ತುಮಕೂರು, ಹೊಸೂರು ಮಧ್ಯೆ ಮೂರು ಹೊಸ ಮೆಮು ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ವಿವರ

ತುಮಕೂರು ಮತ್ತು ಹೊಸೂರು ಮಧ್ಯೆ ಪ್ರತಿ ದಿನ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಮೂರು ಹೊಸ ಮೆಮು ರೈಲುಗಳನ್ನು ಘೋಷಿಸಿದೆ. ಇದರಿಂದಾಗಿ ಬೆಂಗಳೂರಿನಿಂದ ತುಮಕೂರು ಮತ್ತು ಹೊಸೂರಿಗೆ ರೈಲು ಸಂಪರ್ಕವು ಸುಧಾರಿಸಲಿದೆ. ರೈಲುಗಳ ವೇಳಾಪಟ್ಟಿ ಮತ್ತಿತರ ವಿವರ ಇಲ್ಲಿದೆ.

ತುಮಕೂರು, ಹೊಸೂರು ಮಧ್ಯೆ ಮೂರು ಹೊಸ ಮೆಮು ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ವಿವರ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Sep 26, 2024 | 8:49 AM

ಬೆಂಗಳೂರು, ಸೆಪ್ಟೆಂಬರ್ 26: ತುಮಕೂರು ಮತ್ತು ಹೊಸೂರು ಮಧ್ಯೆ ಸುಗಮ ಸಂಚಾರಕ್ಕಾಗಿ ನೈಋತ್ಯ ರೈಲ್ವೆ ಮಹತ್ವದ ಕ್ರಮ ಕೈಗೊಂಡಿದೆ. ಉಭಯ ನಿಲ್ದಾಣಗಳ ಮಧ್ಯೆ ಮೂರು ಹೊಸ ಮೆಮು ರೈಲುಗಳನ್ನು ಘೋಷಿಸಲಾಗಿದ್ದು, ಇವುಗಳಲ್ಲಿ ಎರಡು ರೈಲುಗಳು ಯಶವಂತಪುರವನ್ನು ತುಮಕೂರು ಮತ್ತು ಹೊಸೂರಿನೊಂದಿಗೆ ಸಂಪರ್ಕಿಸಲಿವೆ. ಮೂರನೆಯದು ಬಾಣಸವಾಡಿ ಮತ್ತು ತುಮಕೂರು ನಡುವೆ ಸಂಚರಿಸಲಿವೆ. ಎಲ್ಲ ರೈಲುಗಳೂ ತಲಾ ಎಂಟು ಕೋಚ್​ಗಳನ್ನು ಹೊಂದಿರಲಿವೆ.

ನಾಳೆ ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣರಿಂದ ಚಾಲನೆ

ಸೆಪ್ಟೆಂಬರ್ 27 ರಂದು ತುಮಕೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೇ ರಾಜ್ಯ ಸಚಿವ ವಿ ಸೋಮಣ್ಣ ಅವರು ರೈಲು ಸಂಖ್ಯೆ 06201 (ತುಮಕೂರು-ಯಶವಂತಪುರ) ಉದ್ಘಾಟನಾ ಓಟಕ್ಕೆ ಚಾಲನೆ ನೀಡಲಿದ್ದಾರೆ.

ಯಶವಂತಪುರ ತುಮಕೂರು ಮೆಮು ರೈಲಿನ ವಿವರ

ರೈಲು ಸಂಖ್ಯೆ 06201/06202 ರ ನಿಯಮಿತ ಸೇವೆಗಳು ಸೆಪ್ಟೆಂಬರ್ 27 ರಂದು ಯಶವಂತಪುರದಿಂದ ಮತ್ತು ಸೆಪ್ಟೆಂಬರ್ 28 ರಂದು ತುಮಕೂರಿನಿಂದ ಪ್ರಾರಂಭವಾಗಲಿವೆ. ರೈಲು ಸಂಖ್ಯೆ 06201 ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ತುಮಕೂರಿನಿಂದ ಬೆಳಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06202 ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಯಶವಂತಪುರದಿಂದ ಸಂಜೆ 5.40 ಕ್ಕೆ ಹೊರಟು 7.05 ಕ್ಕೆ ತುಮಕೂರು ತಲುಪಲಿದೆ.

ಯಶವಂತಪುರ ತುಮಕೂರು ಮೆಮು ರೈಲಿಗೆ ಎಲ್ಲೆಲ್ಲಿ ನಿಲುಗಡೆ?

ಯಶವಂತಪುರ ತುಮಕೂರು ಮೆಮು ರೈಲಿಗೆ ಕ್ಯಾತ್ಸಂದ್ರ ಹಾಲ್ಟ್, ಹಿರೇಹಳ್ಳಿ, ದಾಬಾಸ್​​ಪೇಟೆ, ನಿಡವಂಡ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ ಮತ್ತು ಚಿಕ್ಕಬಾಣಾವರಗಳಲ್ಲಿ ನಿಲುಗಡೆ ಇದೆ.

ಯಶವಂತಪುರ ಹೊಸೂರು ಮೆಮು ರೈಲು

ರೈಲು ಸಂಖ್ಯೆ 06203/06204 ರ ನಿಯಮಿತ ಸೇವೆಗಳು ಸೆಪ್ಟೆಂಬರ್ 28 ರಂದು ಯಶವಂತಪುರ ಮತ್ತು ಹೊಸೂರಿನಿಂದ ಪ್ರಾರಂಭವಾಗುತ್ತವೆ. ರೈಲು ಸಂಖ್ಯೆ 06203 ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಚರಿಸಲಿದ್ದು, ಯಶವಂತಪುರದಿಂದ ಬೆಳಗ್ಗೆ 10.45ಕ್ಕೆ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ.

ರೈಲು ಸಂಖ್ಯೆ 06204 ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಹೊಸೂರಿನಿಂದ ಮಧ್ಯಾಹ್ನ 3.20ಕ್ಕೆ ಹೊರಟು ಯಶವಂತಪುರಕ್ಕೆ ಸಂಜೆ 5.15ಕ್ಕೆ ತಲುಪಲಿದೆ.

ಆನೇಕಲ್ ರಸ್ತೆ, ಹೀಲಲಿಗೆ, ಕರ್ಮೇಲರಂ, ಬೆಳ್ಳಂದೂರು ರಸ್ತೆ, ಬಾಣಸವಾಡಿ ಮತ್ತು ಹೆಬ್ಬಾಳಗಳಲ್ಲಿ ನಿಲುಗಡೆ ಇದೆ.

ಬಾಣಸವಾಡಿ ತುಮಕೂರು ಮೆಮು ರೈಲು

ರೈಲು ಸಂಖ್ಯೆ 06205/06206 ಬಾಣಸವಾಡಿ-ತುಮಕೂರು-ಬಾಣಸವಾಡಿ ನಿಯಮಿತ ಸೇವೆಗಳು ಸೆಪ್ಟೆಂಬರ್ 28 ರಂದು ತುಮಕೂರಿನಿಂದ ಮತ್ತು ಸೆಪ್ಟೆಂಬರ್ 30 ರಂದು ಬಾಣಸವಾಡಿಯಿಂದ ಪ್ರಾರಂಭವಾಗಲಿದೆ. ರೈಲು ಸಂಖ್ಯೆ 06205 ಸೋಮವಾರ ಮಾತ್ರ ಸಂಚರಿಸಲಿದ್ದು, ಬಾಣಸವಾಡಿಯಿಂದ ಬೆಳಗ್ಗೆ 6.15ಕ್ಕೆ ಹೊರಟು ತುಮಕೂರಿಗೆ 8.35ಕ್ಕೆ ತಲುಪಲಿದೆ.

ಇದನ್ನೂ ಓದಿ: ಈ ಬೆಂಗ್ಳೂರು ಟ್ರಾಫಿಕ್‌ ಜಾಮ್‌ನಿಂದ ಟ್ರೈನ್‌ಗೂ ಕೂಡಾ ತಪ್ಪಿಸಿಕೊಳ್ಳೋಕೆ ಆಗ್ಲಿಲ್ಲ ನೋಡಿ…

ರೈಲು ಸಂಖ್ಯೆ 06206 ಶನಿವಾರದಂದು ಮಾತ್ರ ಸಂಚರಿಸಲಿದ್ದು, ತುಮಕೂರಿನಿಂದ ರಾತ್ರಿ 7.40ಕ್ಕೆ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.

ಹೆಬ್ಬಾಳ, ಚಿಕ್ಕಬಾಣಾವರ, ಭೈರನಾಯಕನಹಳ್ಳಿ, ಮುದ್ದಲಿಂಗನಹಳ್ಳಿ, ನಿಡವಂಡ, ದಾಬಾಸ್​ಪೇಟೆ ಮತ್ತು ಕ್ಯಾತ್ಸಂದ್ರ ಹಾಲ್ಟ್ ನಿಲುಗಡೆ ಹೊಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM