೆ.

Rahul Gandhi: ಅನುಮತಿ ಪಡೆಯದೆ ಲಂಡನ್​ಗೆ ಹೋದ ಸಂಸದ ರಾಹುಲ್ ಗಾಂಧಿ; ಪಕ್ಷದ ವತಿಯಿಂದ ಬಂತು ಪ್ರತಿಕ್ರಿಯೆ: ಏನದು? ಮತ್ತದೇ ಯಡವಟ್ಟು!
ಅನುಮತಿ ಪಡೆಯದೆ ಲಂಡನ್​ಗೆ ಹೋದ ಸಂಸದ ರಾಹುಲ್ ಗಾಂಧಿ; ಪಕ್ಷದ ವತಿಯಿಂದ ಬಂತು ಪ್ರತಿಕ್ರಿಯೆ: ಏನದು? ಮತ್ತದೇ ಯಡವಟ್ಟು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 28, 2022 | 5:00 PM

ವಯನಾಡ್ (Wayanad Congress MP) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸಖತ್​ ಐಡಿಯಾ ಮಾಡಿ ಮೊನ್ನೆ ಲಂಡನ್​ಗೆ ಹೋಗಿಬಂದಿದ್ದರು. ಆದರೆ ಯಾವುದೆ ಸಂಸದ ವಿದೇಶ ಪ್ರವಾಸಕ್ಕೆ ಹೋಗಬೇಕೆಂದರೆ ಭಾರತದ ವಿದೇಶಾಂಗ ಸಚಿವಾಲಯದ (Ministry of External Affairs) ಅನುಮತಿ ಪಡೆಯಲೇಬೇಕು! ರಾಹುಲ್ ಗಾಂಧಿ ಅಂತಹ ಔಪಚಾರಿಕ ಪ್ರಕ್ರಿಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸೀದಾ ಲಂಡನ್ ಗೆ (London visit) ಹೋಗಿಬಂದಿದ್ದಾರೆ ಎಂದು ಜನ ಕಟಕಿಯಾಡಿದ್ದರು. ಇದು ಶಿಷ್ಟಾಚಾರದ ಪ್ರಶ್ನೆಯಷ್ಟೇ ಅಲ್ಲ, ಭದ್ರತೆಯ ದೃಷ್ಟಿಯಿಂದ ಏನಾದರೂ ಹೆಚ್ಚುಕಮ್ಮಿಯಾಗಿದ್ದರೆ ಹೊಣೆ ಯಾರು ಎಂಬ ಪ್ರಶ್ನೆಯೂ ತೂರಿಬಂದಿತ್ತು. ಕಾಂಗ್ರೆಸ್​ ನಾಯಕ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದರಾ ಅಥವಾ ಟೇಕನ್ ಫಾರ್​​ ಗ್ರಾಂಟೆಡ್ಡಾ? ಎಂದೂ ಜನ ಮಾತನಾಡತೊಡಗಿದ್ದರು. ಇದಕ್ಕೆಲ್ಲಾ ಉತ್ತರವೆಂಬಂತೆ ಕಾಂಗ್ರೆಸ್​ ಪಕ್ಷದ ವತಿಯಿಂದ ಇದೀಗ ಪ್ರತಿಕ್ರಿಯೆ ಹೊರಬಿದ್ದಿದೆ.

ಇಟಲಿ ಮೂಲದ ರಾಹುಲ್ ಗಾಂಧಿ ಅವರಿಗೆ ವಿದೇಶ ಪ್ರವಾಸಗಳು ಮತ್ತು ವಿವಾದಗಳು (controversies) ಹೊಸತೇನೂ ಅಲ್ಲ. ಆದರೆ ಈ ಬಾರಿ ಅವರು ವಿದೇಶಕ್ಕೆ ಹೋಗಿದ್ದಾಗ ಮುಖ್ಯವಾಗಿ ಒಂಡು ಯಡವಟ್ಟು ಮಾಡಿಕೊಂಡಿದ್ದರು. ವಿದೇಶ ಪ್ರವಾಸ ಕೈಗೊಳ್ಳಲು ಶಿಷ್ಟಾಚಾರದ ಪ್ರಕಾರ ವಿದೇಶ ಪ್ರವಾಸ ಕೈಗೊಳ್ಳಲು (UK visit) ವಿದೇಶಾಂಗ ಸಚಿವಾಲಯದಿಂದ ಅಧಿಕೃತ ಒಪ್ಪಿಗೆ ಪಡೆದಿರಲಿಲ್ಲ ಎಂಬುದು ಇದರ ತಿರುಳಾಗಿತ್ತು. ಆದರೆ ಕಾಂಗ್ರೆಸ್​ ಹೇಳುವುದು ಇಂತಹ MEA ಒಪ್ಪಿಗೆ ಬೇಕಿರುವುದು ಅಧಿಕೃತ/ಸರ್ಕಾರಿ ಭೇಟಿಗಳಿಗೆ ಮಾತ್ರವೇ ಎಂದು ಹೇಳಿದೆ. ಖಾಸಗಿ ಭೇಟಿಗಳಿಗೆ ಅನುಮತಿಯ ಅಗತ್ಯವಿರುವುದಿಲ್ಲ ಎಂಬುದು ಪ್ರತಿವಾದದ ಸಾರವಾಗಿದೆ. ಇಲ್ಲಿ ದಾಖಲಾರ್ಹ ಸಂಗತಿಯೆಂದರೆ ಆರ್​ಜೆಡಿ ಸಂಸದ ಮನೋಜ್​ ಝಾ (RJD MP Manoj Jha) ಅವರು ರಾಹುಲ್ ಗಾಂಧಿ ಭಾಗವಹಿಸಿದ್ದ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗತ್ಯ ಒಪ್ಪಿಗೆ ಬಡೆದಿದ್ದರು.

ಇದನ್ನೂ ಓದಿ: ಯಾವುದೆ ಸಂಸದ ವಿದೇಶ ಪ್ರವಾಸಕ್ಕೆ ಹೋಗಬೇಕೆಂದರೆ ವಿದೇಶಾಂಗ ಸಚಿವಾಲಯದ ಅನುಮತಿ ಪಡೆಯಲೇಬೇಕು! ಆದರೆ ರಾಹುಲ್ ಗಾಂಧಿ ಮಾಡಿದ್ದೇನು?

ಬ್ರಿಟನ್ ಕೇಂಬ್ರಿಜ್ ವಿಶ್ವವಿದ್ಯಾಲಯದ (Cambridge University) ಹಳೆಯ ವಿದ್ಯಾರ್ಥಿಯಾದ, ಈಗ 52 ವರ್ಷದ ರಾಹುಲ್ ಗಾಂಧಿ ಅವರು ಅಲ್ಲಿ ಸಂವಾದದಲ್ಲಿ ತೊಡಗಿದ್ದಾಗ ಭಾರತ ಸರ್ಕಾರದ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ, ರಾಹುಲ್ ಗಾಂಧಿ ಅವರಿಗೆ ತಿಳಿವಳಿಕೆ ಮೂಡಿಸುವ ವಿಡಿಯೋ ವೈರಲ್ ಆಗಿತ್ತು. ಭಾರತೀಯ ರೈಲ್ವೆಯ ಟ್ರಾಫಿಕ್ ಸರ್ವೀಸ್ ಸೇವೆಯಲ್ಲಿರುವ ಸಿದ್ಧಾರ್ಥ ವರ್ಮಾ ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದ ಕಾಮನ್​ವೆಲ್ತ್​ ಸ್ಕಾಲರ್​ ಸಹ ಹೌದು. ಅದಕ್ಕೆ ರಾಹುಲ್ ಗಾಂಧಿ ಭಾರತದ ಅಧಿಕಾರಿ ವೃಂದ ತುಂಬಾ ಉದ್ದಟತನದಿಂದ ಕೂಡಿದೆ ಎಂದು ಜರಿದಿದ್ದರು.

ತಮ್ಮ ತಂದೆಯವರ ಹತ್ಯೆ ಸನ್ನಿವೇಶದ ಕುರಿತು ಸಂದರ್ಶಕಿಯೊಬ್ಬರು ಪ್ರಶ್ನೆ ಎಸೆದಾಗ ರಾಹುಲ್ ಗಾಂಧಿ ಸುದೀರ್ಘ ಮೌನಕ್ಕೆ ಜಾರಿದ್ದು, ಆ ವಿಡಿಯೋ ವೈರಲ್ ಆಗಿತ್ತು. ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ‘ಇಂಡಿಯಾ ಅಟ್ 75′ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಹಿಂದೂ ರಾಷ್ಟ್ರೀಯತೆ, ಕಾಂಗ್ರೆಸ್ ಪಕ್ಷದೊಳಗೆ ಗಾಂಧಿ ಕುಟುಂಬದ ಪಾತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು.

ಇನ್ನು, ಜಮ್ಮು ಕಾಶ್ಮೀರದ ವಿಷಯದಲ್ಲಿ ಭಾರತ ವಿರೋಧಿ ನಿಲುವಿನ ಬ್ರಿಟನ್ನಿನ ಲೇಬೆರ್ ಪಾರ್ಟಿ ಸಂಸದ ಜೆಮ್ಮಿ ಕಾರ್ಬಿನ್ ಜೊತೆ ಪೋಸ್ ಕೊಟ್ಟಿದ್ದು ಹಲವರ ಹುಬ್ಬೇರಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆದರೆ ಅಧಿಕೃತ ಪ್ರವಾಸವಲ್ಲದಿದ್ದರೂ ವಿದೇಶಕ್ಕೆ ಹೋಗುವಾಗ ಕನಿಷ್ಠ 15 ದಿನ ಮೊದಲು ಭಾರತ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಲೋಕಸಭಾ ಕಾರ್ಯಾಲಯ ಸ್ಪಷ್ಟ ನುಡಿಗಳಲ್ಲಿ ಹೇಳಿದೆ.

To Read more about the issue click the link here

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ