ಸ್ವಂತ ಸೂರು ಕನಸು ಕಂಡವರಿಗೆ ನಿರಾಶೆ, ಮೂರು ವರ್ಷವಾದ್ರೂ ಹಂಚಿಕೆಯಾಗದ ಮನೆಗಳು

ಸುಣ್ಣಬಣ್ಣ ಎಲ್ಲವೂ ಆಗಿದೆ...ಮನೆಯೊಳಗೆ ವಿದ್ಯುತ್‌ ಸಂಪರ್ಕ, ನೆಲಹಾಸು ಎಲ್ಲಾ ಕೆಲಸವೂ ಮುಗಿದಿದೆ.. ಈ ಮನೆಗಳನ್ನ ತಲುಪೋಕೆ ರಸ್ತೆ ಕೂಡಾ ರೆಡಿಯಾಗಿದೆ.. ಆದ್ರೆ ಮನೆಗಳು ಮಾತ್ರ ಹಂಚಿಕೆಯಾಗಿಲ್ಲ.. ರೆಡಿಯಾಗಿರೋ ಇದೇ ಮನೆಗಳು ಧೂಳು ತಿನ್ನುತ್ತಿವೆ. ಶ್ರೀಮಂತರ ಪಾಲಾಗುತ್ವಾ ಅನ್ನೋ ಆತಂಕಕ್ಕೆ ಕಾರಣವಾಗಿವೆ.

ಸ್ವಂತ ಸೂರು ಕನಸು ಕಂಡವರಿಗೆ ನಿರಾಶೆ, ಮೂರು ವರ್ಷವಾದ್ರೂ ಹಂಚಿಕೆಯಾಗದ ಮನೆಗಳು
ಸ್ವಂತ ಸೂರು ಕನಸು ಕಂಡವರಿಗೆ ನಿರಾಶೆ, ಮೂರು ವರ್ಷವಾದ್ರೂ ಹಂಚಿಕೆಯಾಗದ ಮನೆಗಳು

ಗದಗ: ಕಡುಬಡವರಿಗೆ ಉಚಿತವಾಗಿ ಮನೆ, ಅದ್ರಲ್ಲೂ ಹೈಟೆಕ್‌ ಮನೆಗಳನ್ನೇ ನೀಡ್ತೀವಿ ಅಂತಾ ಸರ್ಕಾರ ಹೇಳಿತ್ತು. ಅದ್ರಂತೆ ಮನೆಗಳು ಕೂಡಾ ನಿರ್ಮಾಣವಾಗಿವೆ. ಆದ್ರೆ ಬಡಜನರಿಗೆ ಮಾತ್ರ ವಿತರಣೆಯಾಗ್ತಿಲ್ಲ. 2018 ರಲ್ಲಿ ಅಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸರ್ವರಿಗೂ ಸೂರು ಅಂತಾ ಘೋಷಣೆ ಮಾಡಲಾಗಿತ್ತು. ಅದ್ರಂತೆ ಗದಗ ನಗರದ ಗಂಗಿಮಡಿ ಬಳಿ 3500 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಅದ್ರಲ್ಲೂ ಕಿಚನ್, ಹಾಲ್, ಬೆಡ್ ರೂಮ್, ಬಾತ್ ರೂಮ್, ವಿದ್ಯುತ್ ವ್ಯವಸ್ಥೆ ಸೇರಿದಂತೆ ಖಾಸಗಿ ಅಪಾರ್ಟ್‌ಮೆಂಟ್‌ ರೀತಿಯಲ್ಲೇ ಹೈಟೆಕ್‌ ಆಗಿ ಮನೆಗಳ ನಿರ್ಮಾಣವಾಗಿದೆ. ಆದ್ರೆ ಮೂರು ವರ್ಷವಾದ್ರೂ ಬಡವರಿಗೆ ಹಂಚಿಕೆಯಾಗಿಲ್ಲ. ಅದ್ರಲ್ಲೂ ಬಡವರಿಗೆ ಉಚಿತ ಅಂತಾ ಹೇಳಿದ್ದ ಅಧಿಕಾರಿಗಳು ಈಗ ಹಣ ಕಟ್ಟಿ ಅಂತಿದ್ದಾರಂತೆ. ಹೀಗಾಗಿ ಈ ಮನೆಗಳು ಶ್ರೀಮಂತರ ಪಾಲಾಗ್ತಾವಾ ಅನ್ನೋ ಅನುಮಾನ ಶುರುವಾಗಿದೆ.

ಇನ್ನು 2018 ರ ಚುನಾವಣೆ ವೇಳೆ ಬಡವರಿಗೆ ಉಚಿತ ಮನೆ ಅಂತಾ ಅಶ್ವಾಸನೆ ನೀಡಿದ್ದ ಹೆಚ್‌ಕೆ ಪಾಟೀಲ್‌, ಗೆದ್ದು ಬಂದಿದ್ರು. ಅದ್ರಂತೆ ಮುತುವರ್ಜಿವಹಿಸಿ ಮನೆಗಳನ್ನ ನಿರ್ಮಾಣ ಮಾಡಿದ್ದಾರೆ. ಆರಂಭದಲ್ಲಿ ಉಚಿತ ಅಂತಾ ಹೇಳಿದ್ದ ಅಧಿಕಾರಿಗಳು ಈಗ ಬಡಜನರಿಗೆ 50 ಸಾವಿರ ಹಣ ಕಟ್ಟಿ ಅಂತಿದ್ದಾರಂತೆ. ಆದ್ರೆ ಇಷ್ಟೊಂದು ಹಣವನ್ನ ಎಲ್ಲಿಂದ ತರೋದು ಅಂತಾ ಬಡವರು ನಿರ್ಗತಿಕರು ಕಂಗಾಲಾಗಿದ್ದಾರೆ. ಜನಪ್ರತಿನಿಧಿಗಳು ಕೂಡಾ ಈ ಬಗ್ಗೆ ಗಮನಹರಿಸುತ್ತಿಲ್ಲ. ಇನ್ನು ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ನಾವೇ ಲೋನ್‌ ವ್ಯವಸ್ಥೆ ಮಾಡಿಕೊಡ್ತೀವಿ ಅಂತಿದ್ದಾರೆ. ಅಷ್ಟೇ ಅಲ್ಲ ಕಡುಬಡವರನ್ನ ಗುರುತಿಸೋ ಕೆಲಸ ಆಗ್ತಿದ್ದು ಅದ್ರಿಂದಲೇ ವಿಳಂಭವಾಗ್ತಿದೆ. ಶೀಘ್ರದಲ್ಲೇ 250 ಮನೆಗಳನ್ನ ಹಂಚಿಕೆ ಮಾಡ್ತೀವಿ ಅಂತಿದ್ದಾರೆ.

ಒಟ್ನಲ್ಲಿ ಬಡವರಿಗೆ ಉಚಿತ ಮನೆ ಅಂತಾ ಘೋಷಣೆ ಮಾಡಿ ಸರ್ಕಾರದ ಹಣದಿಂದಲೇ ಮನೆಗಳನ್ನ ನಿರ್ಮಾಣ ಮಾಡಿದ್ದಾರೆ. ಆದ್ರೆ ಉಳ್ಳವರು ಜನಪ್ರತಿನಿಧಿಗಳಿಗೆ ನಮಗೊಂದು ಮನೆ ಕೊಡಿಸಿ ಅಂತಾ ದುಂಬಾಲು ಬಿದ್ದಿರೋದ್ರಿಂದ, ಮನೆ ಹಂಚಿಕೆ ನೆನೆಗುದಿಗೆ ಬಿದ್ದಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಟಿವಿ9 ಬಿಗ್​ ಇಂಪ್ಯಾಕ್ಟ್​: ಮುಳ್ಳು ಕಂಟಿಯಲ್ಲಿ ಮುಚ್ಚಿ ಹೋಗಿದ್ದ 8,000 ಆಸರೆ ಮನೆಗಳು ನೆರೆ ಪೀಡಿತರಿಗೆ ವಿತರಣೆಯಾದವು

Read Full Article

Click on your DTH Provider to Add TV9 Kannada