AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯನಾಡು ರೀತಿ ನಂದಿ ಹಿಲ್ಸ್ ಕೂಡ ಕುಸಿಯುತ್ತಂತೆ; ಭೂ ವಿಜ್ಞಾನಿಗಳಿಂದ ಹೊರ ಬಿತ್ತು ಆತಂಕಕಾರಿ ವಿಷಯ

ವಯನಾಡು ಬಳಿಕ ಈಗ ನಂದಿ ಹಿಲ್ಸ್ ಕುಸಿಯುವ ಆತಂಕವಿದೆ ಎನ್ನಲಾಗುತ್ತಿದೆ. ನಂದಿ ಹಿಲ್ಸ್ ಅಪಾಯದ ಅಂಚಿಗೆ ತಲುಪಿದೆ ಎಂದು ಭೂ ವಿಜ್ಞಾನಿಗಳು ನಂದಿಹಿಲ್ಸ್ ಬಗ್ಗೆ ಆತಂಕ ಹೊರ ಹಾಕಿದ್ದಾರೆ. ವಯನಾಡು ರೀತಿಯೇ ನಂದಿ ಹಿಲ್ಸ್​ನಲ್ಲಿ ಭೂಕುಸಿತವಾಗಲಿದೆ ಎಂಬ ಬೆಚ್ಚಿ ಬೀಳಿಸುವ ವರದಿಯನ್ನು ಭೂ ವಿಜ್ಞಾನಿಗಳು ಸಿದ್ಧ ಪಡಿಸಿದ್ದು ಸರ್ಕಾರಕ್ಕೆ ಸಲ್ಲಿಸಲಾಗ್ತಿದೆ.

ವಯನಾಡು ರೀತಿ ನಂದಿ ಹಿಲ್ಸ್ ಕೂಡ ಕುಸಿಯುತ್ತಂತೆ; ಭೂ ವಿಜ್ಞಾನಿಗಳಿಂದ ಹೊರ ಬಿತ್ತು ಆತಂಕಕಾರಿ ವಿಷಯ
ನಂದಿ ಹಿಲ್ಸ್
Vinay Kashappanavar
| Edited By: |

Updated on: Oct 10, 2024 | 2:44 PM

Share

ಬೆಂಗಳೂರು, ಅ.10: ವಾರಾಂತ್ಯ, ರಜೆ ಇದ್ದಾಗ ಮೊದಲು ನೆನಪಾಗುವುದೇ ನಂದಿ ಹಿಲ್ಸ್. ಚಿಕ್ಕಬಳ್ಳಾಪುರದ ನಂದಿ ಹಿಲ್ಸ್ (Nandi Hills) ಅಂದ್ರೆ ಚಾರಣಿಗರಿಗೆ ಫೇವರೆಟ್ ಜಾಗ. ಆದರೆ ಇದೀಗ ಶಾಕಿಂಗ್ ಸಂಗತಿಯೊಂದು ಹೊರ ಬಿದ್ದಿದೆ. ನಂದಿ ಹಿಲ್ಸ್ ಜನರಿಗೆ ಸೇಫಲ್ವಾ ಎಂದು ತಜ್ಞರು ಹೇಳುತ್ತಿದ್ದಾರೆ. ವಯನಾಡು ಬಳಿಕ ಈಗ ನಂದಿ ಹಿಲ್ಸ್ ಕುಸಿಯುವ ಆತಂಕವಿದೆ ಎನ್ನಲಾಗುತ್ತಿದೆ. ನಂದಿ ಹಿಲ್ಸ್ ಅಪಾಯದ ಅಂಚಿಗೆ ತಲುಪಿದೆ ಎಂದು ಭೂ ವಿಜ್ಞಾನಿಗಳು (Geoscientists)  ನಂದಿಹಿಲ್ಸ್ ಬಗ್ಗೆ ಆತಂಕ ಹೊರ ಹಾಕಿದ್ದಾರೆ.

ನಂದಿ ಹಿಲ್ಸ್ ಹೋಗೋ ಜನರೇ ಹುಷಾರ್ ಹುಷಾರ್. ವಯನಾಡು ರೀತಿಯೇ ನಂದಿ ಹಿಲ್ಸ್​ನಲ್ಲಿ ಭೂಕುಸಿತವಾಗಲಿದೆ ಎಂಬ ಬೆಚ್ಚಿ ಬೀಳಿಸುವ ವರದಿಯನ್ನು ಭೂ ವಿಜ್ಞಾನಿಗಳು ಸಿದ್ಧ ಪಡಿಸಿದ್ದಾರೆ. ನಂದಿ ಹಿಲ್ಸ್ ಮೇಲೆ ಪ್ರವಾಸಿಗರ ಸಂಖ್ಯೆ, ರೆಸಾರ್ಟ್ ಹಾಗೂ ಪ್ರಕೃತಿಯ ಒತ್ತಡ ಹೆಚ್ಚಿದ ಹಿನ್ನೆಲೆ ಭೂಕುಸಿತವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಂದಿ ಹಿಲ್ಸ್‌ನಲ್ಲಿ ಪ್ರಕೃತಿ ನಾಶವಾಗ್ತಿದೆ. ರೆಸಾರ್ಟ್, ಹೋಟೆಲ್​ಗಳು ಹೆಚ್ಚಾಗ್ತಿವೆ. ಇದರಿಂದ ಪ್ರಕೃತಿ ಮುನಿಸಿಕೊಳ್ಳುವ ಮುನ್ಸೂಚನೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನಮ್ಮ ಪರಿಸರ ನಾಶದಿಂದ ನಂದಿ ಹಿಲ್ಸ್ ಗೆ ಅಪಾಯವಿದೆ. ಈ ಹಿನ್ನೆಲೆ‌ ಕಮರ್ಶಿಯಲ್ ಯೋಚನೆ ನಿಲ್ಲಿಸಿ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ. ಪರಿಸರವಾದಿಗಳು ಹಾಗೂ ಭೂ ವಿಜ್ಞಾನಿಗಳು ಸೇವ್ ನಂದಿ ಹಿಲ್ಸ್ ಎಂಬ ಅಭಿಯಾನ ಆರಂಭಿಸಿದ್ದಾರೆ. ಪರಿಸರವಾದಿ ಯಲ್ಲಪ್ಪ ರೆಡ್ಡಿ ಸೇರಿದಂತೆ ಅನೇಕರು ನಂದಿ ಹಿಲ್ಸ್ ಉಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾಗೂ ಭೂ ಕುಸಿತದ ತೀವ್ರತೆಯನ್ನ ಅರಿಯುವಂತೆ ಒತ್ತಾಯಿಸಿದ್ದಾರೆ. ಕೂಡಲೆ ನಂದಿ ಹಿಲ್ಸ್ ಪ್ರದೇಶವನ್ನು ಉಳಿಸುವಂತೆ ಸರ್ಕಾರಕ್ಕೆ ತಜ್ಞರಿಂದ ಅಧ್ಯಯನದ ವರದಿ ಸಲ್ಲಿಕೆಗೆ ಪರಿಸರವಾದಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬಿಯರ್ ಮಾರಾಟ ಭರ್ಜರಿ ಹೆಚ್ಚಳ: ಅಬಕಾರಿ ಇಲಾಖೆಗೆ ಹರಿದುಬಂತು ಆದಾಯ

ನಂದಿ ಬೆಟ್ಟ ಉಳಿಸಿ ಎಂದು ಅಭಿಯಾನ

ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನವು ನಂದಿ ಬೆಟ್ಟ ಉಳಿಸಿ ಎಂಬ ಅಭಿಯಾನದ ಕುರಿತು ಖಾಸಗಿ ಹೋಟೆಲ್ ನಲ್ಲಿ ಪತಿಕ್ರಾಗೋಷ್ಠಿ ನಡೆಸಿದ್ದು ತಜ್ಞರ ವರದಿಯಿಂದ ಹೊರ ಬಿದ್ದ ಆತಂಕಕಾರಿ ಅಂಶದ ಬಗ್ಗೆ ವಿವರಿಸಿದ್ದಾರೆ. ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ನಿರ್ಮಾಪಕ ಬಾಬು ರಾಜೇಂದ್ರ ಪ್ರಸಾದ್, ನಿರ್ದೇಶಕ ಆರ್ ಚಂದ್ರ, ಭೂ ವಿಜ್ಞಾನಿಗಳು, ಸೇರಿದ್ದಂತೆ ಅನೇಕ ಸಾಮಾಜಿಕ ಹೋರಾಟಗಾರರು ಪತಿಕ್ರಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ನಂದಿ ಬೆಟ್ಟ ಇತಿಹಾಸ, ಪೌರಾಣಿಕ, ಜೀವ ವೈವಿಧ್ಯತೆ ಹೊಂದಿದೆ. ಹೀಗಾಗಿ ನಂದಿ ಬೆಟ್ಟವನ್ನು ಉಳಿಸಿ ಎಂದು ನಾವು ಹೋರಾಟ ಮಾಡ್ತೇವೆ. ನಂದಿ ಬೆಟ್ಟ ಐದು ನದಿಗಳ ಮೂಲ ಹೊಂದಿರುವ ಬೆಟ್ಟ. ಆದ್ರೆ ವಿಪರ್ಯಾಸವೆಂದರೆ ಒಂದು ಲೀಟರ್ ನೀರಿಗಾಗಿ 50 ರೂ ಕೊಟ್ಟು ನೀರು ಕುಡಿಯುತ್ತೇವೆ ಎಂದು ಹೋರಾಟಗಾರರು ಆಕ್ರೋಶ ಹೊರ ಹಾಕಿದರು. ಇನ್ನು ತಜ್ಞರು ನಂದಿ ಹಿಲ್ಸ್ ಅಳಿವಿನ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಂದಿ ಉಳಿಸಿ ಎಂದು ಸರ್ಕಾರದ 11 ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವ ಇಲಾಖೆಯಿಂದ ಸರಿಯಾಗಿ ರೆಸ್ಪಾನ್ಸ್ ಬಂದಿಲ್ಲ. ಹೀಗಾಗಿ ಹೋರಾಟಗಾರರು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ