ಕಟ್ಟಡಗಳ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್ ವರದಿ ನೀಡುವಂತೆ ಡಾಕ್ಟರ್ಸ್ ಲೇಔಟ್ನ 25 ಕ್ಕೂ ಅಧಿಕ ಮನೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿ

ಇತ್ತೀಚೆಗೆ ಕಟ್ಟಡಗಳ ಕುಸಿತ ಪ್ರಕರಣ ಹೆಚ್ಚಾಗುತ್ತಿದ್ದು ಡಾಕ್ಟರ್ಸ್ ಲೇಔಟ್ ನಲ್ಲಿ 2014 ರಲ್ಲಿ ನಿರ್ಮಿಸಿದ್ದ ಕಟ್ಟಡ ಕುಸಿದು ಬಿದ್ದಿತ್ತು. ಹೀಗಾಗಿ ಈಗ ಲೇಔಟ್ನಲ್ಲಿರೋ ಎಲ್ಲಾ ಕಟ್ಟಡಗಳ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್ಗೆ ಬಿಬಿಎಂಪಿ ತೀರ್ಮಾನಿಸಿದೆ.

ಕಟ್ಟಡಗಳ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್ ವರದಿ ನೀಡುವಂತೆ ಡಾಕ್ಟರ್ಸ್ ಲೇಔಟ್ನ 25 ಕ್ಕೂ ಅಧಿಕ ಮನೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿ
ಬಿಬಿಎಂಪಿ ಮುಖ್ಯ ಕಚೇರಿ
Updated By: ಆಯೇಷಾ ಬಾನು

Updated on: Oct 10, 2021 | 11:15 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಟ್ಟಡ ಕುಸಿತದ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಬಿಬಿಎಂಪಿ ಕಟ್ಟಡಗಳ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್ಗೆ ಮುಂದಾಗಿದೆ. ಬೆಂಗಳೂರಿನ ಡಾಕ್ಟರ್ಸ್ ಲೇಔಟ್ನಲ್ಲಿ ಕಟ್ಟಡ ಕುಸಿತ ಪ್ರಕರಣದ ಬಳಿಕ ಎಚ್ಚೆತ್ತಿರುವ ಬಿಬಿಎಂಪಿ ಲೇಔಟ್ನಲ್ಲಿರೋ ಕಟ್ಟಡಗಳ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್ಗೆ ನಿರ್ಧರಿಸಿದೆ. ಕಟ್ಟಡಗಳ ಸಾಮರ್ಥ್ಯ ಪರೀಕ್ಷೆಗೆ ನೋಟೀಸ್ ಜಾರಿಗೊಳಿಸಿದೆ.

ಇತ್ತೀಚೆಗೆ ಕಟ್ಟಡಗಳ ಕುಸಿತ ಪ್ರಕರಣ ಹೆಚ್ಚಾಗುತ್ತಿದ್ದು ಡಾಕ್ಟರ್ಸ್ ಲೇಔಟ್ ನಲ್ಲಿ 2014 ರಲ್ಲಿ ನಿರ್ಮಿಸಿದ್ದ ಕಟ್ಟಡ ಕುಸಿದು ಬಿದ್ದಿತ್ತು. ಹೀಗಾಗಿ ಈಗ ಲೇಔಟ್ನಲ್ಲಿರೋ ಎಲ್ಲಾ ಕಟ್ಟಡಗಳ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್ಗೆ ಬಿಬಿಎಂಪಿ ತೀರ್ಮಾನಿಸಿದೆ. 25 ಕ್ಕೂ ಅಧಿಕ ಮನೆಗಳಿಗೆ ನೋಟಿಸ್ ನೀಡಿದೆ. ಕಟ್ಟಡವಿರುವ ನಿವೇಶನದ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಾನ್ಯತೆ ಪಡೆದ ಇಂಜಿನಿಯರ್ಗಳಿಂದ ಕಟ್ಟಡದ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್ ಮಾಡಿಸಬೇಕು. 15 ದಿನದೊಳಗೆ ಪರೀಕ್ಷೆ ಮಾಡಿಸಿದ ವರದಿ ನೀಡುವಂತೆ ಸೂಚನೆ ನೀಡಿದೆ.

ಒಂದೊಮ್ಮೆ 15 ದಿನದೊಳಗೆ ವರದಿ ನೀಡದಿದ್ದಲ್ಲಿ ಏನಾದರೂ ಕಟ್ಟಡ ಅನಾಹುತ, ಕಟ್ಟಡ ಕುಸಿತ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟಾದಲ್ಲಿ ಕಟ್ಟಡದ ಮಾಲೀಕರೇ ಹೊಣೆ. ಜೊತೆಗೆ ಕಟ್ಟಡವನ್ನು ಏಕಪಕ್ಷೀಯವಾಗಿ ವಾಸ ಮಾಡುವುದಕ್ಕೆ ಯೋಗ್ಯವಲ್ಲವೆಂದು ಪರಿಗಣಿಸಲಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ. ಸದ್ಯ ಈಗ 25 ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್ ರವಾನೆ ಮಾಡಿದೆ.

ಇದನ್ನೂ ಓದಿ: ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ; ಸೆಕ್ಯೂರಿಟಿ ಗಾರ್ಡ್ ಸಮಯಪ್ರಜ್ಞೆಯಿಂದ 15 ಜನ ಪಾರು

Bengaluru: ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ