ಬಿಯರ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಗೆ ಶಾಕ್ ಕೊಟ್ಟ ಮದ್ಯಪ್ರಿಯರು, ವ್ಯಾಪಾರದಲ್ಲಿ ಭಾರೀ ಕುಸಿತ

ಫೆಬ್ರವರಿ ಒಂದರಿಂದ ರಾಜ್ಯ ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕ ಹತ್ತರಷ್ಟು ಏರಿಕೆ ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿತ್ತು. ಆದರೆ ಕಳೆದ ಹದಿನಾಲ್ಕೇ ದಿನಗಳಲ್ಲಿ ಮದ್ಯಪ್ರಿಯರು ಅಬಕಾರಿ ಇಲಾಖೆಯ ಲೆಕ್ಕಚಾರವನ್ನೆ ತಲೆಕೆಳಗಾಗುವಂತೆ ಮಾಡಿದ್ದಾರೆ. ಹದಿನಾಲ್ಕೇ ದಿನಗಳಲ್ಲಿ ಬಿಯರ್ ವ್ಯಾಪಾರ ಕುಸಿತ ಕಂಡಿದೆ.

ಬಿಯರ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಗೆ ಶಾಕ್ ಕೊಟ್ಟ ಮದ್ಯಪ್ರಿಯರು, ವ್ಯಾಪಾರದಲ್ಲಿ ಭಾರೀ ಕುಸಿತ
ಮದ್ಯಪಾನ ಆರೋಗ್ಯಕ್ಕೆ ಹಾನಿಕರ
Follow us
Kiran Surya
| Updated By: ಆಯೇಷಾ ಬಾನು

Updated on:Feb 17, 2024 | 7:06 AM

ಬೆಂಗಳೂರು, ಫೆ.17: ಪದೆ ಪದೇ ಬಿಯರ್ (Beer) ಬೆಲೆ ಏರಿಕೆ ಮಾಡ್ತಿರುವ ಸರ್ಕಾರಕ್ಕೆ (Karnataka Government) ಮದ್ಯಪ್ರಿಯರು ಶಾಕ್ ಕೊಟ್ಟಿದ್ದಾರೆ. ಜನವರಿಯಲ್ಲಿ ಬಾರಿ ಮಾರಾಟವಾಗಿದ್ದ ಬಿಯರ್, ದರ ಏರಿಕೆಯಾಗ್ತಿದ್ದಂತೆ ಮಾರಾಟ ಕುಸಿತವಾಗಿದೆ. ಕಳೆದ 14 ದಿನದಲ್ಲಿ ಬಿಯರ್ ಮಾರಾಟದ ಲೆಕ್ಕಚಾರ ತಲೆಕೆಳಗಾಗಿದೆ. ಕಳೆದ ವರ್ಷ ಫೆಬ್ರವರಿ ಒಂದರಿಂದ 14ರ ವರೆಗೆ 14.35 ಲಕ್ಷ ಕೇಸ್ ಬಿಯರ್ ಸೇಲ್ ಆಗಿತ್ತು. ಆದರೆ ಈ ವರ್ಷ ಕೇವಲ 13.34 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ. ದರ ಏರಿಕೆಯಿಂದ ಬರೊಬ್ಬರಿ 1 ಲಕ್ಷ ಕೇಸ್ ಮಾರಾಟ ಕುಸಿತವಾಗಿದೆ.

ಬಿಯರ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಗೆ ಶಾಕ್ ನೀಡಿದ ಮದ್ಯಪ್ರಿಯರು

ಜನವರಿಯಲ್ಲಿ 14 ದಿನಕ್ಕೆ 17 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜನವರಿಯಲ್ಲಿ 15 ಪರ್ಸೆಂಟ್ ಏರಿಕೆಯಾಗಿತ್ತು. ಈ ತಿಂಗಳು ಕೂಡ ಭರ್ಜರಿ ಮಾರಾಟದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಮದ್ಯಪ್ರಿಯರು ಶಾಕ್ ನೀಡಿದ್ದಾರೆ. ಆದರೆ ಕಳೆದ 14 ದಿನದಲ್ಲಿ ಮಾರಾಟ ಕಮ್ಮಿಯಾದ್ರೂ ಆದಾಯದಲ್ಲಿ ಮಾತ್ರ ಏರಿಕೆ ಆಗಿದೆ. ಕಳೆದ ವರ್ಷ 14 ದಿನದಲ್ಲಿ 1200 ಕೋಟಿ ಆದಾಯ ಬಂದ್ರೆ. ಈ ವರ್ಷ 1400 ಕೋಟಿ ಆದಾಯ ಸಂಗ್ರವಾಗಿ, 200 ಕೋಟಿ ಅಧಿಕವಾಗಿದೆ. ದರ ಏರಿಕೆಯಿಂದ ಮಾತ್ರ ಹೆಚ್ಚುವರಿ ಆದಾಯ ಸಂಗ್ರಹವಾಗಿದೆ ಮಾರಾಟದಿಂದಲ್ಲ ಎಂದು ಬೆಂಗಳೂರು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಕರುಣಾಕರ ಹೆಗಡೆ ತಿಳಿಸಿದ್ದಾರೆ.

ಇನ್ನೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದಾಗ ಬಿಯರ್‌ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್‌ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ವು. ಮೂರನೇ ಬಾರಿ ಅಂದರೆ ಫೆಬ್ರವರಿ 1 ರಿಂದ ಬಿಯರ್ ಮೇಲಿನ ಅಬಕಾರಿ ಸುಂಕವನ್ನು 10 ರಷ್ಟು ಏರಿಕೆ ಮಾಡಿತ್ತು. ಇದರಿಂದ ಆರೇಳು ತಿಂಗಳ ಅವಧಿಯಲ್ಲಿ ಬಿಯರ್‌ ಬೆಲೆ ಸುಮಾರು ವಿವಿಧ ಬಾಟೆಲ್ ಮೇಲೆ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ. ಈ ವರ್ಷ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ₹36 ಸಾವಿರ ಕೋಟಿ ಆದಾಯ ಸಂಗ್ರಹದ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: ಅತಿ ಹೆಚ್ಚು ಬಿಯರ್ ಸೇವಿಸುವ ಚಾಮರಾಜನಗರಕ್ಕೆ 2ನೇ ಸ್ಥಾನ, ರಾಜ್ಯದ ಮೊದಲ ಜಿಲ್ಲೆ ಯಾವುದು? ಸಿಪ್ ಬೈ ಸಿಪ್ ಮಾಹಿತಿ ಇಲ್ಲಿದೆ

ಈಗಾಗಲೇ 10 ತಿಂಗಳಿಗೆ ಬರೊಬ್ಬರಿ ₹28,000 ಕೋಟಿ ಆದಾಯ ಸಂಗ್ರಹವಾಗಿದೆ. ಇನ್ನೂ ಎರಡು ತಿಂಗಳಿನಲ್ಲಿ ಟಾರ್ಗೆಟ್ ರೀಚ್ ಆಗಲು 8 ಸಾವಿರಕ್ಕೂ ಅಧಿಕ ಆದಾಯ ಸಂಗ್ರಹವಾಗಬೇಕು. ಆದರೆ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಿಗೆ ಮಾಡಿದ್ದಕ್ಕೆ ಮದ್ಯಪ್ರಿಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮತ್ತು ದರ ಏರಿಕೆ ನಂತರ ಬಿಯರ್ ಸೇವಿಸುವುದನ್ನೆ ನಿಲ್ಲಿಸಿದ್ದೀವಿ ಎಂದು ಮದ್ಯಪ್ರಿಯರೊಬ್ಬರು ತಿಳಿಸಿದರು.

ಒಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಐದು ಗ್ಯಾರೆಂಟಿಗಳಿಗಾಗಿ ಪದೇ ಪದೇ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಹಣ ಹೊಂದಿಸಲು ಮುಂದಾಗಿದೆ. ಆದರೆ ಇದರಿಂದ ಮದ್ಯಪ್ರಿಯರು ದಿನೇ ದಿನೇ ಮದ್ಯವನ್ನು ಸೇವಿಸುವುದನ್ನು ನಿಧಾನವಾಗಿ ಕಡಿಮೆ ಮಾಡ್ತಿದ್ದಾರೆ ಅನ್ಸುತ್ತೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:03 am, Sat, 17 February 24

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ