ಬೆಂಗಳೂರು: ಕೈಲೊಂದು ಕಾಫಿ-ಟೀ ಕಪ್ ಹಿಡಿದು, ಹೊಟೇಲ್ ಹೊರಗೆ, ಪಬ್ಲಿಕ್ ಪ್ಲೇಸ್ ನಲ್ಲಿ ಸಿಗರೇಟ್ ಸೇದುತ್ತಾ, ಹೊಗೆ ಬೀಡ್ತಾ ಇದ್ದ ಮಂದಿ ನಮ್ಮ ಮಧ್ಯೆ ಹೆಚ್ಚಾಗಿದ್ದಾರೆ. ತಮ್ಮ ಆರೋಗ್ಯ, ಪಕ್ಕದವರ ಆರೋಗ್ಯವನ್ನೂ ಲೆಕ್ಕಿಸದೆ ಹೊಗೆ ಬಿಡುವವರಿಗೆ ಕಡಿವಾಣ ಹಾಕಲು ಬಿಬಿಎಂಪಿ(BBMP) ಮುಂದಾಗಿದೆ. ಹೋಟೆಲ್ಗಳಲ್ಲಿ ಸ್ಮೋಕಿಂಗ್ ಝೋನ್(Smoking Zone) ಮಾಡುವಂತೆ BBMP ಆದೇಶ ಹೊರಡಿಸಿದೆ. ಪಾಲಿಕೆ ಆದೇಶದ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರು ಗರಂ ಆಗಿದ್ದಾರೆ.
ನಗರದಲ್ಲಿ ಸಾವಿರಾರು ಹೊಟೇಲ್‌ಗಳಿವೆ. ಅವುಗಳಲ್ಲಿ ಎಲ್ಲೆಲ್ಲಿ 30ಕ್ಕಿಂತ ಹೆಚ್ಚು ಸೀಟಿಂಗ್ ಕ್ಯಾಪಾಸಿಟಿ ಇದ್ಯೋ, ಅಲ್ಲೆಲ್ಲಾ ಕಡ್ಡಾಯವಾಗಿ ಸ್ಮೋಕಿಂಗ್ ಝೋನ್ ಮಾಡಬೇಕು ಅಂತ ಬಿಬಿಎಂಪಿ ನೋಟಿಸ್ ನೀಡಿದೆ. ಹೊಟೇಲ್‌ಗಳಿಗೆ ಬರೋ ಕೆಲ ಗ್ರಾಹಕರು ಎಲ್ಲಂದ್ರಲ್ಲಿ ಧೂಮಪಾನ ಮಾಡ್ತಿದ್ದು ಇದನ್ನು ತಡೆಗಟ್ಟಲು ಹೊಟೇಲ್‌ನವರಿಗೂ ಆಗ್ತಿರಲ್ಲಿಲ್ಲ. ಈ ನಿಟ್ಟಿನಲ್ಲಿ ಬಿಬಿಎಂಪಿ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: ರಾಜ್ಯ ಪೊಲೀಸ್ ಇಲಾಖೆಯ ಸಬ್ ಡಿವಿಷನ್ನಲ್ಲಿ ಮಹತ್ವದ ಬದಲಾವಣೆ; ಠಾಣೆಗಳನ್ನು ಹೆಚ್ಚಿಸಿ ಸರ್ಕಾರ ಆದೇಶ
ಇನ್ನು, 30ಕ್ಕಿಂತ ಹೆಚ್ಚು ಆಸನಗಳಿರೋ ಕಡೆ ಧೂಮಪಾನಿಗಳ ವಲಯ ಮಾಡಬೇಕು ಅಂತ ಬಿಬಿಎಂಪಿ ಸೂಚನೆ ಬೆನ್ನಲ್ಲೇ ಹೊಟೇಲ್ ಮಾಲೀಕರು ಬೇಸರ ಹೊರಹಾಕಿದ್ದಾರೆ. ನಗರದಲ್ಲಿರೋ ಹಳೆಯ ಹೊಟೇಲ್‌ಗಳಲ್ಲಿ ಸ್ಮೋಕಿಂಗ್ ಝೋನ್ ನಿರ್ಮಿಸಲು ಜಾಗವಿಲ್ಲ. ಹೊಸ ಹೊಟೇಲ್‌ಗಳಲ್ಲಾದ್ರೂ ಇದನ್ನು ಚಾಲ್ತಿಗೆ ತರಬಹುದಾಗಿದೆ. ಚಾಲ್ತಿಗೆ ತಂದ್ರೂ ಮಹಿಳಾ ಹಾಗೂ ಮಕ್ಕಳು ಹೊಟೇಲ್‌ಗೆ ಬರೋದು ಕಡಿಮೆಯಾಗುತ್ತೆ. ಮತ್ತೊಂದೆಡೆ, ಬಿಬಿಎಂಪಿ ನೀಡಿರೋ ಈ ನೋಟಿಸ್ ಅವೈಜ್ಞಾನಿಕವಾಗಿದೆ. ಸಿಗರೇಟ್ ಸೇದೋದೇ ಆರೋಗ್ಯಕ್ಕೆ ಹಾನಿಕಾರಕ, ಹೀಗಿರುವಾಗ ಸ್ಮೋಕಿಂಗ್ ಝೋನ್ ಮಾಡಿ ಅದನ್ನು ಉತ್ತೇಜಿಸಿದಂತಾಗುತ್ತೆ ಅನ್ನೋದು ಹೊಟೇಲ್ ಮಾಲೀಕರ ವಾದ.
ಒಟ್ಟಾರೆ, ಬಿಬಿಎಂಪಿ ಸ್ಮೋಕಿಂಗ್ ಝೋನ್ ಆದೇಶ, ಹೋಟೆಲ್ ಮಾಲೀಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಸದ್ಯದಲ್ಲೇ ಬಿಬಿಎಂಪಿ ಆಯುಕ್ತರನ್ನ ಭೇಟಿ ಮಾಡಿ, ಆದೇಶ ವಾಪಾಸ್ ಪಡೆಯಲು ಮನವಿ ಮಾಡ್ತೀವಿ ಅಂತ ಹೋಟೆಲ್ ಅಸೋಸಿಯೇಷನ್ ಹೇಳ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:45 am, Tue, 27 December 22