ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ BBMP; ಎಲ್ಲೆಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ?

ಬಿಬಿಎಂಪಿ ಗುರುತು ಮಾಡಿದ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಒಂದು ವಲಯದಲ್ಲಿ 2 ಅಥವಾ 3 ಮೈದಾನದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಒಂದು ಮೈದಾನದಲ್ಲಿ 10 ಮಳಿಗೆಗಳನ್ನು ತೆರೆಯಬೇಕು. ಜೊತೆಗೆ ಪ್ರತಿ ಮಳಿಗೆಯ ನಡುವೆ ಮೂರರಿಂದ 4 ಅಡಿ ಅಂತರವಿದ್ದು, ಬೆಂಕಿ ನಂದಿಸುವ ಉಪಕರಣ ಕೂಡ ಕಡ್ಡಾಯವಾಗಿ ಇರಬೇಕು.

ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ BBMP; ಎಲ್ಲೆಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ?
ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ ನೀಡಿದ ಬಿಬಿಎಂಪಿ
Follow us
Poornima Agali Nagaraj
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 02, 2023 | 4:37 PM

ಬೆಂಗಳೂರು, ನ.02: ಅತ್ತಿಬೆಲೆ ಪಟಾಕಿ ದುರಂತ ಬಳಿಕ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ದೀಪಾವಳಿ(Diwali) ಹಬ್ಬಕ್ಕೆ ಬಿಬಿಎಂಪಿ(BBMP) ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೌದು, ಇತ್ತೀಚೆಗಷ್ಟೇ ಪಟಾಕಿ ಗೋಡೌನ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 14 ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಈ ಹಿನ್ನಲೆ ಇದೀಗ ಧಾರ್ಮಿಕ ಮೈದಾನಗಳು, ಶಾಲಾ ಕಾಲೇಜಿನ ಮೈದಾನಗಳು, ಕೇಂದ್ರ-ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಕಾರ್ಖಾನೆ, ರಕ್ಷಣಾ ಇಲಾಖೆ ಮೈದಾನಗಳು ಸೇರಿದಂತೆ ಖಾಸಗಿ ಮೈದಾನಗಳಲ್ಲೂ ಪಟಾಕಿ ಮಾರಾಟವನ್ನು ನಿರ್ಬಂಧಿಸಲಾಗಿದೆ.

BBMP ಗುರುತಿಸಿದ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ

ಹೌದು, ಬಿಬಿಎಂಪಿ ಗುರುತು ಮಾಡಿದ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಒಂದು ವಲಯದಲ್ಲಿ 2 ಅಥವಾ 3 ಮೈದಾನದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಒಂದು ಮೈದಾನದಲ್ಲಿ 10 ಮಳಿಗೆಗಳನ್ನು ತೆರೆಯಬೇಕು. ಜೊತೆಗೆ ಪ್ರತಿ ಮಳಿಗೆಯ ನಡುವೆ ಮೂರರಿಂದ 4 ಅಡಿ ಅಂತರವಿದ್ದು, ಬೆಂಕಿ ನಂದಿಸುವ ಉಪಕರಣ ಕೂಡ ಕಡ್ಡಾಯವಾಗಿ ಇರಬೇಕು. ಪಟಾಕಿ ಮಾರುವವರು ಮಳಿಗೆಯ ಪರವಾನಗಿ ಪ್ರದರ್ಶಿಸಬೇಕು. ಯಾರಾದರೂ ಅವಧಿ ಮುಗಿದ ಪಟಾಕಿ ಮಾರಾಟ ಮಾಡಿದರೆ ದಂಡ ವಿಧಿಸುವಂತೆ ಸೂಚಿಸಿದೆ.

ಇದನ್ನೂ ಓದಿ:ರಸ್ತೆ ಗುಂಡಿ ಮುಚ್ಚಲು ಪ್ರತಿ ವಾರ್ಡ್​ಗೆ 15 ಲಕ್ಷ ರೂ ಬಿಡುಗಡೆ ಮಾಡಿದ ಬಿಬಿಎಂಪಿ, ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಹಂಚಿಕೆ

70 ಮೈದಾನನದಲ್ಲಿ 426 ಪಟಾಕಿ ಮಳಿಗೆಗೆ ಒಪ್ಪಿಗೆ

ಇನ್ನು ದೀಪಾವಳಿ ಹಬ್ಬಕ್ಕೆ ಕೌಂಡ್ ಡೌನ್ ಆರಂಭವಾಗಿದೆ. ಪಟಾಕಿ ಮಾರಾಟ ವಿಚಾರಕ್ಕೆ ಕೆಲ ಪಾಲಿಕೆಯಿಂದ ಮುನ್ನೆಚ್ಚರಿಕೆಯಾಗಿ 70 ಮೈದಾನನದಲ್ಲಿ 426 ಪಟಾಕಿ ಮಳಿಗೆಗೆ ಒಪ್ಪಿಗೆ ದೊರೆತಿದೆ. ಆಯಾ ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರಿಂದ ಸುರಕ್ಷತೆ ಪರಿಶೀಲನೆ ನಡೆಸಿ ಮಳಿಗೆ ಸ್ಥಾಪನೆಗೆ ಅವಕಾಶ ನೀಡಲಾಗಿದೆ. ಕಳೆದ ವರ್ಷ 501 ಪಟಾಕಿ ಮಾರಾಟ ಮಳಿಗೆ ಸ್ಥಾಪನೆ ಮಾಡಲಾಗಿತ್ತು. ಆದರೆ, ಈ ಬಾರಿ‌ ಮಾರಾಟ ಮಳಿಗೆಯನ್ನು ಕಡಿಮೆ ಮಾಡಲಾಗಿದೆ.

ಪಟಾಕಿ ಮಳಿಗೆಗೆ ಎಲ್ಲಿ ಒಪ್ಪಿಗೆ ದೊರೆತಿದೆ

  • ದಕ್ಷಿಣ ವಲಯದ 9 ಮೈದಾನದಲ್ಲಿ 87 ಮಳಿಗೆ
  • ಮಹದೇವಪುರವಲಯದ 13 ಮೈದಾನ 50 ಮಳಿಗೆ
  • ಬೊಮ್ಮನಹಳ್ಳಿ ವಲಯದ 3 ಮೈದಾನ ಆರು‌ಮಳಿಗೆ
  • ಪಶ್ಚಿಮ ವಲಯದ ನಾಲ್ಕು ಮೈದಾನ 63 ಮಳಿಗೆ
  • ಪೂರ್ವ ವಲಯದ 23 ಮೈದಾನ101 ಮಳಿಗೆ
  • ದಾಸರಹಳ್ಳಿ ವಲಯದ ಎರಡು ಮೈದಾನ 18 ಮಳಿಗೆ

ಇನ್ನು ಇದರ ಜೊತೆಗೆ ಆರ್ ಆರ್ ನಗರ ವಲಯದಲ್ಲಿ 5 ಮೈದಾನವನ್ನು ಗುರುತಿಸಿ 62 ತಾತ್ಕಾಲಿಕ ಮಳಿಗೆಗೆ ಅವಕಾಶ ನೀಡಲಾಗಿದೆ. ಸದ್ಯ ಸುರಕ್ಷತೆ ಬಗ್ಗೆ ಪರಿಶೀಲನೆ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್