ದಸರಾ, ದೀಪಾವಳಿ ವೇಳೆ ಘನತ್ಯಾಜ್ಯ ನಿರ್ವಹಣೆ ಸಂಬಂಧ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

| Updated By: ಆಯೇಷಾ ಬಾನು

Updated on: Oct 10, 2024 | 11:56 AM

ದಸರಾ, ದೀಪಾವಳಿ ಹಬ್ಬಗಳಲ್ಲಿ ಉತ್ಪತಿಯಾಗೋ ತ್ಯಾಜ್ಯ ನಿರ್ವಹಣೆಯ ಕುರಿತು ಸೂಚನೆ ಹೊರಡಿಸಿದೆ. ರಾಜಧಾನಿಯಲ್ಲಿ ತ್ಯಾಜ್ಯ ಸಮಸ್ಯೆಗೆ ಬ್ರೇಕ್ ಹಾಕಲು ಅಧಿಕಾರಿಗಳಿಗೆ ಗೈಡ್ ಲೈನ್ ಮೂಲಕ ಕಮಿಷನರ್ ಸೂಚನೆ ಕೊಟ್ಟಿದ್ದಾರೆ. ಬಾಳೇಕಂದು, ಮಾವಿನ ತೋರಣ,ಹಬ್ಬದ ವಸ್ತುಗಳಲ್ಲಿ ಹಸಿ, ಒಣ ಕಸ ವಿಂಗಡನೆಗೆ ಕ್ರಮಕ್ಕೆ ಸೂಚಿಸಿದೆ.

ದಸರಾ, ದೀಪಾವಳಿ ವೇಳೆ ಘನತ್ಯಾಜ್ಯ ನಿರ್ವಹಣೆ ಸಂಬಂಧ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ
ಬಿಬಿಎಂಪಿ
Follow us on

ಬೆಂಗಳೂರು, ಅ.10: ದಸರಾ(Dasara), ದೀಪಾವಳಿಗೆ (Deepavali) ಬಿಬಿಎಂಪಿ (BBMP)ಮಾರ್ಗಸೂಚಿ ಹೊರಡಿಸಿದೆ. ಹಬ್ಬದ ಸಮಯದಲ್ಲಿ ಹೆಚ್ಚಾಗುವ ನಗರದ ಘನತ್ಯಾಜ್ಯ ನಿರ್ವಹಣೆ ಸಂಬಂಧ ಪಾಲಿಕೆ ಅಧಿಕಾರಿಗಳಿಗೆ ಪಾಲಿಕೆ ಗೈಡ್ ಲೈನ್ ಬಿಡುಗಡೆ ಮಾಡಿದೆ. ಹಬ್ಬಗಳಲ್ಲಿ ಉತ್ಪತಿಯಾಗೋ ತ್ಯಾಜ್ಯ ನಿರ್ವಹಣೆಯ ಕುರಿತು ಸೂಚನೆ ಹೊರಡಿಸಿದೆ. ರಾಜಧಾನಿಯಲ್ಲಿ ತ್ಯಾಜ್ಯ ಸಮಸ್ಯೆಗೆ ಬ್ರೇಕ್ ಹಾಕಲು ಅಧಿಕಾರಿಗಳಿಗೆ ಗೈಡ್ ಲೈನ್ ಮೂಲಕ ಕಮಿಷನರ್ ಸೂಚನೆ ಕೊಟ್ಟಿದ್ದಾರೆ.

ಪಾಲಿಕೆ ಗೈಡ್ ಲೈನ್ ಪ್ರಮುಖಾಂಶಗಳೇನು

  • ಬಾಳೇಕಂದು, ಮಾವಿನ ತೋರಣ,ಹಬ್ಬದ ವಸ್ತುಗಳಲ್ಲಿ ಹಸಿ, ಒಣ ಕಸ ವಿಂಗಡನೆಗೆ ಕ್ರಮ
  • ಮಾರುಕಟ್ಟೆಗಳಲ್ಲಿ ಸ್ವಚ್ಚತೆಯ ಬಗ್ಗೆ ವ್ಯಾಪಾರಿಗಳಿಗೆ ಅರಿವು ಮೂಡಿಸಿ
  • ಏಕಬಳಕೆಯ ಪ್ಲಾಸ್ಟಿಕ್ ಬಳಸದಂತೆ ನಿಗಾ-ಹಬ್ಬದಲ್ಲಿ ಉತ್ಪತಿಯಾಗೋ ಹೆಚ್ಚುವರಿ ತ್ಯಾಜ್ಯ ವಿಲೇವಾರಿಗೆ ತಯಾರಿ
  • ಬ್ಲಾಕ್ ಸ್ಪಾಟ್ (ಕಸ ಸುರಿಯೋ ಜಾಗ)ಗಳಲ್ಲಿ ನಿಗಾ ಇಡಲು ಸೂಚನೆ
  • ಬಾಳೆಕಂದು, ಮಾವಿನ ಸೊಪ್ಪು ಇತರೆ ವಸ್ತುಗಳನ್ನ ಹಸಿತ್ಯಾಜ್ಯ ಘಟಕಕ್ಕೆ ನೀಡುವಂತೆ ನಿಗಾ

    ಇದನ್ನೂ ಓದಿ: ಕರ್ನಾಟಕದಲ್ಲಿ ಬಿಯರ್ ಮಾರಾಟ ಭರ್ಜರಿ ಹೆಚ್ಚಳ: ಅಬಕಾರಿ ಇಲಾಖೆಗೆ ಹರಿದುಬಂತು ಆದಾಯ

ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಜಿಲ್ಲಾಡಳಿತದಿಂದ ರೂಪಿಸಲಾಗಿರುವ ಅಧಿಕೃತ ಜಾಲತಾಣಕ್ಕೆ (https://www.mysoredasara.gov.in) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೇ ದಿನಗಳಲ್ಲಿ ಭಾರಿ ‘ಹಿಟ್ಸ್’ ದೊರೆತಿದೆ. ಸೆ.21ರಂದು ಅನಾವರಣಗೊಳಿಸಲಾಗಿದ್ದ ಈ ಜಾಲತಾಣದಲ್ಲಿ ಆರಂಭದಲ್ಲಿ ಮಾಹಿತಿ ಕೊರತೆ ಎದ್ದು ಕಾಣುತ್ತಿತ್ತು. ನಂತರ ಹಲವು ಮಾಹಿತಿ ಅಪ್‌ಡೇಟ್ ಮಾಡಲಾಗಿದ್ದು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾಹಿತಿ ಒದಗಿಸಲಾಗುತ್ತಿತ್ತು. ದಸರಾ ಜೊತೆಗೆ ಮೈಸೂರಿನ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಕಿರುಪರಿಚಯವೂ ಈ ಜಾಲತಾಣದಲ್ಲಿದೆ. ಹೀಗಾಗಿ, ನೆಟ್ಟಿಗರು ಹುಡುಕಾಡುತ್ತಿರುವುದು ಕಂಡುಬಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:46 am, Thu, 10 October 24