ಬೆಂಗಳೂರು: ಅಪ್ರಾಪ್ತ ಮಗಳ ಜೊತೆ ಸೇರಿಕೊಂಡು ಸೈಕಲ್ ಕದಿಯುತ್ತಿದ್ದ ಮಲತಂದೆ ಅರೆಸ್ಟ್
ಆರೋಪಿ ಮೊಹಮ್ಮದ್ ಫಯಾಜ್ ಉದ್ದೀನ್ ತನ್ನ ಮಗಳನ್ನು ಜೊತೆಯಾಗಿಸಿಕೊಂಡು ಬೆಂಗಳೂರಿನ ಅಪಾರ್ಟ್ಮೆಂಟ್ಗಳಲ್ಲಿ ಸೈಕಲ್ ಕದಿಯುತ್ತಿದ್ದ. ಸದ್ಯ ತಂದೆ-ಮಗಳ ಕೃತ್ಯ ಬಯಲಾಗಿದ್ದು ಪೊಲೀಸರು ತಂದೆಯನ್ನು ಬಂಧಿಸಿ 15 ವರ್ಷದ ಅಪ್ರಾಪ್ತೆ ವಿರುದ್ಧವೂ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಬೆಂಗಳೂರು, ಅ.10: ಅಪ್ರಾಪ್ತ ಮಗಳ ಜೊತೆ ಸೇರಿಕೊಂಡು ಸೈಕಲ್ ಕದಿಯುತ್ತಿದ್ದ ಮಲತಂದೆಯನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೊಹಮ್ಮದ್ ಫಯಾಜ್ ಉದ್ದೀನ್ ತನ್ನ ಮಗಳನ್ನು ಜೊತೆಯಾಗಿಸಿಕೊಂಡು ಬೆಂಗಳೂರಿನ ಅಪಾರ್ಟ್ಮೆಂಟ್ಗಳಲ್ಲಿ ಸೈಕಲ್ ಕದಿಯುತ್ತಿದ್ದ. ಸದ್ಯ ತಂದೆ-ಮಗಳ ಕೃತ್ಯ ಬಯಲಾಗಿದ್ದು ಪೊಲೀಸರು ತಂದೆಯನ್ನು ಬಂಧಿಸಿ 15 ವರ್ಷದ ಅಪ್ರಾಪ್ತೆ ವಿರುದ್ಧವೂ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಅಪಾರ್ಟ್ಮೆಂಟ್ಗಳಿಗೆ ಹೋಗಿ ಲಾಕ್ ಮಾಡದಿರುವ ಸೈಕಲ್ಗಳನ್ನು ಈ ಆರೋಪಿಗಳು ಕಳವು ಮಾಡುತ್ತಿದ್ದರು. ಆರೋಪಿ ಮೊಹಮ್ಮದ್ ಸೈಕಲ್ ಕಳ್ಳತನಕ್ಕೆ ಅಪ್ರಾಪ್ತೆ ಮಗಳನ್ನು ಕರೆದೊಯ್ಯುತ್ತಿದ್ದ. ಮಗಳು ಸೈಕಲ್ ತುಳಿದುಕೊಂಡು ಬಂದರೆ ಅನುಮಾನ ಬರ್ತಿರಲಿಲ್ಲ. ಹಾಗಾಗಿ ಮಗಳನ್ನು ಸೈಕಲ್ ಕದಿಯಲು ಕರೆದೊಯ್ಯುತ್ತಿದ್ದ. ಬಂಧಿತನಿಂದ ಒಟ್ಟು 22 ಸೈಕಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿಯನ್ನು ಕೊಲೆ ಮಾಡಿದ್ದ ಮಗನಿಗೆ ಜೀವಾವಧಿ ಶಿಕ್ಷೆ
ತಾಯಿಯನ್ನು ಕೊಲೆ ಮಾಡಿದ್ದ ಮಗನಿಗೆ ಜೀವಾವಧಿ ಶಿಕ್ಷೆ ನೀಡಿ ತುಮಕೂರು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಕುಣಿಗಲ್ ತಾಲೂಕಿನ ಹಂಗರಹಳ್ಳಿ ಗ್ರಾಮದ ನಿವಾಸಿ ವಿರುಪಾಕ್ಷ ಬುದ್ಧಿವಾದ ಹೇಳಿದ್ದ ತಾಯಿ ಜಯಮ್ಮರನ್ನು ಕೊಲೆ ಮಾಡಿದ್ದ. ಸದ್ಯ ತಾಯಿಯನ್ನು ಕೊಂದಿದ್ದ ಮಗ ವಿರುಪಾಕ್ಷಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ದಸರಾ, ದೀಪಾವಳಿ ವೇಳೆ ಘನತ್ಯಾಜ್ಯ ನಿರ್ವಹಣೆ ಸಂಬಂಧ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ
2021 ಜ.15ರಂದು ರಾತ್ರಿ ವಿರುಪಾಕ್ಷ ತಾಯಿಯನ್ನ ಕೊಲೆ ಮಾಡಿದ್ದ. ಪುತ್ರ ವಿರುಪಾಕ್ಷ ಕೆಲಸ ಮಾಡದೆ ಮನೆಯಲ್ಲೇ ಇರುತ್ತಿದ್ದ. ತಾಯಿ ಜಯಮ್ಮ ಹೂವು, ಹಾಲು ಮಾರಿ ಜೀವನ ಸಾಗಿಸುತ್ತಿದ್ದರು. ವಿರುಪಾಕ್ಷ ಹಣಕ್ಕಾಗಿ ತಾಯಿಯನ್ನು ಪೀಡಿಸಿ ನಿತ್ಯ ಗಲಾಟೆ ಮಾಡ್ತಿದ್ದ. ಹಣ ನೀಡಲು ನಿರಾಕರಿಸಿ ಮಗನಿಗೆ ಬುದ್ಧಿವಾದ ಹೇಳಿದ್ದಕ್ಕೆ ಜಯಮ್ಮ ಮಲಗಿದ್ದಾಗ ತಲೆ ಮೇಲೆ ಗುಂಡುಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ.
ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಗುರುಪ್ರಸಾದ್ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿ ನ್ಯಾ.ವೈ.ಎಲ್.ಲಡಖಾನ್ ಶಿಕ್ಷೆ ಪ್ರಕಟಿಸಿದ್ದಾರೆ. ಅಪರಾಧಿಗೆ ಐಪಿಸಿ 302ರಡಿಯಲ್ಲಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಸರ್ಕಾರಿ ವಕೀಲರಾದ T.R.ಅರುಣ್, K.C.ದೀಪಕ್ ವಾದ ಮಂಡಿಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ