ಬ್ಯಾನ್ ಮಾಡಿದರೂ ಇನ್ನೂ ಬಳಕೆಯಲ್ಲಿದೆ ಪ್ಲಾಸ್ಟಿಕ್, ನಿರ್ಮೂಲನೆಗೆ ಆಸಕ್ತಿ ಕಳೆದುಕೊಂಡ ಬಿಬಿಎಂಪಿ

| Updated By: ಆಯೇಷಾ ಬಾನು

Updated on: Feb 17, 2024 | 7:55 AM

ಕೇಂದ್ರ ಸರ್ಕಾರ ಏಕ ಬಳಕೆ‌ ಪ್ಲಾಸ್ಟಿಕ್ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಆದರೆ ಬೆಂಗಳೂರಿನ ಹಲವೆಡೆ ಈಗಲೂ ಕೂಡ ಎಗ್ಗಿಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ವಿಚಾರ ತಿಳಿದಿದ್ದರೂ ಬಿಬಿಎಂಪಿ ಮಾತ್ರ ಕೈ ಕಟ್ಟಿ ಕುಳಿತಿದೆ. ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಬ್ಯಾನ್ ಮಾಡಿದರೂ ಇನ್ನೂ ಬಳಕೆಯಲ್ಲಿದೆ ಪ್ಲಾಸ್ಟಿಕ್, ನಿರ್ಮೂಲನೆಗೆ ಆಸಕ್ತಿ ಕಳೆದುಕೊಂಡ ಬಿಬಿಎಂಪಿ
ಪ್ಲಾಸ್ಟಿಕ್
Follow us on

ಬೆಂಗಳೂರು, ಫೆ.17: ಏಕ ಬಳಕೆಯ ಪ್ಲಾಸ್ಟಿಕ್ (Plastic) ಗಳನ್ನ ಕೇಂದ್ರ ಸರ್ಕಕರ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ಸಿಲಿಕಾನ್ ಸಿಟಿ‌ ಬೆಂಗಳೂರಿನ ಎಗ್ಗಿಲ್ಲದೇ ಪ್ಲಾಸ್ಟಿಕ್ ಬಳಕೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಬಿಬಿಎಂಪಿ (BBMP) ಅಧಿಕಾರಿಗಳು ವ್ಯಾಪಾರಿಗಳಿಗೆ ಸಾಥ್ ನೀಡಿ ಕೈ ಕಟ್ಟಿ ಕುಳಿತುಕೊಳ್ಳುವ ಮೂಲಕ ಪ್ಲ್ಯಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಅಧಿಕಾರಿಗಳು ಮುಂದಾಗದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಕೇಂದ್ರ ಸರ್ಕಾರ ಏಕ ಬಳಕೆ‌ ಪ್ಲಾಸ್ಟಿಕ್ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಪ್ಲಾಸ್ಟಿಕ್ ಬಳಕೆ ತುಂಬಾ ಸುಲಭವಾದ್ದರಿಂದ ಈ ಉತ್ಪನ್ನಗಳಿಗೆ ಆಧ್ಯತೆ ನೀಡಲಾಗುತ್ತಿದೆ. ನಾವು ನಗರದ ಪ್ರಮುಖವಾದ ಕೆ.ಆರ್. ಮಾರ್ಕೆಟ್ ನಲ್ಲಿ ನೋಡೊದಾದರೆ ಪ್ರತಿಯೊಬ್ಬ ವ್ಯಾಪಾರಿಗಳು ಏಕ ಬಳಕೆ ಪ್ಲಾಸ್ಟಿಕ್ ನಲ್ಲೆ ತರಕಾರಿ ಸೇರಿದಂತೆ ಹೂವುಗಳನ್ನ ಗ್ರಾಹಕರಿಗೆ ನೀಡುತ್ತಾರೆ. ಇದು ನೋಡಲು ನಮಗೆ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತದೆ. ಕೇವಲ ಬಿಬಿಎಂಪಿ ಅಧಿಕಾರಿಗಳು ಇಂತಹ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ದಂಡ ಹಾಕುತ್ತಾರೆ ಹೊರತು ಮೂಲತಃ ಯಾವ ಫ್ಯಾಕ್ಟರಿಗಳಲ್ಲಿ ಉತ್ಪಾದನೆ ಆಗುತ್ತದೆ ಅಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಉತ್ಪಾದನೆ ಆಗುವಂತೆ ನೋಡಿಕೊಳ್ಳಬೇಕು. ನಗರದಲ್ಲಿ ಎಲ್ಲೆಲ್ಲಿ ಪ್ಲಾಸ್ಟಿಕ್ ಹೇಗೆ ಉತ್ಪಾದನೆ ಆಗುತ್ತದೆ ಎಂಬುದು ಅಧಿಕಾರಿಗಳಿಗೆ ಗೊತ್ತು. ಆದರೆ ಈ ಬಗ್ಗೆ ಗೊತ್ತಿದ್ದರೂ ಅವರು ಇದಕ್ಕೆ ಕಡಿವಾಣ ಹಾಕದೆ ಕಮೀಷನ್ ಪಡೆದು ಸುಮ್ಮನಾಗುತ್ತಿದ್ದಾರೆ ಅಂತ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಶೀಘ್ರ ಚಾಲನೆ: ಸಿದ್ದರಾಮಯ್ಯ ಘೋಷಣೆಗೆ ತಮಿಳುನಾಡು ಖಂಡನೆ

ಇನ್ನೂ ಏಕ ಬಳಕೆ ಪ್ಲಾಸ್ಟಿಕ್‌ನ್ನ ಒಮ್ಮೆ ಬಳಸಿದ ಬಳಿಕ ಅದನ್ನ ಎಲ್ಲೆಂದರಲ್ಲಿ ಎಸೆಯಲ್ಲಾಗುತ್ತೆ, ಹೀಗೆ ಎಸೆಯುವ ಪ್ಲಾಸ್ಟಿಕ್ ಕೆರೆ ಸೇರಿದಂತೆ ಇನ್ನೀತರ ಪ್ರದೇಶಗಳಲ್ಲಿ‌ ಬಿದ್ದು ಜಲಚರಗಳಿಗೆ ಪರಿಸರಕ್ಕೆ ಹಾಗೂ ಪ್ರಾಣಿಗಳಿಗೆ ಹಾನಿಯಾಗುತ್ತಿದೆ ಅಂತ ಪರಿಸರ ಪ್ರೇಮಿಗಳು ಪ್ಲಾಸ್ಟಿಕ್ ಬಳಕೆಗೆ ಅವಕಾಶ ಕೊಡದೆ ಸಂಪೂರ್ಣ ನಿಷೇಧ ಮಾಡಿ ಜನರಲ್ಲಿ‌ ಜಾಗೃತಿ ಮೂಡಿಸಲು ಮುಂದಾಗಬೇಕು ಅಂತ ಆಗ್ರಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ನಾಮ ಕಾ ವಾಸ್ತೆ ದಾಳಿ ನಡೆಸಿ ಕ್ರಮ ಕೈಗೊಳ್ಳುವುದಕ್ಕಿಂತ ಪ್ಲಾಸ್ಟಿಕ್ ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಿ ಸಂಪೂರ್ಣವಾಗಿ ಕಡಿವಾಣ ಹಾಕಿ ನಮ್ಮ ಪರಿಸರ ಸಂರಕ್ಷಣೆ ಮಾಡಬೇಕೆನ್ನುವುದು ಬೆಂಗಳೂರು ಜನತೆಯ ಒಕ್ಕೊರಲು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ