ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆಗೂ ಬಂತು ‘ಸೇವ್ ಮೊಮ್’ AI ಉಪಕರಣ! ಬಿಬಿಎಂಪಿ ಮಹತ್ವದ ಕ್ರಮ

|

Updated on: Sep 26, 2024 | 9:16 AM

ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯದ ಮೇಲೆ ನಿಗಾ ಇಡಲು ಹಾಗೂ ಸುರಕ್ಷಿತ ಹೆರಿಗೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು 'ಸೇವ್ ಮೊಮ್' ಎಂಬ ಎಐ ಆಧಾರಿತ ಪ್ರಾಯೋಗಿಕ ಉಪಕ್ರಮವನ್ನು ಬಿಬಿಎಂಪಿ ಪ್ರಾರಂಭಿಸಿದೆ. ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆಗೂ ಬಂತು ಸೇವ್ ಮೊಮ್ AI ಉಪಕರಣ! ಬಿಬಿಎಂಪಿ ಮಹತ್ವದ ಕ್ರಮ
ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆಗೂ ಬಂತು 'ಸೇವ್ ಮೊಮ್' AI ಉಪಕರಣ!
Follow us on

ಬೆಂಗಳೂರು, ಸೆ.26: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಜಗತ್ತಿನಾದ್ಯಂತ ತನ್ನದೇ ರೀತಿಯಲ್ಲಿ ದೈತ್ಯವಾಗಿ ಬೆಳೆಯುತ್ತಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಎಲ್ಲಾ ಕ್ಷೇತ್ರಗಳನ್ನು ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿದೆ. ಎಐ ತಂತ್ರಜ್ಞಾನ ಆಧಾರಿತ ಟ್ರಾಫಿಕ್‌ ಸಿಗ್ನಲ್​ಗಳನ್ನು ಬೆಂಗಳೂರಿನ ಹಲವೆಡೆ ಅಳವಡಿಸಲಾಗಿದೆ. ಇದೀಗ ಬಿಬಿಎಂಪಿ (BBMP) ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯದ ಮೇಲೆ ನಿಗಾ ಇಡಲು ಹಾಗೂ ಸುರಕ್ಷಿತ ಹೆರಿಗೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ‘ಸೇವ್ ಮೊಮ್’ ಎಂಬ ಎಐ ಆಧಾರಿತ ಪ್ರಾಯೋಗಿಕ ಉಪಕ್ರಮವನ್ನು ಪ್ರಾರಂಭಿಸಿದೆ.

ಬಿಬಿಎಂಪಿ ಆರೋಗ್ಯ ಇಲಾಖೆ ಶುರು ಮಾಡಿದ ಈ ಯೋಜನೆಯ ಪ್ರಮುಖ ಹೆಜ್ಜೆ ತಾಯಂದಿರ ಆರೋಗ್ಯ ಸುಧಾರಣೆಯಾಗಿದೆ. ಬಿಬಿಎಂಪಿಯ ಆರೋಗ್ಯ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಅವರು ಈ ಬಗ್ಗೆ’ಎಕ್ಸ್’ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಈ ಹಿಂದೆಯೇ ಬೆಂಗಳೂರಿನಲ್ಲಿರುವ ತಾಯಂದಿರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಪ್ರಾಯೋಗಿಕ ಯೋಜನೆಯಲ್ಲಿ ಬಳಸಲಾದ ಸೇವ್‌ ಮಾಮ್ ಎಂಬ ಅಪ್ಲಿಕೇಶನ್, ಬಿಬಿಎಂಪಿಯೊಳಗಿನ ವೈದ್ಯಕೀಯ ಅಧಿಕಾರಿಗಳಿಗೆ ಆಯಾ ಪ್ರದೇಶಗಳಲ್ಲಿನ ಗರ್ಭಿಣಿಯರ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಅಗತ್ಯ ಮಧ್ಯಸ್ಥಿಕೆಗಳನ್ನು ಒದಗಿಸಲು ಸಹಾಯ ಮಾಡಲಿದೆ ಎಂದು ಸುರಲ್ಕರ್ ವಿಕಾಸ್ ಅವರು ವಿವರಿಸಿದರು.

ಇದನ್ನೂ ಓದಿ: ತುಮಕೂರು, ಹೊಸೂರು ಮಧ್ಯೆ ಮೂರು ಹೊಸ ಮೆಮು ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ವಿವರ

ಇನ್ನು ಈ ಅಪ್ಲಿಕೇಶನ್​ನಿಂದಾಗಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಅಧಿಕಾರಿಗಳು, ಖಾಸಗಿ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳಿಗೆ ಗರ್ಭಿಣಿಯರ ಆರೋಗ್ಯ ಮತ್ತು ಭ್ರೂಣದ ಆರೋಗ್ಯದ ಬಗ್ಗೆ ಸುಲಭವಾಗಿ ಮಾಹಿತಿ ಸಿಗಲಿದೆ. ಈ ಮಾಹಿತಿ ಜೊತೆಗೆ ರೋಗಲಕ್ಷಣಗಳು, ಮಗುವಿನ ಬೆಳವಣಿಗೆಯಲ್ಲಿ ಯಾವುದಾದರು ಸಮಸ್ಯೆ, ಯಾವ ರೀತಿ ವೈದ್ಯರು ಟ್ರೀಟ್ಮೆಂಟ್ ಕೊಡಬಹುದು. ಇದಕ್ಕೂ ಮುಂಚೆ ಮಾಡಿಸಿದ ಟ್ರೀಟ್ಮೆಂಟ್ ವಿವರ ಎಲ್ಲವೂ ತಿಳಿಯಬಹುದಾಗಿದೆ. ಈ ಮಾಹಿತಿಯನ್ನು ವಿಶ್ಲೇಷಿಸುವ ಮೂಲಕ, ಹೆಚ್ಚಿನ ಅಪಾಯದ ಗರ್ಭಧಾರಣೆ ಬಗ್ಗೆ ಸುಲಭವಾಗಿ ಗುರುತಿಸಬಹುದು. ಹಾಗೂ ಗರ್ಭಿಣಿಯರಿಗೆ ಸೇಫ್ ಪ್ರೆಗ್ನೆನ್ಸಿ ಸಹಾಯ ಆಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ