AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೈರಿ ಸರ್ಕಲ್ ಬಳಿ ಬಿಬಿಎಂಪಿ ಕಸ ಸಂಗ್ರಹ ಘಟಕಕ್ಕೆ ವಿರೋಧ, ಅದೇ ಜಾಗದಲ್ಲಿ ಪಾರ್ಕ್ ನಿರ್ಮಾಣಕ್ಕೆ ಆಗ್ರಹ

ಡೈರಿ ಸರ್ಕಲ್ ಜಂಕ್ಷನ್ ಬಳಿ ಇರುವ ಫ್ಲೈ ಓವರ್ ಕೆಳಗೆ ಬಿಬಿಎಂಪಿಯು ಕಸ ಸಂಗ್ರಹ ಮಾಡುತ್ತಿದೆ. ಇದಕ್ಕೆ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಆರಂಭದಲ್ಲಿ ಇಲ್ಲಿ ಬಿಬಿಎಂಪಿ ಕಸದ ಗಾಡಿಗಳನ್ನ ನಿಲ್ಲಿಸ್ತಿತ್ತು. ಆದರೆ ಈಗ ಕಸ ಸಂಗ್ರಹ ಘಟಕ ಮಾಡಿರೋದು ಸ್ಥಳೀಯರ ನಿದ್ದೆಗೆಡಿಸಿದೆ. ಕಸ ಸಂಗ್ರಹವನ್ನ ಬೇರೆಡೆ ಶಿಫ್ಟ್ ಮಾಡಿ, ಈ ಜಾಗದಲ್ಲಿ ಪಾರ್ಕ್ ಮಾಡಿ ಎಂದು ಜನರು ಡಿಮ್ಯಾಂಡ್ ಮಾಡಿದ್ದಾರೆ.

ಡೈರಿ ಸರ್ಕಲ್ ಬಳಿ ಬಿಬಿಎಂಪಿ ಕಸ ಸಂಗ್ರಹ ಘಟಕಕ್ಕೆ ವಿರೋಧ, ಅದೇ ಜಾಗದಲ್ಲಿ ಪಾರ್ಕ್ ನಿರ್ಮಾಣಕ್ಕೆ ಆಗ್ರಹ
ಡೈರಿ ಸರ್ಕಲ್ ಬಳಿ ಬಿಬಿಎಂಪಿ ಕಸ ಸಂಗ್ರಹ ಘಟಕ
TV9 Web
| Updated By: ಆಯೇಷಾ ಬಾನು|

Updated on:Feb 17, 2024 | 7:35 AM

Share

ಬೆಂಗಳೂರು, ಫೆ.17: ಅದು ಬೆಂಗಳೂರಿನ ಪ್ರತಿಷ್ಠಿತ ಜಾಗಗಳಲ್ಲಿ ಒಂದಾದ ಡೈರಿ ಸರ್ಕಲ್ (Dairy Circle) ಬಳಿ ಇದೀಗ ಬಿಬಿಎಂಪಿಯಿಂದ (BBMP) ಸಮಸ್ಯೆ ಉಂಟಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಡೈರಿ ಸರ್ಕಲ್ ಫ್ಲೈ ಓವರ್ ಕೆಳಗೆ ಪಾಲಿಕೆ ನಿರ್ಮಿಸಿರೋ ಕಸ ಸಂಗ್ರಹ ಘಟಕಕ್ಕೆ (Garbage Unit) ಸ್ಥಳೀಯರಿಂದ ವಿರೋಧ ವ್ಯಕ್ತವಾಗ್ತಿದೆ. ಸುತ್ತಮುತ್ತಲಿನ ನಿವಾಸಿಗಳಿಗೆ ಇದರಿಂದ ಸಮಸ್ಯೆಯಾಗ್ತಿದೆ. ಕಸ ಸಂಗ್ರಹವನ್ನ ಬೇರೆಡೆಗೆ ಸ್ಥಳಾಂತರಿಸುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ಡೈರಿ ಸರ್ಕಲ್ ಜಂಕ್ಷನ್ ಬಳಿ ಇರೋ ಫ್ಲೈ ಓವರ್ ಕೆಳಗೆ ವಾರ್ಡ್ ಗಳ ಕಸ ಸಂಗ್ರಹಕ್ಕೆ ಅಂತಾ ಬಿಬಿಎಂಪಿಯಿಂದ ಈ ಜಾಗದಲ್ಲಿ 2022 ರಲ್ಲಿ ಕೆಲಸ ಶುರುಮಾಡಿದ್ರು, ಆರಂಭದಲ್ಲಿ ಬರೀ ಬಿಬಿಎಂಪಿ ಕಸದ ಗಾಡಿಗಳನ್ನ ನಿಲ್ಲಿಸ್ತಿದ್ದ ಈ ಜಾಗದಲ್ಲಿ ಈಗ ಸೀಟ್ ಹಾಕಿ ಕಸ ಸಂಗ್ರಹ ಘಟಕ ಮಾಡಿರೋದು ಸ್ಥಳೀಯರ ನಿದ್ದೆಗೆಡಿಸಿದೆ. ಕಸದ ವಾಸನೆ, ಗಾಡಿಗಳ ಸಂಚಾರದಿಂದ ಬೇಸತ್ತ ಜನರು ಪಾಲಿಕೆ ವಿರುದ್ಧ ಕಿಡಿಕಾರುತ್ತಿದ್ದಾರೆ.

ಇನ್ನು ಈ ಜಾಗದಲ್ಲಿ ಕೋರಮಂಗಲ, ಜಯದೇವ ಆಸ್ಪತ್ರೆ ಕಡೆಗೆ ಪ್ರತಿನಿತ್ಯ ನೂರಾರು ಜನರು ಸಂಚರಿಸ್ತಾರೆ, ಆದ್ರೆ ಇದೀಗ ಕಸ ಸಂಗ್ರಹ ಮಾಡ್ತಿರೋದರಿಂದ ಗಬ್ಬುವಾಸನೆ ಬರ್ತಿದ್ದು, ಸುತ್ತಮುತ್ತ ಇರೋ ನಿವಾಸಿಗಳಿಗೆ ಸಮಸ್ಯೆಯಾಗ್ತಿದೆ. ಈ ಬಗ್ಗೆ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದ್ರೂ ಯಾವುದೇ ಪ್ರತಿಕ್ರಿಯೆ ಸಿಗದೇ ಬೇಸತ್ತ ಜನರು, ಕಸ ಸಂಗ್ರಹವನ್ನ ಬೇರೆಡೆ ಶಿಫ್ಟ್ ಮಾಡಿ, ಈ ಜಾಗದಲ್ಲಿ ಪಾರ್ಕ್ ಮಾಡಿ, ಇಲ್ಲದಿದ್ರೆ ಹೋರಾಟ ಮಾಡ್ತೀವೆ ಅಂತಾ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಯರ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಗೆ ಶಾಕ್ ಕೊಟ್ಟ ಮದ್ಯಪ್ರಿಯರು, ವ್ಯಾಪಾರದಲ್ಲಿ ಭಾರೀ ಕುಸಿತ

ಇತ್ತ ಕಸ ಸಂಗ್ರಹದಿಂದ ಸಮಸ್ಯೆಯಾಗ್ತಿದೆ ಏನ್ ಮಾಡ್ತೀರಾ ಸರ್ ಅಂದ್ರೆ ,ಬಿಬಿಎಂಪಿಯ ಆಯುಕ್ತರು ಇದಕ್ಕೆ ಏನು ಮಾಡೋಕೆ ಆಗಲ್ಲ ಅಂತಿದ್ದಾರೆ. ಹೊರವಲಯಗಳಲ್ಲಿ ಕಸ ಸುರಿಯುತ್ತಿದ್ದೇವೆ, ಆದರೆ ವಾರ್ಡ್ ಗಳ ಕಸ ಸಂಗ್ರಹಕ್ಕೆ ಬೇರೆ ಮಾರ್ಗವಿಲ್ಲ ಅಂತಿರೋ ಆಯುಕ್ತರು, ವಾಸನೆ ಬರದಂತೆ ಕ್ರಮ ತೆಗೆದುಕೊಳ್ತೇವೆ, ಆದ್ರೆ ಬೇರೆಡೆ ಶಿಫ್ಟ್ ಮಾಡೋಕೆ ಆಗಲ್ಲ ಅಂತಿದ್ದಾರೆ.

ಒಟ್ಟಿನಲ್ಲಿ ಕಸ ಸಂಗ್ರಹದಿಂದ ಸುತ್ತಮುತ್ತಲಿನ ಜನರು ಹೈರಾಣಾಗಿದ್ರೆ, ಇತ್ತ ಕಸ ಸಂಗ್ರಹ ಮಾಡೋ ಜಾಗದ ಸುತ್ತ ಓಡಾಡೋಕೆ ಜನರು ಕೂಡ ಸಂಕಷ್ಟ ಅನುಭವಿಸ್ತಿದ್ದಾರೆ. ಸದ್ಯ ವಾಸನೆ ಬರದಂತೆ ಕ್ರಮ ತೆಗೆದುಕೊಳ್ತೀವೆ ಅಂತಿರೋ ಪಾಲಿಕೆ, ಜನರ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:31 am, Sat, 17 February 24