ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಬಿಬಿಎಂಪಿ ವತಿಯಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ

ಎಂ.ವಿಶ್ವೇಶ್ವರಯ್ಯನವರ ಪ್ರತಿಮೆಯ ಆವರಣವನ್ನು ಸಾರ್ವಜನಿಕ ಚರ್ಚಾ ಸ್ಥಳವಾಗಿ (public space) ನವೀಕರಿಸಿರುವ ಕಾಮಗಾರಿಗೆ ಲೋಕಾರ್ಪಣೆ ಮಾಡಲಾಗಿದೆ.

ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಬಿಬಿಎಂಪಿ ವತಿಯಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ
ಸರ್ ಎಂ.ವಿಶ್ವೇಶ್ವರಯ್ಯ
Follow us
TV9 Web
| Updated By: sandhya thejappa

Updated on: Sep 15, 2021 | 4:34 PM

ಬೆಂಗಳೂರು: ಇಂದು (ಸೆ.15) ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ (Sir M Vishweshwarayya) 160ನೇ ಜನ್ಮ ದಿನಾಚರಣೆ. ಈ ದಿನವನ್ನು ಅಂದರೆ ಸೆಪ್ಟೆಂಬರ್ 15ಕ್ಕೆ ಪ್ರತಿ ವರ್ಷ ಭಾರತದಲ್ಲಿ ಇಂಜಿನಿಯರ್ಗಳ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. 1968ನೇ ಇಸವಿಯಿಂದ ಆಚರಣೆ ಪ್ರಾರಂಭವಾಗಿದೆ. ದೇಶಕ್ಕೆ ಸರ್ ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ. ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಅಂಗವಾಗಿ ಬಿಬಿಎಂಪಿ (BBMP) ವತಿಯಿಂದ ಇಂದು ಕೆ.ಆರ್.ವೃತ್ತದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಲೋಕಾರ್ಪಣೆ ಮಾಡಲಾಗಿದೆ.

ಎಂ.ವಿಶ್ವೇಶ್ವರಯ್ಯನವರ ಪ್ರತಿಮೆಯ ಆವರಣವನ್ನು ಸಾರ್ವಜನಿಕ ಚರ್ಚಾ ಸ್ಥಳವಾಗಿ (public space) ನವೀಕರಿಸಿರುವ ಕಾಮಗಾರಿಗೆ ಲೋಕಾರ್ಪಣೆ ಮಾಡಲಾಗಿದೆ. ಸದರಿ ಸ್ಥಳದಲ್ಲಿ 1970ನೇ ಇಸವಿಯಲ್ಲಿ ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸದ್ಯ ಸದರಿ ಪ್ರದೇಶಕ್ಕೆ ಅಳವಡಿಸಲಾದ ಉಕ್ಕಿನ ಬೇಲಿಯನ್ನು ತೆರವುಗೊಳಿಸಿ ವಾಸ್ತು ಶಿಲ್ಪಿಗಳ ಸಹಯೋಗದೊಂದಿಗೆ ಸಾರ್ವಜನಿಕ ಸ್ಥಳವೆಂದು ನವೀಕರಿಸಲಾಗಿದೆ.

ಸಾರ್ವಜನಿಕರ ಉಪಯೋಗಕ್ಕಾಗಿ ಎರಡು ಅಲ್ಮೇರಾಗಳನ್ನು ಅಳವಡಿಸಿ ತಾಂತ್ರಿಕ ಪುಸ್ತಕಗಳನ್ನು ಮತ್ತು ಸರ್ ಎಂ.ವಿಶ್ವೇಶ್ವರಯ್ಯನವರ ಜೀವನ ಜೀವನ ಧ್ಯೇಯವನ್ನು ಪ್ರಚಲಿತ ಪಡಿಸುವ ಫಲಕಗಳನ್ನು ಅಡವಡಿಸಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಬೀದಿ ಮತ್ತು ನೃಪತುಂಗ ರಸ್ತೆಗೆ ಸಂಪರ್ಕಿಸುವ ಕೆ.ಆರ್.ವೃತ್ತದಲ್ಲಿ ಪ್ರಥಮ ಬಾರಿಗೆ 160 ಅಡಿ ಉದ್ದದ (52.00 ಮೀಟರ್) ನೀರಿನ ಕಾರಂಜಿಯ ಲೋಕಾರ್ಪಣೆ ಮಾಡಲಾಗಿದೆ. ಕೆ.ಆರ್.ವೃತ್ತದಲ್ಲಿ ಪ್ರಥಮ ಬಾರಿಗೆ 160 ಅಡಿ ಉದ್ದದ ನೀರಿನ ಕಾರಂಜಿಯನ್ನು ಗ್ರಾನೇಟ್ನೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಇನ್ನು ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಬೆಂಗಳೂರು ನಗರದ 30 ಪ್ರತಿಷ್ಠಿತ ಕೂಡು ಸ್ಥಳ (Junction)ಗಳ ಅಭಿವೃದ್ಧಿಯ ಪರಿಚಯ ಪುಸ್ತಕ (Coffee Table Book)ನ ಲೋಕಾರ್ಪಣೆ ಮಾಡಲಾಗಿದೆ.

ಇದನ್ನೂ ಓದಿ

ಆಲಿಬಾಗ್​ನಲ್ಲಿ ಬೃಹತ್ ಮನೆಯನ್ನು ಖರೀದಿಸಿದ ದೀಪಿಕಾ- ರಣವೀರ್; ಅದರ ಬೆಲೆ ಎಷ್ಟು ಗೊತ್ತಾ?

ದಾವಣಗೆರೆ ಕಾಂಗ್ರೆಸ್: ಪ್ರಧಾನಿ ಮೋದಿ ಜನ್ಮದಿನವನ್ನು ನಿರುದ್ಯೋಗಿಗಳ ದಿನವೆಂದು ಆಚರಣೆ; ರಕ್ತದಲ್ಲಿ ಪತ್ರ!

(BBMP have been implemented Various development programs as a part of Sir M Vishweshwaraiah Birthday)

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ