Bengaluru News: 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಆರ್ಐ
ಬಿಬಿಎಂಪಿ ಮಹದೇವಪುರ ಕಂದಾಯ ಇಲಾಖೆ ಮೇಲೆ ಲೋಕಾಯುಕ್ತ ದಾಳಿ ಅಧಿಕಾರಿಗಳು ದಾಳಿ ಮಾಡಿದ್ದು ಈ ವೇಳೆ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಬಿಬಿಎಂಪಿ ಕಂದಾಯ ನಿರೀಕ್ಷಕ (Revenue Inspector) ನಟರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು, ಆ.4: ಬಿಬಿಎಂಪಿ ಮಹದೇವಪುರ ಕಂದಾಯ ಇಲಾಖೆ ಮೇಲೆ ಲೋಕಾಯುಕ್ತ ದಾಳಿ ಅಧಿಕಾರಿಗಳು ದಾಳಿ ಮಾಡಿದ್ದು ಈ ವೇಳೆ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಕಂದಾಯ ನಿರೀಕ್ಷಕ (Revenue Inspector) ನಟರಾಜ್ ಲೋಕಾಯುಕ್ತ(Lokayukta)ಬಲೆಗೆ ಬಿದ್ದಿದ್ದಾರೆ. ಹೌದು, ಖಾಸಗಿ ವ್ಯಕ್ತಿ ಪವನ್ ಮೂಲಕ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಇನ್ನು ನಟರಾಜ್ ಫ್ಲ್ಯಾಟ್ ಖಾತೆ ಮಾಡಿಕೊಡಲು 1 ಫ್ಲ್ಯಾಟ್ಗೆ 10 ಸಾವಿರದಂತೆ 79 ಫ್ಲ್ಯಾಟ್ಗೆ 7.90 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ. ಅದರಂತೆ ಮುಂಗಡವಾಗಿ 5 ಲಕ್ಷ ರೂ. ಲಂಚ ಪಡೆಯುವಾಗ ಬಿಬಿಎಂಪಿ ಆರ್ಐ ನಟರಾಜ್, ಆರೋಪಿ ಪವನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಫುಡ್ ಇನ್ಸ್ಪೆಕ್ಟರ್
ಕಳೆದ ಜುಲೈ 15 ರಂದು ಬೆಂಗಳೂರು ನಗರದ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಹಾರ ನಿರೀಕ್ಷಕ ಮಹಾಂತೇಗೌಡ ಬಿ ಕಡಬಾಳು ಎನ್ನುವವರು ರಂಗದಾಮಯ್ಯ ಎಂಬುವರ ಬಳಿ ಟ್ರೇಡ್ ಲೈಸೆನ್ಸ್ ಚೆಕ್ ಮಾಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡ ಹಣ 43ಸಾವಿರ ನಗದನ್ನು ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಬಳಿಕ ತನ್ನ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆಂದು ತಿಳಿದ ಕೂಡಲೇ ತಮ್ಮ ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದರು.
ಚೇಸ್ ಮಾಡಿ ಹಿಡಿದಿದ್ದ ಲೋಕಾಯುಕ್ತ ಅಧಿಕಾರಿಗಳು
ಇನ್ನು ಲೋಕಾಯುಕ್ತ ದಾಳಿ ಮಾಡುತ್ತಿದ್ದಂತೆ ಫುಡ್ ಇನ್ಸ್ಪೆಕ್ಟರ್ ಕಾರು ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸುಮಾರು 15 ಕಿ.ಮೀ ವರೆಗೆ ಹಿಂಬಾಲಿಸಿ ನೆಲಮಂಗಲದ ಸೊಂಡೆಕೊಪ್ಪ ರಸ್ತೆ ಬಳಿ ಲೋಕಾಯುಕ್ತ ಅಧಿಕಾರಿಗಳು ಸುತ್ತುವರೆದಿದ್ದರು. ಆದರೂ ಕೂಡ ಅಧಿಕಾರಿಗಳ ಮೇಲೆ ವಾಹನವನ್ನು ಚಲಾಯಿಸಲು ಪ್ರಯತ್ನಿಸಿದ್ದರು. ಕೊನೆಗೆ ಮತ್ತೊಂದು ಕಾರನ್ನು ಬಳಸಿ ಅವರನ್ನು ಹಿಡಿದ ಘಟನೆ ನಡೆದಿತ್ತು. ಇದೀಗ ಅದರ ಬೆನ್ನಲ್ಲೇ ಬಿಬಿಎಂಪಿ ಕಂದಾಯ ನಿರೀಕ್ಷಕ ಸಿಕ್ಕಿಬಿದ್ದಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Fri, 4 August 23