ಗ್ರಾಮ ಪಂಚಾಯತ್ ನೌಕರರು ಧರಣಿ ಹಿಂಪಡೆಯಲು ನಿರ್ಧರಿಸಿದ್ದೇವೆ. ನೌಕರರ 4 ಬೇಡಿಕೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ. 2ನೇ ಕಂತಿನ ಹಣ ನಾಳೆ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಗ್ರಾಮ ಪಂಚಾಯತ್ ನೌಕರರ 2ನೇ ಬೇಡಿಕೆ ಪಿಂಚಣಿ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ನೇರ ನೇಮಕಾತಿ ಕೋಟಾದಲ್ಲಿ ಬಡ್ತಿ ಮಾರ್ಗಸೂಚಿ ಬದಲು ಮಾಡುವ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಮಾರ್ಗಸೂಚಿ ಬದಲಾವಣೆ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ಗ್ರಾಮ ಪಂಚಾಯತ್ ನೌಕರರ ಸಂಘದ ಪದಾಧಿಕಾರಿ ನಾಡಗೌಡ ಹೇಳಿಕೆ ನೀಡಿದ್ದಾರೆ.
ಕೆಲ ಬೇಡಿಕೆಗಳನ್ನು ನಾಳೆಯೇ ಈಡೇರಿಸುವುದಾಗಿ ಹೇಳಿದ್ದಾರೆ. ಸರ್ಕಾರಿ ಅಧಿಕಾರಿಗಳು ಮುಷ್ಕರ ಹಿಂಪಡೆಯಿರಿ ಅಂದಿದ್ದಾರೆ. ಅಧಿಕಾರಿಗಳು ನೀಡಿದ ಭರವಸೆಯಂತೆ ಕಾಲಾವಕಾಶ ನೀಡ್ತೇವೆ. ಗ್ರಾಮ ಪಂಚಾಯತ್ ನೌಕರರಿಗೆ ನೇರವಾಗಿ ವೇತನ ನೀಡಲು ಒಪ್ಪಿದ್ದಾರೆ. ಹೀಗಾಗಿ ನಮ್ಮ ಹೋರಾಟವನ್ನು ಕೈಬಿಡಲು ನಿರ್ಧರಿಸಿದ್ದೇವೆ ಎಂದು ನಾಡಗೌಡ ಹೇಳಿದ್ದಾರೆ.
ಇದನ್ನೂ ಓದಿ: ಜಿ. ಪಂ, ತಾ. ಪಂ ಮರು ವಿಂಗಡಣಾ ವಿಧೇಯಕದಿಂದ ಚುನಾವಣೆ ವಿಳಂಬ ಆಗದು: ಸಿಎಂ ಭರವಸೆ
ಇದನ್ನೂ ಓದಿ: ನನ್ನನ್ನು ಇಂಜಿನಿಯರ್ ಬೊಮ್ಮಾಯಿ ಅಂದ್ರೆ ಖುಷಿಯಾಗುತ್ತೆ; ಸಿಎಂ ಬಸವರಾಜ ಬೊಮ್ಮಾಯಿ